ಧಾರವಾಡ : ಧಾರವಾಡದ ಅತ್ತಿಕೊಳ್ಳದ ನಿವಾಸಿ ಅಮೀರಹ್ಮದ ಶೇಖ್ ಎಂಬುವವರು ಏಪ್ರೀಲ್ 2018ರಲ್ಲಿ ಮಹೀಂದ್ರಾ ಫೈನಾನ್ಸ್ ಅವರಿಂದ ಲೋನ ಮಾಡಿ ಹೊಸ ಕಾರನ್ನು, ಬೆಲ್ಲದ ಅಟೊಮೊಬೈಲ್ ಹುಬ್ಬಳ್ಳಿ ಇವರಿಂದ ಖರೀದಿಸಿದ್ದರು.


COMMERCIAL BREAK
SCROLL TO CONTINUE READING

ಬೆಲ್ಲದ ಕಂಪನಿಯವರು ಆರಂಭದಲ್ಲಿ ಸದರಿ ವಾಹನಕ್ಕೆ ತಾತ್ಕಾಲಿಕ ನೋಂದಣಿ ಮಾಡಿಸಿಕೊಟ್ಟಿದ್ದರು. ಆದರೆ ಕೋವಿಡ್-19 ಹಾಗೂ ಮತ್ತಿತರೇ ಕಾರಣಗಳಿಂದ ದೂರುದಾರ ಸದರಿ ವಾಹನಕ್ಕೆ ಆರ್.ಟಿ.ಓ. ರವರಿಂದ ಖಾಯಂ ನೋಂದಣಿ ಮಾಡಿಸಿಕೊಂಡಿರಲಿಲ್ಲ. ತದನಂತರ ವಾಹನದ ನೋಂದಣಿ ಮಾಡಿಕೊಡುವಂತೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ಮತ್ತು ಪೆನಾಲ್ಟಿ ಖರ್ಚುಗಳಿಗಾಗಿ ರೂ.1,05,850/-ಗಳ ಡಿ.ಡಿ. ಮೂಲಕ ದಿ:08/01/2021 ರಂದು ಆರ್.ಟಿ.ಓ. ಅಧಿಕಾರಿಯನ್ನು ಕೋರಿದ್ದರು. ಆದರೂ ಅವರು ತನ್ನ ವಾಹನಕ್ಕೆ ಖಾಯಂ ನೋಂದಣಿ ಮಾಡಿಕೊಟ್ಟಿರಲಿಲ್ಲ. ಆ ರೀತಿ ನೋಂದಣಿ ಮಾಡದೇ ಇರುವುದರಿಂದ ತನಗೆ ತೊಂದರೆಯಾಗಿ ಸೇವಾ ನ್ಯೂನ್ಯತೆ ಆಗಿದೆ ಅಂತಾ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಮಹದಾಯಿ ಯೋಜನೆ: ಡಬಲ್‌ ಎಂಜಿನ್‌ ಸರ್ಕಾರದಿಂದ ವಂಚನೆ


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ದೂರುದಾರರ ತನ್ನ ಕಾರನ್ನು ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಸದ ಕಾರಣ ಸದರಿ ವಾಹನವನ್ನು ರಸ್ತೆಯ ಮೇಲೆ ಅವನಿಗೆ ಓಡಿಸಲು ಅಗುತ್ತಿಲ್ಲ.ಆ ಕಾರಣದಿಂದ ಅವನು ವಾಹನ ಖರೀದಿ ಮಾಡಿದ ಉದ್ದೇಶ ವಿಫಲವಾಗಿ ಅದರಿಂದ ದೂರುದಾರನಿಗೆ ಬಹಳ ತೊಂದರೆಯಾಗಿದೆ ಅನ್ನುವುದನ್ನು ಮನಗಂಡು ನ್ಯಾಯತಾ ದೃಷ್ಟಿಯಿಂದ ಅದಕ್ಕೆ ಸಂಬಂಧಿಸಿದ ತೆರಿಗೆ, ನೋಂದಣಿ ಶುಲ್ಕ, ಪೆನಾಲ್ಟಿ ಪಡೆದುಕೊಂಡು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸದರಿ ವಾಹನದ ಖಾಯಂ ನೋಂದಣಿ ಮಾಡಿಕೊಡುವಂತೆ ಆರ್.ಟಿ.ಓ. ಕಛೇರಿಗೆ ಗ್ರಾಹಕರ ಆಯೋಗ ನಿರ್ದೇಶನ ನೀಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.