ಧಾರವಾಡ: ಬಳ್ಳಾರಿ ಜಿಲ್ಲೆ ಸಂಡೂರು ವಾಸಿಯಾದ ರವಿಕುಮಾರ ಕಲಾಲ ರವರು 2015 ನೇ ಇಸವಿಯಲ್ಲಿ ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಕೆಲಸ ಮಾಡುವಾಗ ಅಲ್ಪವಯಿ ತಮ್ಮ ಮಗ ರಾಮಚಂದ್ರರಾವ ಅವರ ಹೆಸರಿನಲ್ಲಿ ರೂ.1,64,500ಗಳ ಹಣವನ್ನು ಗುಡಗೇರಿಯ ಅರ್ಬನ್ ಕೋ ಆಪ್‍ರೇಟಿವ್ ಸೊಸೈಟಿಯಲ್ಲಿ ಠೇವಣಿಯಾಗಿ ಇಟ್ಟಿದ್ದರು.


COMMERCIAL BREAK
SCROLL TO CONTINUE READING

ಒಂದು ವರ್ಷದ ನಂತರ ಆ ಹಣದ ಮೇಲೆ ಶೇ8.6%ರಂತೆ ಬಡ್ಡಿ ಹಾಕಿಕೊಡಲು ಸೋಸೈಟಿಯವರು ಒಪ್ಪಿದ್ದರು. 2016ರಕ್ಕೆ ಠೇವಣಿ ಅವಧಿ ಮುಗಿದಿತ್ತು. ಆದರೂ ಬಡ್ಡಿ ಸಮೇತ ಠೇವಣಿ ಹಣವನ್ನು ಎದುರುದಾರ ಸೋಸೈಟಿಯವರು ದೂರುದಾರರಿಗೆ ನೀಡಿರಲಿಲ್ಲ. ಅದರಿಂದತನ್ನ ಮಗನ ಭವಿಷ್ಯಕ್ಕೆ ತೊಂದರೆಯಾಗಿದೆ ಮತ್ತು ಎದುರುದಾರ ರಿಂದ ತಮಗೆ ಅನ್ಯಾಯವಾಗಿ, ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಸದರಿ ಅರ್ಬನ್ ಸೋಸೈಟಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ


ಕೊವಿಡ್-19ರ ಕಾರಣದಿಂದ ಸೊಸೈಟಿಗೆ ಆರ್ಥಿಕ ನಷ್ಟ ಉಂಟಾಗಿ ಅದರ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ದೂರುದಾರರ ಹಣಕೊಡಲು ಆಗುತ್ತಿಲ್ಲ ಅಂತಾ ಹೇಳಿ ದೂರನ್ನು ವಜಾ ಮಾಡುವಂತೆ ಅರ್ಬನ್ ಕೋ ಆಪ್‍ರೇಟಿವ್ ಸೋಸೈಟಿಯವರು ಆಕ್ಷೇಪಣೆ ಎತ್ತಿದ್ದರು. ಅವರ ದೂರು ಮತ್ತು ಆಕ್ಷೇಪಣೆಯನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ದೂರುದಾರರ ಠೇವಣಿ ಅವಧಿ 2016ರಲ್ಲೇ ಮುಗಿದಿದ್ದರೂ ಈವರೆಗೆ ಅವರ ಠೇವಣಿ ಹಣ ಮತ್ತು ಅದರ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಿ ಕೊಡದೇ ಎದುರುದಾರ ಸೋಸೈಟಿಯವರು ದೂರುದಾರರಿಗೆ ತೊಂದರೆ ಮಾಡಿ ಗ್ರಾಹಕ ಹಿತರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ಇದನ್ನೂ ಓದಿ: ಈ ಬಾರಿ ಬಿಜೆಪಿ ಸೋಲಿಸಿ ಜನರು ಮತ್ತೆ ಕಾಂಗ್ರೆಸ್‍ಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ: ಸಿದ್ದರಾಮಯ್ಯ


ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ಠೇವಣಿ ಹಣ ರೂ.1,64,500ಗಳನ್ನು ಮತ್ತು ಅದರ ಮೇಲೆ ದಿ:01/11/2015 ರಿಂದ ಈ ದೂರು ದಾಖಲಾದ ದಿ:02/08/2022ರವರೆಗೆ ಶೇ8.6% ರಂತೆ ಬಡ್ಡಿ ಲೆಕ್ಕ ಮಾಡಿಕೊಡುವಂತೆ ಮತ್ತು ದೂರು ದಾಖಲಾದಾಗಿನಿಂದ ಪೂರ್ತಿ ಹಣ ಸಂದಾಯ ಮಾಡುವವರೆಗೆ ಶೇ8% ರಂತೆ ಬಡ್ಡಿಆಕರಣೆ ಮಾಡಿ ಪ್ರಕರಣದ ಖರ್ಚು ಅಂತಾ ರೂ.5,000ಗಳನ್ನು ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.