ಧಾರವಾಡ: ಗಾಂಧಿನಗರದ ನಿವಾಸಿ ರೋಹಿಣಿ ಜಾಧವ ಎಂಬುವರು 2017ನೇ ಇಸ್ವಿಯಲ್ಲಿ ಎದುರುದಾರಾದ ಪೃಥ್ವಿ ಬಿಲ್ಡರ್ಸ್ ಕಡೆಯಿಂದ ತಡಸಿನಕೊಪ್ಪ ಗ್ರಾಮದ ಲೇಔಟ್‍ನ ಪ್ಲಾಟ್ ನಂ. 12ನ್ನು ರೂ.9,25,000/-ಗೆ ಖರೀದಿಸಿ ಅದರ ಪೈಕಿ ರೂ. 5,10,000/- ಹಣವನ್ನು ಮುಂಗಡವಾಗಿ ಕೊಟ್ಟಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದು ಹೆಸರು ಘೋಷಣೆ : ಡಿಕೆಶಿ ತವರಲ್ಲಿ ಖಾಕಿ ಹೈ ಅರ್ಲಟ್‌



ಇದನ್ನೂ ಓದಿ: ಸಂಪೂರ್ಣ ಬಹುಮತವಿದ್ದರೂ ಕಾಂಗ್ರೆಸ್ ಸರ್ಕಾರ ರಚಿಸುತ್ತಿಲ್ಲ. ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ, ಹಿರೇಮಠ ಸದಸ್ಯರು, 2017 ರಲ್ಲಿ ದೂರುದಾರರು ರೂ.5 ಲಕ್ಷ 10 ಸಾವಿರ ರೂ.ಮುಂಗಡ ಹಣಕೊಟ್ಟು ಸೈಟನ್ನು ಖರೀದಿಸಿ ಕರಾರು ಪತ್ರ ಮಾಡಿಕೊಂಡಿದ್ದು ಆ ಸೈಟನ್ನು ಕೊಡದೆ ಆ ಹಣವನ್ನು ಎದುರುದಾರರು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಅವರಿಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ಎದುರುದಾರಿಗೆ ಕೊಟ್ಟ ರೂ.5,10,000/- ಮೇಲೆ 2017 ರಿಂದ ಪೂರ್ತಿ ಹಣ ಸಂದಾಯ ವಾಗುವರೆಗೆ ಶೇ.8 ರಂತೆ ಬಡ್ಡಿಕೊಡಲು ಮತ್ತು ಎದುರುದಾರರ ತಪ್ಪಿನಿಂದ ದೂರುದಾರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000/- ಪರಿಹಾರ ಹಾಗೂ ರೂ. 5,000/- ಪ್ರಕರಣದ ಖರ್ಚು ಕೊಡುವಂತೆ ಆಯೋಗ ಆದೇಶಿಸಿದೆ. ಈ ಪ್ರಕರಣದ ವಿಶೇಷತೆ ಎಂದರೆ ದೂರುದಾರಳು ಆಯೋಗದ ಮುಂದೆ ತನ್ನ ಪ್ರಕರಣವನ್ನು ತಾನೇ ನಡೆಸಿ ಜಯಶೀಲರಾಗಿರುವುದು,


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.