ಚಾಮರಾಜನಗರ: ಬರೋಬ್ಬರಿ 7 ದಿನಗಳಿಂದ ಕಲುಷಿತ ನೀರು (Contaminated Water) ಪೂರೈಕೆ ಆಗುತ್ತಿದ್ದು ಜನರು ಕುಡಿಯಲು ನೀರಿಲ್ಲದೇ ಪರದಾಡುತ್ತಿರುವ ಘಟನೆ ಚಾಮರಾಜನಗರದ 17ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಚಾಮರಾಜನಗರದ 17 ನೇ ವಾರ್ಡ್ ನಲ್ಲಿ ಉಪ್ಪಾರ ಬೀದಿಯಲ್ಲಿ ನೂರಾರು ಮ‌ನೆಗಳಿದ್ದು ಕಳೆದ 1 ವಾರಗಳಿಂದ ಚರಂಡಿ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು  ಕುಡಿಯಲು ಬಳಸಲಾಗದೇ, ಮನೆ ಬಳಕೆಗೂ ಉಪಯೋಗಿಸಲಾರದೇ ಜನರು ಪರದಾಡುತ್ತಿದ್ದಾರೆ.


ಚರಂಡಿ ನೀರು ಮಿಶ್ರಿತ ನೀರು: 
ಕುಡಿಯುವ ನೀರಿನ ಪೈಪ್ (Drinking Water Pipe) ಗೆ ಚರಂಡಿ ನೀರು ಮಿಶ್ರಿತವಾಗುತ್ತಿದ್ದು ದುರ್ವಾಸನೆ ಹಾಗೂ ನೊರೆಯುಕ್ತ ನೀರು ಪೂರೈಕೆ ಮಾಡಲಾಗುತ್ತಿದೆ. ಸ್ನಾನ ಮಾಡಿದರೇ ಮೈ ತುರಿಕೆ ಬರುತ್ತಿದ್ದು ಸ್ನಾನಕ್ಕೂ ಕೂಡ ಈ ನೀರು ಬಳಕೆ ಮಾಡದ ಸ್ಥಿತಿ ಇದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. 


ಇದನ್ನೂ ಓದಿ- ಕೆ.ಸಿ ಜನರಲ್ ಜನಪ್ರಿಯ ಆಸ್ಪತ್ರೆಯಾಗಿಸಲು 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ: ಸಚಿವ ದಿನೇಶ್ ಗುಂಡೂರಾವ್


ಭಾನುವಾರದಂದು ಶಾಸಕ ಸಿ.ಪುಟ್ಟರಂಗಶೆಟ್ಟಿ (MLA Puttaranga Shetty) ವಾರ್ಡ್ ನ ಮನೆಗಳಿಗೆ ಭೇಟಿ ಕೊಟ್ಟು ಕಲುಷಿತ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆದು ನಗರಸಭೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ನೀರು ಪೂರೈಕೆಯಲ್ಲಿ ಬದಲಾವಣೆ ಆಗಿಲ್ಲ.


ಮಕ್ಕಳಿಗೆ ಸೋಂಕು: 
ವಾರ್ಡ್ ನ ನಿವಾಸಿ ಅಶ್ವಿನಿ ಎಂಬವರು ಮಾತನಾಡಿ, ನಾವು  1 ವಾರಗಳಿಂದ ಟ್ಯಾಂಕರ್ ನೀರು (Tanker Water) ತರಿಸಿಕೊಳ್ಳುತ್ತಿದ್ದೇವೆ, ಆ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದರೇ ಸೋಂಕು ಅಂಟುತ್ತಿದೆ,  ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ಈ ಅವಾಂತರ ಸೃಷ್ಟಿಯಾಗಿದೆ, ನಗರಸಭೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.


ಇದನ್ನೂ ಓದಿ- ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ


ಡೆಂಘಿ, ಕಾಲರಾ ಭೀತಿ ಆವರಿಸುತ್ತಿರುವ ಹೊತ್ತಿನಲ್ಲಿ 1 ವಾರದಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದು ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೂಡಲೇ ಪೈಪ್ ಲೈನ್  ದುರಸ್ತಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳಾದ ಜಯಕುಮಾರ್, ರೂಪಾ ಒತ್ತಾಯಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.