ಬೆಂಗಳೂರು: ವಿತ್ತೀಯ ಕೊರತೆ 82981 ಕೋಟಿ ರೂ.ಗಳು ರಷ್ಟಿದ್ದು, ರಾಜ್ಯದ ಜಿಎಸ್ ಡಿ ಪಿಯ 2.95% ರಷ್ಟಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರಲ್ಲಿ ನಿಗದಿಪಡಿಸಿರುವ ಶೇ.3 ರ ಮಿತಿಯೊಳಗೆ ಇದ್ದು, ವಿತ್ತೀಯ ಶಿಸ್ತು ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


COMMERCIAL BREAK
SCROLL TO CONTINUE READING

ಅವರು ಇಂದು 2024-25ನೇ ಸಾಲಿನ ಮುಂಗಡ ಪತ್ರದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.


ಕರ್ನಾಟಕದಲ್ಲಿ  ರಾಜಸ್ವ ಕೊರತೆ 27354 ಕೋಟಿ ರೂಇದ್ದು, 0.97% ರಷ್ಟಿದೆ. ಹೊಣೆಗಾರಿಕೆಯು(Borrowings)  105246 ಕೋಟಿಗಳಿದ್ದು, ಜಿಎಸ್ ಡಿಪಿಯ ಶೇ.23.68ರಷ್ಟಿದೆ. ರಾಜಸ್ವ ಹೆಚ್ಚಳ (Revenue Surplus)ನ್ನು  ಮುಂದಿನ ವರ್ಷದಿಂದ ಸ್ಥಿರಗೊಳ್ಳಲಿದೆ ಎಂದರು.


ರಾಜ್ಯ ಆರ್ಥಿಕವಾಗಿ ಸುಭದ್ರ


2017-2018 ರಿಂದ ಇಲ್ಲಿಯವರೆಗೆ 1,87,000 ಲಕ್ಷ ಕೋಟಿ ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು. 6 ವರ್ಷಗಳಲ್ಲಿ 62000 ಕೋಟಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ಗ್ಯಾರಂಟಿಗಳಿಗೆ 52009 ಕೋಟಿ ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚು ಬೇಕಾದಲ್ಲಿ ನೀಡಲಾಗುವುದು ಎಂದರು.


ಇದನ್ನೂ ಓದಿ: ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ: ನೋಂದಣಿಗೆ ಆಹ್ವಾನ


ಕೇಂದ್ರದಿಂದ ರಾಜ್ಯಕ್ಕೆ ಕೇವಲ 23% ಸ್ವೀಕೃತಿ


ಉತ್ತರ ಪ್ರದೇಶ ರಾಜ್ಯದಿಂದ 49% ತೆರಿಗೆ  ಹೋದರೆ ಕೇಂದ್ರದಿಂದ ಸ್ವೀಕೃತಿ  312280 ಕೋಟಿ ರೂ. ಬರುತ್ತದೆ. ಕರ್ನಾಟಕದಿಂದ 77 % ತೆರಿಗೆ ಕೇಂದ್ರಕ್ಕೆ ಹೋದರೆ ಮುಂದಿನ ವರ್ಷಕ್ಕೆ ರಾಜ್ಯಕ್ಕೆ ಕೇವಲ 59,785 ರೂ. ಅಂದರೆ ಕೇವಲ 23% ಬರುತ್ತದೆ. ಉತ್ತರಪ್ರದೇಶ, ರಾಜಸ್ಥಾನ, ಮದ್ಯಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲು ನಮಗೆ ವಿರೋಧವಿಲ್ಲ. ಆದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂತೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಬಾರದು ಎಂದರು.


ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನ


ಸಾರ್ವತ್ರಿಕ ಮೂಲ ಆದಾಯ ದಂತೆ ಪ್ರತಿಯೊಬ್ಬರಿಗೆ ವಾರ್ಷಿಕವಾಗಿ 50 ರಿಂದ 55 ಸಾವಿರ ರೂ. ಸಿಗುತ್ತದೆ. 155 ಕೋಟಿ ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ತಿರುಗಾಡಿದರೆ , ಅನ್ನಭಾಗ್ಯದಡಿ ಊಟ, ವಿದ್ಯುತ್ ಬಿಲ್ ಕಟ್ಟಬೇಡಿ , 1.17 ಲಕ್ಷ ಮಹಿಳೆಯರಿಗೆ 2000 ರೂ. ತಿಂಗಳಿಗೆ ನೀಡಿದರೆ , ಅದನ್ನು ಬಿಟ್ಟಿ ಭಾಗ್ಯ ಎಂದು ಬಡವರಿಗೆ ಅವಮಾನಿಸಿದ್ದಾರೆ.  ನಮ್ಮ ಆಯವ್ಯಯ  ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲ ಜಾತಿ, ಧರ್ಮಗಳು,  ಸೇರಿದಂತೆ ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಲಿ ಎಂದು ಜಾರಿ ಮಾಡಲಾಗಿದೆ.  ದೂರದೃಷ್ಟಿಯಿರುವ , ಎಲ್ಲರನ್ನೂ ಒಳಗೊಂಡ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.