ವಿವಾದಕ್ಕೆ ಸಾಕ್ಷಿಯಾದ ಪಠ್ಯಪುಸ್ತಕ ಪರಿಷ್ಕರಣೆ: ಹಳೆ ಪುಸ್ತಕ ನೀಡುವಂತೆ ಪೋಷಕರು, ಶಿಕ್ಷಣ ತಜ್ಞರ ಆಗ್ರಹ
ಇದರ ಹಿನ್ನೆಲೆಯಲ್ಲಿ ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ಬೆಂಗಳೂರು: ಪ್ರಸಕ್ತ ಸಾಲಿನ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೂಡಲೇ ಹಿಂಪಡೆದು, ಹಿಂದಿನ ಪಠ್ಯವನ್ನೇ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಯ ಪೋಷಕರ ಸಂಘಟನೆಗಳು ಹಾಗು ಶಿಕ್ಷಣ ತಜ್ಞರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:'ತುರ್ತು ನಿರ್ಗಮನ' ಸಿನಿಮಾದಿಂದ ಅಪ್ಪುಗೆ ಗಾನ ನಮನ...ಹೇಗಿದೆ 'ಜೀವ' ಹಾಡು ಕೇಳಿ ಈಗ?
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಖಾಸಗಿ ಶಾಲಾ-ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯ ಬಿ.ಎನ್.ಯೋಗಾನಂದ್, ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಿತ್ತು. ಈ ಬಾರಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಲ್ಲಿ ಭಗತ್ ಸಿಂಗ್, ನಾರಾಯಣಗುರು, ಪೆರಿಯಾರ್ ಕುರಿತಾದ ಪಠ್ಯಗಳನ್ನು ಹಾಗೂ ಸಾರಾ ಅಬೂಬಕರ್, ಲಂಕೇಶ್, ಡಾ.ಜಿ. ರಾಮಕೃಷ್ಣ ಸೇರಿದಂತೆ ಅನೇಕರ ಬರಹಗಳನ್ನು ತೆಗೆದು ಹಾಕಿ, ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಹೆಸರಿನಲ್ಲಿ ದ್ವೇಷ ಹರಡುವ ಪಠ್ಯಗಳನ್ನು ಕೊಡಲಾಗಿದ ಎಂದು ಖಂಡಿಸಿದರು.Vikrant Rona: ‘ಗಡಂಗ್ ರಕ್ಕಮ್ಮ’ ಎಂಟ್ರಿಗೆ ಡೇಟ್ ಫಿಕ್ಸ್.. ಇಲ್ಲಿದೆ ವಿಕ್ರಾಂತ್ ರೋಣ ಹೊಸ ಅಪ್‌ಡೇಟ್ಸ್
ಕಪ್ಪು ಬಾವುಟ ಪ್ರದರ್ಶನ
ಸರ್ಕಾರ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಅಪಾಯಕಾರಿಯಾದ ಪಠ್ಯಗಳನ್ನು ಸಮರ್ಥಿಸುವ ಮತ್ತು ಅಸಂವಿಧಾನಿಕವಾದ ಪರಿಷ್ಕರಣೆ ಸಮಿತಿಯ ಶಿಪಾರಸ್ಸುಗಳನ್ನು ಪಠ್ಯಪುಸ್ತಕಗಳ ವಿಚಾರದಲ್ಲಿ ಮುಂದುವರೆದರೆ, ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಕಪ್ಪು ಬಾವುಟ ಪ್ರದರ್ಶನದ ಹೋರಾಟ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಲಾಯ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.