ಬೆಂಗಳೂರು: ಸೋಮವಾರ (ಮೇ 15, 2023) ದಂದು ಸಾರ್ವಜನಿಕರಿಗೆ ಸುರಕ್ಷಿತ, ಆರಾಮದಾಯಕ ಸಾಗಾಣಿಕಾ ವ್ಯವಸ್ಥೆಯನ್ನು ಒದಗಿಸುವ ಭಾರತದ ಪ್ರಮುಖ ಅಂತರ್ಗತ ರೈಲು ಉದ್ಯಮವಾದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಸಂಸ್ಥೆ 2022-23ನೇ ಸಾಲಿನ ಸಿಎಸ್ಆರ್ ಯೋಜನೆಯಡಿ ಔಪಚಾರಿಕವಾಗಿ ಫೋರ್ಸ್ ಆಂಬ್ಯುಲೆನ್ಸ್ ವಾಹನವನ್ನು ಡಾ. ಎಂ ಸಿ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಕಿಶೋರ್ ಮಾನೆಯವರಿಗೆ ಕೀ ಹಸ್ತಾಂತರಿಸುವ ಮೂಲಕ ಒದಗಿಸಿದರು.


COMMERCIAL BREAK
SCROLL TO CONTINUE READING

ಈ ಸಮಾರಂಭದಲ್ಲಿ ಚಿತ್ರನಟ ಸಂತೋಷ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತರಾದ ಸೌಭಾಗ್ಯ ಈಶ್ವರಯ್ಯ, ಹಿಟಾಚಿ ರೈಲ್ ಎಸ್‌ಟಿಎಸ್ ವ್ಯಾಪಾರ ಮುಖ್ಯಸ್ಥರಾದ ಶಶಿಧರನ್, ಮತ್ತಿತರರು ಉಪಸ್ಥಿತರಿದ್ದರು.


ಈ ಆಂಬ್ಯುಲೆನ್ಸ್ ವಾಹನವನ್ನು ಬೆಂಗಳೂರಿನ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಮತ್ತು ರೋಗಿಗಳನ್ನು ಸುಗಮವಾಗಿ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗುವ ನಿಟ್ಟಿನಲ್ಲಿ ಡಾ. ಎಂ ಸಿ‌ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಒದಗಿಸಲಾಗಿದೆ. ರೋಗಿಗೆ ಹೆಚ್ಚಿನ ಆರಾಮ ಒದಗಿಸಲು, ಈ ಫೋರ್ಸ್ ಆಂಬ್ಯುಲೆನ್ಸ್ ವಾಹನದಲ್ಲಿ ರೋಗಿಯೊಡನೆ ನಾಲ್ವರು ವ್ಯಕ್ತಿಗಳು ಹಾಗೂ ಆಮ್ಲಜನಕ ಘಟಕ, ಹಾಗೂ ಐಸಿಯು ಸಂಬಂಧಿತ ವ್ಯವಸ್ಥೆ ಹೊಂದಿದೆ.


"ನಾವು ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ ನೀಡಿದ ಬೆಂಬಲ ಮತ್ತು ಸಹಕಾರಕ್ಕೆ ಕೃತಜ್ಞರಾಗಿದ್ದೇವೆ. ಈ ಆಂಬ್ಯುಲೆನ್ಸ್ ವಾಹನ ನಮಗೆ ತುರ್ತು ಅಗತ್ಯವಿರುವ ರೋಗಿಗಳಿಗೆ ಶೀಘ್ರ ಚಿಕಿತ್ಸೆ ಒದಗಿಸಲು ಅನುಕೂಲ ಕಲ್ಪಿಸುತ್ತದೆ" ಎಂದು ಕಿಶೋರ್ ಮಾನೆ ತಿಳಿಸಿದರು.


"ಸಮಾಜಕ್ಕಾಗಿ, ಬಡವರ ಸೇವೆಗಾಗಿ ಅಪಾರ ಕಾರ್ಯ ನಡೆಸುವ ಡಾ. ಎಂ ಸಿ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯ ಜೊತೆ ಸಹಯೋಗ ಹೊಂದಿರುವುದು ನಮಗೆ ಅಪಾರ ಸಂತಸ ಉಂಟುಮಾಡಿದೆ. ಈ ಆಂಬುಲೆನ್ಸ್ ವಾಹನ ಬೆಂಗಳೂರಿನ ಜನರಿಗೆ ನೇತ್ರ ಸಂಬಂಧಿ ಸಮಸ್ಯೆಗೆ ತುರ್ತು ಚಿಕಿತ್ಸೆ ಪಡೆಯಲು ಅನುಕೂಲಕರವಾಗಿದೆ" ಎಂದು ಮನೋಜ್ ಕುಮಾರ್ ಅವರು ಈ ಸಂದರ್ಭದಲ್ಲಿ ಹೇಳಿದರು.


ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ ಸಂಸ್ಥೆ:
ಹಿಟಾಚಿ ರೈಲ್ ಎಸ್‌ಟಿಎಸ್ (ಈ ಮೊದಲು ಅನ್ಸಾಲ್ಡೋ ಎಸ್‌ಟಿಎಸ್ ಎಂಬ ಹೆಸರು ಹೊಂದಿತ್ತು) ಒಂದು ಜಾಗತಿಕ ಸಂಸ್ಥೆಯಾಗಿದ್ದು, ಕಳೆದ ಹಲ ದಶಕಗಳಿಂದ ಮೆಟ್ರೋ, ಪ್ರಯಾಣಿಕ ರೈಲು, ಟ್ರಾಫಿಕ್ ಮ್ಯಾನೇಜ್ಮೆಂಟ್ ಮೂಲಕ ಅತಿ ವೇಗದಲ್ಲಿ ಸರಕು ಸಾಗಾಟ, ಟ್ರಾಕ್ಷನ್ ಮತ್ತು ಸಿಗ್ನಲ್ ವ್ಯವಸ್ಥೆ ಸೇರಿದಂತೆ ರೈಲ್ವೇ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಭಾರತದಲ್ಲಿ ಸಂಸ್ಥೆ 1,100ಕ್ಕೂ ಹೆಚ್ಚು ಮೈನ್ ಲೈನ್ ರೈಲ್ವೇ ನಿಲ್ದಾಣಗಳನ್ನು ಮತ್ತು ಅತ್ಯುತ್ತಮ ಗುಣಮಟ್ಟದ ಇಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಗಳನ್ನು ಒದಗಿಸಿದೆ.


ಮೆಟ್ರೋ ವಲಯದಲ್ಲಿ ಸಂಸ್ಥೆ ಜಾಗತಿಕವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಭಾರತದ ನೋಯ್ಡಾ - ಗ್ರೇಟರ್ ನೋಯ್ಡಾ ಮೆಟ್ರೋ ಯೋಜನೆ, ಕೋಲ್ಕತ್ತಾ ಮೆಟ್ರೋ ಇ - ಡಬ್ಲ್ಯು ಕಾರಿಡಾರ್ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.


ಸಂಸ್ಥೆ ವೇಗವಾಗಿ ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದರ ಹಿರಿಮೆ ಕಾಲಕ್ರಮೇಣ ಇನ್ನಷ್ಟು ಹೆಚ್ಚಲಿದೆ. ಈ ಸಂಸ್ಥೆ ತನ್ನ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ 2050ಕ್ಕೂ ಮುನ್ನ ಶೂನ್ಯ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಹೊಂದುವ ಗುರಿ ಹೊಂದಿರುವ ಸಂಸ್ಥೆಗಳಲ್ಲಿ ಒಂದಾಗಿದೆ.


ಡಾ. ಎಂ ಸಿ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ:
ಡಾ. ಎಂ ಸಿ ಮೋದಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ 1980ರಲ್ಲಿ ಸ್ಥಾಪಿತವಾಗಿದ್ದು, ದಾನ, ನೀತಿ, ಕಠಿಣ ಪರಿಶ್ರಮ, ಹಾಗೂ ದೂರದೃಷ್ಟಿಯ ಮೂಲಕ ದೃಷ್ಟಿ ಸಂಬಂಧಿ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಅತ್ಯುನ್ನತ ಗುಣಮಟ್ಟದ ಕಣ್ಣಿನ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ, ಪ್ರಥಮ ಆಯ್ಕೆಯ ಕಣ್ಣಿನ ಆಸ್ಪತ್ರೆ ಎನಿಸಿಕೊಳ್ಳುವ ಗುರಿಯನ್ನು ಸಂಸ್ಥೆ ಹೊಂದಿದೆ.


ಆಸ್ಪತ್ರೆ ಒಂದು ತಂಡವಾಗಿ ಕಾರ್ಯಾಚರಿಸಿ, ರೋಗಿಗಳಿಗೆ ಗೌರವ, ಸಹಾನುಭೂತಿ, ಘನತೆ ಹಾಗೂ ಸುರಕ್ಷಿತ ಸೇವೆಗಳನ್ನು ನೀಡಲು ಬದ್ಧವಾಗಿದೆ. ಆಸ್ಪತ್ರೆ ಸತತವಾಗಿ ತನ್ನ ತಂತ್ರಜ್ಞಾನಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ರೋಗಿಗಳ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಆಧುನಿಕ ಉಪಕರಣಗಳು ಹಾಗೂ ನುರಿತ ವೈದ್ಯರು, ಸಲಹೆಗಾರರು ಮತ್ತು ಸಂಯೋಜಕರನ್ನು ಹೊಂದಿ ಕಾರ್ಯಾಚರಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ