ಬೆಂಗಳೂರು: ಕೊರೊನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಪ್ರತಿದಿನ ಸುಮಾರು 3000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಅದೇ ಸಮಯದಲ್ಲಿ, ಪ್ರಪಂಚದಾದ್ಯಂತದ ಹಲವು ದೇಶಗಳಲ್ಲಿ, ಕೋವಿಡ್-19 ಕೋಲಾಹಲವನ್ನು ಸೃಷ್ಟಿಸಿದೆ ಒಮಿಕ್ರಾನ್ ಬಿ ಎ.4 ಮತ್ತು ಬಿ ಎ.5 ರ ಎಲ್ಲಾ ರೂಪಾಂತರಗಳು ಜನರನ್ನು ವೇಗವಾಗಿ ಸೆಳೆಯುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ಕರೋನಾ ರೋಗಿಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ ಮತ್ತು ಇದಕ್ಕೆ ಓಮಿಕ್ರಾನ್‌ನ ಉಪ-ರೂಪಾಂತರಗಳಾದ ಬಿಎ.4 ಮತ್ತು ಬಿಎ.5 ಕಾರಣವೆಂದು ಉಲ್ಲೇಖಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ತನ್ನ ಪತಿಯ ಮೇಲಿನ ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸಿದ ಆಲಿಯಾ


ಇನ್ನು ಕರ್ನಾಟಕದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 156 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,884ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸಾಮಾಜಿಕ ಜಾಲತಾಣ ʼಕೂʼನಲ್ಲಿ ತಿಳಿಸಿದ್ದಾರೆ. 


​ಇದನ್ನು ಓದಿ: ಊಹೆಗೂ ಮೀರಿದ ವಸಿಷ್ಠನ 'Love...ಲಿ' ಇಂಟ್ರೊಡಕ್ಷನ್ ಫೈಟ್ ಸೀನ್ಸ್


ಸದ್ಯ ರಾಜ್ಯದಲ್ಲಿ ಕೋವಿಡ್‌ನಿಂದ ಯಾವುದೇ ಮರಣ ಸಂಭವಿಸಿಲ್ಲ. 179 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, 19,500 ಕೋವಿಡ್ ಟೆಸ್ಟ್ ಮಾಡಲಾಗಿದೆ. ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇಕಡ 0.80ರಷ್ಟಿದ್ದು, ಬೆಂಗಳೂರು ನಗರದಲ್ಲಿ 143 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,793ಕ್ಕೆ ಏರಿಕೆಯಾಗಿದೆ  ಎಂದು ತಿಳಿದುಬಂದಿದೆ. 


ಕರ್ನಾಟಕದಲ್ಲಿ ಕೊರೊನಾ: 
ರಾಜ್ಯದಲ್ಲಿ ಹೊಸ ಪ್ರಕರಣಗಳು: 156
ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 143
ಪಾಸಿಟಿವಿಟಿ ದರ: ಶೇ.0.80
ಗುಣಮುಖರ ಸಂಖ್ಯೆ: 179 (ಬೆಂಗಳೂರಿನಲ್ಲಿ 151)
ಸಾವಿನ ಸಂಖ್ಯೆ: 0
ರಾಜ್ಯದಲ್ಲಿ ಸಕ್ರಿಯ ಪ್ರಕರಣ: 1884
ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ: 1793
ಟೆಸ್ಟ್‌: 19,500 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.