ಬೆಂಗಳೂರು : ಭಾರತದಲ್ಲೂ ಓಮಿಕ್ರಾನ್‌ (Omicron)  ಪ್ರಕರಣ ಪತ್ತೆಯಾಗಿರುವುದು ಇದೀಗ ಟೆನ್ಷನ್ ಹೆಚ್ಚಿಸಿದೆ. ಕರೋನವೈರಸ್‌ನ (Coronavirus) ಹೊಸ ರೂಪವಾದ ಓಮಿಕ್ರಾನ್‌ನ ಎರಡು ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಇಬ್ಬರೂ ರೋಗಿಗಳು ಪುರುಷರಾಗಿದ್ದಾರೆ. 66 ವರ್ಷ ಮತ್ತು 46 ವರ್ಷ ವಯಸ್ಸಿನ ಇಬ್ಬರಲ್ಲಿ ಈ ಸೋಂಕು ಕಂಡು ಬಂದಿದೆ. ಇವರಲ್ಲಿ ಒಬ್ಬ ಆಫ್ರಿಕಾದವರಾಗಿದ್ದು, ಇನ್ನೊಬ್ಬರು ರಾಜ್ಯದವರೇ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಭಾರತೀಯನಿಗೆ ಎಲ್ಲಿ ಸೋಂಕು ತಗುಲಿತು?
ಕರ್ನಾಟಕದಲ್ಲಿ ಪತ್ತೆಯಾದ ಎರಡು ಒಮಿಕ್ರಾನ್ (Omicron) ಪ್ರಕರಣಗಳಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದರೆ, ಇನ್ನೊಬ್ಬ ವ್ಯಕ್ತಿ ಬೆಂಗಳೂರಿನ ನಿವಾಸಿ. ಆಫ್ರಿಕನ್ ವ್ಯಕ್ತಿ ಈಗಾಗಲೇ ದುಬೈಗೆ ತೆರಳಿದ್ದಾರೆ. ಇನ್ನು ಮತೊಬ್ಬ ವ್ಯಕ್ತಿ ಅಂದರೆ ಭಾರತೀಯ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ (Travell history) ಇನ್ನೂ ಪತ್ತೆಯಾಗಿಲ್ಲ.  ಅವರಿಗೆ ಈ ಸೋಂಕು ಎಲ್ಲಿ   ತಗುಲಿತು ಎನ್ನುವುದು ಕೂಡಾ ಸ್ಪಷ್ಟವಾಗಿಲ್ಲ. ಈ ವ್ಯಕ್ತಿ ವೃತ್ತಿಯಲ್ಲಿ ವೈದ್ಯ. ಅಪಾಯ ವಲಯದ ದೇಶದಿಂದ ಇಲ್ಲಿಯವರೆಗೆ 37 ಅಂತರಾಷ್ಟ್ರೀಯ ವಿಮಾನಗಳು (International flight) sಬಂದಿದ್ದು, ಇದರಲ್ಲಿ 7976 ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಈ ಪೈಕಿ 10 ಪ್ರಯಾಣಿಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕರೋನಾ ಮಾದರಿಗಳನ್ನು ಕಳುಹಿಸಲಾಗಿದೆ.


ಇದನ್ನೂ ಓದಿ : ಪತ್ರಿಕೋದ್ಯಮ ಪದವೀಧರರಿಗೆ ಅಪ್ರೆಂಟಿಸ್ ತರಬೇತಿ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಈ ಲಕ್ಷಣಗಳು ಕಂಡುಬಂದವು :
ಓಮಿಕ್ರಾನ್ ಸೋಂಕಿಗೆ ಒಳಗಾದ ಭಾರತೀಯನಿಗೆ ನವೆಂಬರ್ 21 ರಂದು ಜ್ವರ ಮತ್ತು ಮೈ ಕೈ ನೋವಿತ್ತು. ನವೆಂಬರ್ 22 ರಂದು ಮಾದರಿಯನ್ನು ಪರೀಕ್ಶಿಸಲಾಗಿದೆ. ಈ ಸಂದರ್ಭದಲ್ಲಿ ಕೊರೊನಾ ಪಾಸಿಟಿವ್ (COVID-19) ಬಂದಿದೆ. 25ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನವೆಂಬರ್ 27ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ವೈದ್ಯರು ಪ್ರಸ್ತುತ ಮನೆಯಲ್ಲಿ ಐಸೊಲೆಶನ್ ನಲ್ಲಿದ್ದಾರೆ (Isolation). ಅವರ ಪ್ರಾಥಮಿಕ ಸಂಪರ್ಕ 13 ಮತ್ತು  205 ದ್ವಿತೀಯ ಸಂಪರ್ಕ ಪತ್ತೆಯಾಗಿವೆ. ಪ್ರಾಥಮಿಕ ಸಂಪರ್ಕದಲ್ಲಿರುವ ಮೂವರು ಮತ್ತು ದ್ವಿತೀಯ ಸಂಪರ್ಕದಲ್ಲಿರುವ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 


ಇದನ್ನೂ ಓದಿ : ಮೊಟ್ಟೆ ಕೊಡುವುದಿರಲಿ ಈ ಸರ್ಕಾರ ಬಿಸಿಯೂಟಕ್ಕೆ ಸರಿಯಾದ ದಿನಸಿ ಒದಗಿಸುತ್ತಿದೆಯೇ?-ಡಿಕೆಶಿ ಪ್ರಶ್ನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.