ಮಂಡ್ಯ : ಪವರ್ ಸೆಲ್ ಫ್ಯಾಕ್ಟರಿಯಲ್ಲಿ ಕೊರೋನಾ ಮಹಾ ಸ್ಪೋಟಗೊಂಡಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಎವರೆಡಿ ಸೆಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ 40 ಸಿಬ್ಬಂದಿಗೆ ಕೊರೋನಾ ವಕ್ಕರಿಸಿದೆ. 


COMMERCIAL BREAK
SCROLL TO CONTINUE READING

ಫ್ಯಾಕ್ಟರಿಯಲ್ಲಿ ರೋಟಿನ್ ಆಗಿ 100 ಸಿಬ್ಬಂದಿಗಳನ್ನ ಕೋವಿಡ್ ಟೆಸ್ಟ್(Covid-19 Test) ಗೆ ಒಳಪಡಿಸಲಾಗಿತ್ತು. ಇದೀಗ ಟೆಸ್ಟ್ ಗೆ ಒಳಗಾದವರ ಪೈಕಿ  40 ಮಂದಿಗೆ ಕೊರೋನಾ ದೃಢಪಟ್ಟಿದೆ. ನಿನ್ನೆ ಸಂಜೆಯು ಮತ್ತೆ 100 ಮಂದಿ ಸಿಬ್ಬಂದಿಗಳ ಕೊರೊನಾ ಟೆಸ್ಟ್ ಮಾಡಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಅವರ ರಿಪೋರ್ಟ್ ಬರುವ ಸಾಧ್ಯತೆ ಇದೆ. ಈ ಸೆಲ್ ಫ್ಯಾಕ್ಟರಿಯಲ್ಲಿ 400ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ.  


ಇದನ್ನೂ ಓದಿ : Film Theatres: ರಾಜ್ಯ ಸರ್ಕಾರದ ಕೋವಿಡ್ ನಡೆಗೆ ಬೇಸರ: ಮೈಸೂರಿನಲ್ಲಿ ಇಂದಿನಿಂದ ಚಿತ್ರಮಂದಿರ ಬಂದ್...!


ಹಲವರಿಗೆ ಕೊರೋನಾ ಸೊಂಕು ದೃಢಪಟ್ಟ(Corona Positive) ಹಿನ್ನೆಲೆಯಲ್ಲಿ ಇಂದು ಕಾರ್ಖಾನೆ ಆಡಳಿತ ಮಂಡಳಿ ಕೆಲಸಕ್ಕೆ ಬಂದ ಸಿಬ್ಬಂದಿಗಳನ್ನ ವಾಪಸ್ಸು ಕಳಿಸಿಹಿಸಿದೆ. 


ನಿನ್ನೆ ದೇಶದಲ್ಲಿ 3,47,254 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 24 ಗಂಟೆಯಲ್ಲಿ 703 ಜನರು ಸಾವನ್ನಪ್ಪಿದ್ದು, 2,51,777 ಜನರು ಗುಣಮುಖಗೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.