Bangalore Lockdown:ಕೊರೊನಾ 3ನೇ ಅಲೆಯ ಬಲೆಯೊಳಗೆ ಬೆಂಗಳೂರು! ಲಾಕ್ ಆಗೋದು ಫಿಕ್ಸ್!?
Bangalore Corona updates: 2ನೇ ಅಲೆ ಬಳಿಕ ಕಳೆದ 5-6 ತಿಂಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಂಗಳೂರಿಗರಿಗೆ ಕೊರೊನಾ ಮತ್ತೆ ಶಾಕ್ ನೀಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ (Corona Positivity Rate) ಒಂದೇ ಸಮನೆ ಏರುತ್ತಿದೆ. 2ನೇ ಅಲೆ ಬಳಿಕ ಕಳೆದ 5-6 ತಿಂಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಂಗಳೂರಿಗರಿಗೆ ಮತ್ತೆ ಶಾಕ್ ನೀಡಿದೆ.
ಪಾಸಿಟಿವಿಟಿ ರೇಟ್ ಹೆಚ್ಚಳ:
ಕಳೆದ 1 ವಾರದಿಂದ ಬೆಂಗಳೂರಲ್ಲಿ ಡೆಡ್ಲಿ ಕೊರೊನಾ (Covid19 cases in Bangalore) ಆರ್ಭಟ ಹೆಚ್ಚಾಗಿದೆ. ಇದು 3ನೇ ಅಲೆ (Corona third wave) ಬರೋದು ಪಕ್ಕಾ ಎನ್ನುವಂತೆ ಮಾಡಿದೆ.
ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕೇಸ್ ಹಾಗೂ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. ಇದು ಜನರಲ್ಲಿ ಎರಡೆರಡು ರೀತಿ ಭಯಕ್ಕೆ ಕಾರಣವಾಗಿದೆ.
ಒಂದು ಕಡೆ ಆಸ್ಪತ್ರೆಗಳು ದಿಢೀರ್ ತುಂಬಿ ತುಳುಕುವ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ಇನ್ನೊಮ್ಮೆ ಲಾಕ್ ಡೌನ್ (Lockdown) ಆತಂಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಕಳೆದ 2 ವರ್ಷಗಳಿಂದ ಇದೇ ರೀತಿ ಕೊರೊನಾ ವೈರಸ್ (Corona Virus) ಎಲ್ಲರನ್ನೂ ಸಂಕಷ್ಟದ ಬಲೆಗೆ ನೂಕುತ್ತಿದೆ.
ಮೊದಲೇ ಎಚ್ಚರಿಸಿದ್ದ ತಜ್ಞರು:
ಕೊರೊನಾ 2ನೇ ಅಲೆ (Corona second wave) ಮುಗಿಯುತ್ತಿದ್ದಂತೆ ತಜ್ಞರು 3ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಆರಂಭದಲ್ಲಿ ಕಂಟ್ರೋಲ್ ಆಗಿದ್ದ ಕೇಸ್ ಗಳು ಈಗ ದಿಢೀರ್ ಏರಿಕೆ ಕಾಣುತ್ತಿವೆ.
ಇದೇ ರೀತಿ ಇನ್ನಷ್ಟು ದಿನ ಪಾಸಿಟಿವಿಟಿ ದರ ಏರಿಕೆಯಾದ್ರೆ ಬೆಂಗಳೂರು ನಗರ ಲಾಕ್ ಆಗೋದು ಫಿಕ್ಸ್ (Bangalore Lockdown) ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಏಕೆಂದರೆ ರಾಜಧಾನಿಯಲ್ಲಿ ಊಹೆಗೂ ಮೀರಿ ಪಾಸಿಟಿವಿಟಿ ರೇಟ್ ಏರಿಕೆಯಾಗಿದೆ.
ಡಿಸೆಂಬರ್ 27ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಸಿಟಿವಿಟಿ ದರ ಶೇ.0.57ರಷ್ಟು ಇತ್ತು. ಆದ್ರೆ ಈಗ ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ರೇಟ್ ಜನವರಿ 2ಕ್ಕೆ 2.36%ನ್ನು ತಲುಪಿದೆ. ನಿನ್ನೆ ಕೂಡ ಮತ್ತಷ್ಟು ಕೇಸ್ ಏರಿಕೆಯಾಗಿದೆ.
ಈಗಾಗಲೇ ತಜ್ಞರು ಪಾಸಿಟಿವಿಟಿ ರೇಟ್ ಶೇ. 5ನ್ನು ದಾಟುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಇದೇ ರೀತಿ ಕೇಸ್ ಏರಿಕೆಯಾದ್ರೆ ಲಾಕ್ ಡೌನ್ ಆಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Corona Vaccine:ಮಕ್ಕಳ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ, ಟಫ್ ರೂಲ್ಸ್ ಜಾರಿ ಬಗ್ಗೆ ಸುಳಿವು ನೀಡಿದ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.