ಬೆಂಗಳೂರು:  ರಾಜ್ಯದಲ್ಲೂ  ಕೋವಿಡ್-19 ಮೂರನೇ ಅಲೆ ಪ್ರಾರಂಭ ಆಗಿದ್ದು, ಒಮಿಕ್ರಾನ್ ಮೂಲವಾದ ಈ ಅಲೆಯ ತಡೆಗೆ  ಈಗಾಗಲೇ ಸರ್ಕಾರ ಕೆಲ ನಿರ್ಬಂಧನೆಗಳನ್ನ ಘೋಷಿಸಿದೆ. ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಸರ್ಕಾರ ಮತ್ತೆ ಲಾಕ್ ಡೌನ್ (Lockdown) ಮಾಡಲಿದೆಯೇ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. 


COMMERCIAL BREAK
SCROLL TO CONTINUE READING

ಈಗಾಗಲೇ ಕಳೆದ ಎರಡು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ (Coronavirus) ಮೊದಲ ಹಾಗೂ ಎರಡನೆಯ ಅಲೆಯಿಂದ  ತೀವ್ರವಾಗಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಅನೇಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇದನ್ನು  ಗಂಭೀರವಾಗಿ ಪರಿಗಣಿಸಿದ ಸರ್ಕಾರ ಲಾಕ್ ಡೌನ್ ಚಿಂತನೆಯನ್ನ ಸದ್ಯಕ್ಕೆ ಕೈಬಿಟ್ಟಿದೆ.


ಮೂರನೇ ಅಲೆ ಆತಂಕ ಕಡಿಮೆ; ಎಚ್ಚರ ಅಗತ್ಯ:
ರಾಜ್ಯದಲ್ಲಿ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ಕೋವಿಡ್-19 (Covid-19) ಪ್ರಕರಣಗಳು ದಾಖಲಾಗುತ್ತಿದ್ದು, ಬೆಂಗಳೂರು ನಗರದಲ್ಲಿ ನಿತ್ಯ 9 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಬೆಳಕಿಗೆ ಬರುತ್ತಿವೆ. ಜನವರಿ 11 ರಂದು ರಾಜ್ಯದಲ್ಲಿ 14,473 ಪ್ರಕರಣಗಳು ದಾಖಲಾಗಿದ್ದು, 5 ಮಂದಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಪಾಸಿಟಿವ್ ಪ್ರಮಾಣ ರಾಜ್ಯದಲ್ಲಿ 10.30% ಇದ್ದರೂ ಮರಣ ಪ್ರಮಾಣ 0.03% ಇದೆ.


ಇದನ್ನೂ ಓದಿ- Arvind Kejriwal: ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ದೆಹಲಿ ಸಿಎಂ ಮಹತ್ವದ ಘೋಷಣೆ


ಇನ್ನು ಆರೋಗ್ಯ ಇಲಾಖೆಯ (Health Department) ಅಧಿಕಾರಿಗಳು ಹೇಳುವ ಪ್ರಕಾರ, ಪ್ರತಿನಿತ್ಯ ಕೋವಿಡ್-19 ಪ್ರಕರಣಗಳು ಹೆಚ್ಚಳ ಆಗುತ್ತಲೇ ಇವೆ, ಆದರೆ ಮರಣ ಪ್ರಮಾಣ ಹಾಗೂ ಆಸ್ಪತ್ರೆಗೆ ಸೇರಿರುವ ಸಂಖ್ಯೆ ಕೂಡ ಕಡಿಮೆ ಇದೆ. ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಲಸಿಕಾ ಅಭಿಯಾನವನ್ನು ಮಾಡಿರುವ ಹಿನ್ನಲೆಯಲ್ಲಿ ಒಮಿಕ್ರಾನ್ ಸೋಂಕು ಅಷ್ಟರ ಮಟ್ಟಿಗೆ ಪ್ರಾಣಹಾನಿ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. 


ಆದಾಗ್ಯೂ, ಈ ಸಂದರ್ಭದಲ್ಲಿ ಜನರು ಕೋವಿಡ್-19 ಸೋಂಕನ್ನು ಲಘುವಾಗಿ ಸ್ವೀಕರಿಸಬಾರದು. ಲಸಿಕೆ (Corona Vaccine) ಖಂಡಿತವಾಗಿ ಸೋಂಕಿನ ವಿರುದ್ಧ ರಕ್ಷೆ ನೀಡುತ್ತದೆ. ಆದರೆ ಇತರೆ ಕಾಯಿಲೆಗಳಿಂದ ಬಳಲು ತ್ತಿರುವವರು ಈ ಸೋಂಕು ನಿವಾರಣೆ ಆಗುವವರೆಗೂ ಎಚ್ಚರಿಕೆಯಿಂದ ಇರಲೇಬೇಕು. ಈ ಸೋಂಕು ರೂಪಾಂತರಿ ಆಗುತ್ತಲೇ ಇದೆ, ಹೀಗಾಗಿ ಜನರು ಎಚ್ಚರಿಕೆ ವಹಿಸಿ ಕೋವಿಡ್-19 ತಡೆಗೆ ಇರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಸೋಂಕಿನಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು. 


ಲಾಕ್ ಡೌನ್ ಇರತ್ತ? ಇರಲ್ವಾ?
ಒಂದೆಡೆ ಕರೋನಾ ಸೋಂಕಿನ ಹಾವಳಿಯಾದರೆ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತೆ ಲಾಕ್ ಡೌನ್  (Lockdown) ಮಾಡುತ್ತಾ ಎಂಬ ಆತಂಕ ಜನರನ್ನು ಕಾಡುತ್ತಿದೆ. ಆದರೆ, ಇತ್ತೀಚೆಗಷ್ಟೇ ಜನಸಾಮಾನ್ಯರ ಜೀವನ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಮತ್ತೆ ಲಾಕ್ ಡೌನ್ ಮೊರೆಹೋದರೆ ಸಾಕಷ್ಟು ಮಂದಿ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗುತ್ತದೆ ಎಂಬುದನ್ನು ಮನಗಂಡಿರುವ ಸರ್ಕಾರ ಸದ್ಯಕ್ಕೆ ಲಾಕ್ ಡೌನ್ ಮಾಡುವ ಬಗ್ಗೆ ಚಿಂತಿಸುತ್ತಿಲ್ಲ. ಬದಲಿಗೆ ಸೋಂಕು ತಡೆಗಟ್ಟುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನಷ್ಟೇ ಕೈಗೊಳ್ಳುತ್ತಿದೆ. ಆದರೆ ಒಂದು ವೇಳೆ ಆಸ್ಪತ್ರೆಗಳಲ್ಲಿ ಶೇ 40 ಕ್ಕೂ ಹೆಚ್ಚು ಹಾಸಿಗೆಗಳು (ICU,Oxygen, HDU) ಬರ್ತಿಯಾದರೆ, ಲಾಕ್ ಡೌನ್ ಮಾಡದೆ ಸರ್ಕಾರಕ್ಕೆ ಬೇರೆ ದಾರಿಯೇ ಇಲ್ಲ ಎಂದು ಸಹ ಹೇಳಲಾಗುತ್ತಿದೆ. 


ಇದನ್ನೂ ಓದಿ- Corona Update India: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ ಮತ್ತೆ ಹಳ್ಳಿಗಳತ್ತ ತೆರಳುತ್ತಿರುವ ಕಾರ್ಮಿಕರು


ಲಾಕ್ ಡೌನ್ ಜೀವ ಉಳಿಸಬಹುದು, ಆದರೆ ಜೀವನ ಕಿತ್ತುಕೊಳ್ಳುತ್ತದೆ:
ಹೌದು, ಲಾಕ್ ಡೌನ್ ಬ್ರಹ್ಮಾಸ್ತ್ರ ಕೋವಿಡ್ ಸೋಂಕು ತಡೆಯಲು ಸಹಕಾರಿ ಆಗಬಹುದು ಆದರೆ ಆರ್ಥಿಕವಾಗಿ ಜನರು ಪಾತಾಳಕ್ಕೆ ಇಳಿಯುತ್ತಾರೆ. ಹೀಗಾಗಿ ಸರ್ಕಾರ ಲಸಿಕೆ ಹಾಗೂ ಮೊದಲ-ಎರಡನೆಯ ಅಲೆಯಿಂದ ಕಲಿತ ಪಾಠವನ್ನ ಪ್ರಯೋಗಿಸಲು ನಿರ್ಧಾರ ಮಾಡಿದೆ.ಇನ್ನು ಕೋವಿಡ್-19 ಮೂರನೇ ಅಲೆಯ ಸಂಬಂದಿಸಿದ ಸಭೆಯಲ್ಲಿ ಇಂದು ಲಾಕ್ ಡೌನ್ ಬಗ್ಗೆ ಚರ್ಚೆ ಆಗಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.