ಮಂಡ್ಯ : ಮಿಮ್ಸ್ ನ 9 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು (Coronavirus) ಧೃಢಪಟ್ಟಿದೆ. ಇವರೆಲ್ಲಾ ಮಿಮ್ಸ್ ನಲ್ಲಿ ಟ್ರೈನಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳು ಎನ್ನಲಾಗಿದೆ.ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ 145 ಹಾಸ್ಟೆಲ್ ವಿದ್ಯಾರ್ಥಿನಿಯರನ್ನ ಕೋವಿಡ್ ಟೆಸ್ಟ್ ಗೆ (COVID test) ಒಳಪಡಿಸಲಾಗಿತ್ತು.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಕರೋನಾ (Coronavirus) ಆತಂಕ ಹೆಚ್ಚುತ್ತಲೇ ಇದೆ. ದಿನೇ ದಿನೇ ರಾಜ್ಯದಲ್ಲಿ ಕರೋನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರುತ್ತಿದೆ.  ಒಂದು ಕಡೆ ಕರೋನಾ ಹೊಸ ರೂಪಾಂತರವಾದ ಒಮಿಕ್ರೋನ್ (Omicron) ಆತಂಕವಾದರೆ, ಮತ್ತೊಂದೆಡೆ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಕೂಡಾ ಏರಿಕೆಯಾಗುತ್ತಿದೆ. ಇದೀಗ, ಮಿಮ್ಸ್ ನ 9 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಪೈಕಿ 8 ಮಂದಿ ಕೇರಳ ರಾಜ್ಯದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳದಿಂದ ಬಂದಿದ್ದ ವಿದ್ಯಾರ್ಥಿನಿಯರಿಂದ ಸೋಂಕು ಹರಡಿರುವ ಬಿಹೀತಿ ಎದುರಾಗಿದೆ. 


ಇದನ್ನೂ ಓದಿ : ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ 33 ವಿದ್ಯಾರ್ಥಿಗಳಿಗೆ ಕೊರೊನಾ ..!


ಡಿ.8 ರಂದು ಕೇರಳಕ್ಕೆ (Kerala) ತೆರಳಿದ್ದ ವಿದ್ಯಾರ್ಥಿಗಳು  ಡಿ.14 ರಂದು ಮಂಡ್ಯಕ್ಕೆ ವಾಪಸ್ಸಾಗಿದ್ದರು. ವಾಪಸಾದ ವಿದ್ಯಾರ್ಥಿಗಳನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕರೋನಾ ಟೆಸ್ಟ್ ವರದಿ ಬಂದಾಗ, ಅವರಲ್ಲಿ ನಾಲ್ವರಿಗೆ ಕರೋನಾ ಸೋಂಕು ಇರುವುದು ಡಿ.24ಕ್ಕೆ ದೃಢಪಟ್ಟಿತ್ತು. ನಂತರ  ಹಾಸ್ಟೆಲ್ ನ 145 ವಿದ್ಯಾರ್ಥಿನಿಯರನ್ನ ಕೋವಿಡ್ (COVID) ಟೆಸ್ಟ್ ಗೆ ಒಳಪಡಿಸಲಾಗಿತ್ತು. ಈ ಸನದರ್ಭದಲ್ಲಿ ಮತ್ತೆ 5 ಮಂದಿಯಲ್ಲಿ ಕೊರೊನಾ ಸೋಂಕು  ದೃಢಪಟ್ಟಿದೆ. 


ಕರೋನಾ ಸೋಂಕಿತ 9 ವಿದ್ಯಾರ್ಥಿನಿಯರನ್ನ ಮಹಿಳಾ ಹಾಸ್ಟೆಲ್ ನ 4 ನೇ ಮಹಡಿಯಲ್ಲಿ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಇದೇ ವೇಳೆ, ಪುರುಷ ಹಾಸ್ಟೆಲ್ ನ ಎಲ್ಲಾ ವಿದ್ಯಾರ್ಥಿಗಳನ್ನ ಕೋವಿಡ್ ಟೆಸ್ಟ್ ಗೆ ಒಳಪಡಿಸಲು ನಿರ್ಧಾರ ಮಾಡಲಾಗಿದೆ. 


ಇದನ್ನೂ ಓದಿ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂರು ದಿನ ನೈಟ್ ಕರ್ಫ್ಯೂ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.