ಬೆಂಗಳೂರು : 2021-22 ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ​ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಜ.17 ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಅಲ್ಪಸಂಖ್ಯಾತರ ನವೋದಯ ಮಾದರಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ 5ನೇ ಸುತ್ತಿನ ಕೌನ್ಸೆಲಿಂಗ್ ಜನವರಿ 17 ರಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಹೊಸಪೇಟೆ ರಸ್ತೆ, ಕೊಪ್ಪಳದಲ್ಲಿ ನಡೆಯಲಿದೆ.


ಇದನ್ನೂ ಓದಿ: ರಾತ್ರಿ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಬ್ರೇಕ್


ಅಂದು ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. 5ನೇ ಸುತ್ತಿನ ಕೌನ್ಸ್ಲಿಂಗ್‌ಗೆ ಅರ್ಹತೆ ಹೊಂದಿದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಕೊಪ್ಪಳ ಜಿಲ್ಲೆಯ ಎಲ್ಲಾ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ನವೋದಯ ಮಾದರಿ ವಸತಿ ಶಾಲೆ, ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ಹಾಗೂ ಜಿಲ್ಲಾ ಕಛೇರಿಯ ವೆಬ್‌ಸೈಟ್  dom.karnataka.gov.in/koppal/public     ನಲ್ಲಿ ಪ್ರಕಟಿಸಲಾಗಿದೆ.


ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಸಂದರ್ಶನ ಪತ್ರ ಕಳುಹಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳು ನಿಗದಿತ ದಿನಾಂಕದAದು ಸೂಚಿಸಿರುವ ಸ್ಥಳದಲ್ಲಿ ತಪ್ಪದೇ ಹಾಜರಾಗಬೇಕು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಸ್ಥಳದಲ್ಲಿಯೇ ಸಂಬಂಧಪಟ್ಟ ಶಾಲೆಗಳ ಪ್ರವೇಶ ದಾಖಲಾತಿ ಮಾಡಿಕೊಳ್ಳಲಾಗುವುದು.


ಆದ್ದರಿಂದ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಬರುವಾಗ ಕಡ್ಡಾಯವಾಗಿ ಪ್ರವೇಶ ಪರೀಕ್ಷಾ ಗುರುತಿನ ಚೀಟಿ(ಹಾಲ್‌ಟಿಕೇಟ್), ಮೂಲ ವರ್ಗಾವಣೆ ಪ್ರಮಾಣ ಪತ್ರ(ಟಿ.ಸಿ.), ಮೂಲ ಜಾತಿ ಪ್ರಮಾಣ ಪತ್ರ (ತಹಶೀಲ್ದಾರ್‌ರವರಿಂದ ಪಡೆದ ಅಲ್ಪಸಂಖ್ಯಾತರ ಸಮುದಾಯ ರೂ.1.00 ಲಕ್ಷ ಪ್ರ.ಗ-1 ರೂ.2.50 ಲಕ್ಷ, ಹಿಂದುಳಿದ ವರ್ಗ 2ಎ,2ಬಿ,3ಎ,3ಬಿ ರೂ.2.50 ಲಕ್ಷ ಎಸ್.ಸಿ ಎಸ್.ಟಿ ರೂ.2.50 ಲಕ್ಷ), ಮೂಲ ಆದಾಯ ಪ್ರಮಾಣ ಪತ್ರ, ಶೇ.40 ಕ್ಕಿಂತ ಕಡಿಮೆ ಇಲ್ಲದಂತೆ ಅಂಗವಿಕಲ ಪ್ರಮಾಣ ಪತ್ರ (ವೈದ್ಯಕೀಯ ಪ್ರಾಧಿಕಾರದಿಂದ), ವಿಶೇಷ ಮಕ್ಕಳ ಪ್ರಮಾಣ ಪತ್ರ (ಮಾಜಿ ಸೈನಿಕರು, ಸಫಾಯಿ ಕರ್ಮಚಾರಿ, ದೇವದಾಸಿ, ಅನಾಥ, ರೈತರ ಆತ್ಮಹತ್ಯೆ ಇತರೆ), 5ನೇ ತರಗತಿಯ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ 4 ಭಾವಚಿತ್ರಗಳನ್ನು ತರಬೇಕು.


ಇದನ್ನೂ ಓದಿ: 'ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕ "


ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಟಣಕನಕಲ್, ಹಿರೇಸಿಂಧೋಗಿ, ತಳಕಲ್, ಕುಕನೂರು, ಕುದರಿಮೋತಿ, ಕುಷ್ಟಗಿ, ಹಿರೇಬೆಣಕಲ್-1 ಮತ್ತು 2 ಮತ್ತು ತಾಲ್ಲೂಕು ಮಾಹಿತಿ ಕೇಂದ್ರ ಕೊಪ್ಪಳ, ಕುಷ್ಟಗಿ, ಗಂಗಾವತಿ ಮತ್ತು ಯಲಬುರ್ಗಾ ಹಾಗೂ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ ಹೊಸಪೇಟೆ ರಸ್ತೆ, ಕೊಪ್ಪಳ-583231 ದೂ.ಸಂ: 08539-225070, 200703 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕೆ.ಕರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.