ಬೆಂಗಳೂರು: ಬರೋಬ್ಬರಿ ಎರಡು ವರ್ಷಗಳ ಬಳಿಕ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ‌ ಬೆಂಗಳೂರು ಸಿದ್ಧವಾಗಿದೆ. ಕೋವಿಡ್ ಕಾರಣದಿಂದ ಎರಡು ವರ್ಷ ಸಾಮೂಹಿಕ ಸಂಭ್ರಮಾಚರಣೆಗೆ ವಿಧಿಸಲಾಗಿದ್ದ ನಿರ್ಬಂಧ ಈ ವರ್ಷ ಇಲ್ಲ. ಹೀಗಾಗಿ ಇವತ್ತು ಸಂಜೆಯಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಟಿ ಪ್ರಿಯರು ಕಿಕ್ಕಿರಿದು ಸೇರುವ ನಿರೀಕ್ಷೆಯಿದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸುವ ಜವಾಬ್ದಾರಿ ಬೆಂಗಳೂರು ಪೊಲೀಸರ ಮೇಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆತ ಬಿಟ್ಟು ಬೇರೆ ಯಾರೂ ತಾಳಿ ಕಟ್ಟದಿರಲಿ : ದೇವರಿಗೆ ಯುವತಿ ಪತ್ರ


ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮೊದಲು ನೆನಪಾಗುವುದೇ ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಹಾಗೂ ಚರ್ಚ್ ಸ್ಟ್ರೀಟ್. ಈ ಮೂರು ರಸ್ತೆಗಳಲ್ಲಿ ಪಾರ್ಟಿ ಪ್ರಿಯರ ಸಂಖ್ಯೆ ಅಧಿಕವಾಗಿರಲಿದ್ದು ಭದ್ರತಾ ದೃಷ್ಟಿಯಿಂದ ರಸ್ತೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ಹಾಗೂ ಎಲ್ಲಾ ಸಿಸಿಟಿವಿ ದೃಶ್ಯಗಳ ಮೇಲೆ ಕಣ್ಣಿಡಲು ಬ್ರಿಗೇಡ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ತಾತ್ಕಾಲಿಕ ವಾರ್ ರೂಮ್ ತೆರೆಯಲಾಗಿದ್ದು 500ಕ್ಕೂ ಅಧಿಕ ಸಿಸಿಟಿವಿಗಳನ್ನ ಒಂದೇ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆ ಒದಗಿಸಲಾಗಿದೆ.


ಐದು ಮಂದಿ ಪೊಲೀಸ್ ಹಾಗೂ ಖಾಸಗಿ ಏಜೆನ್ಸಿ ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗುವ ಪ್ರತಿ ಕ್ಷಣ ಕ್ಷಣದ ದೃಶ್ಯಾವಳಿಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ‌. ಜನಸಂದಣಿಯಲ್ಲಿ ಅನುಚಿತ ವರ್ತನೆ, ಕಳ್ಳತನದಂತಹ ಕೃತ್ಯಗಳು ಕಂಡು ಬಂದರೆ ಸ್ಥಳದಲ್ಲಿ ನಿಯೋಜನೆಯಾಗಿರುವ ಪೊಲೀಸ್ ಸಿಬ್ಬಂದಿಗೆ ತಕ್ಷಣ ಮಾಹಿತಿ ರವಾನಿಸಲಿದ್ದಾರೆ‌. ಅಂತಹ ಆರೋಪಿಗಳನ್ನ ಸ್ಥಳದಲ್ಲಿರುವ ಸಿಬ್ಬಂದಿ ವಶಕ್ಕೆ ಪಡೆಯಲಿದ್ದಾರೆ.


ಇದನ್ನೂ ಓದಿ: ಫಲಿಸಿದ ಹರಕೆ... ಕೆನೆಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ಕೊಟ್ಟ ಭಕ್ತ


ಎಲ್ಲಿ ಸಾರ್ವಜನಿಕ ವಾಹನಗಳ ಪ್ರವೇಶ ನಿಷೇಧ


  • ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ

  • ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ವರೆಗೆ

  • ಚರ್ಚ್ ಸ್ಟ್ರೀಟ್ ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ

  • ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ.) ವೃತ್ತದ ವರೆ 2) ರೆಸ್ಟ್ ಹೌಸ್ ರಸ್ತೆಯಲ್ಲಿ, ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ

  • ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ, ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ.ರಸ್ತೆ ಜಂಕ್ಷನ್ ವರೆಗೆ (ಶಂಕರ್‌ನಾಗ್ ಚಿತ್ರ ಮಂದಿರ) ಈ ರಸ್ತೆಗಳಲ್ಲಿ ದಿನಾಂಕ:31 ರಂದು ರಾತ್ರಿ 10 ಗಂಟೆಯಿಂದ 01 ರ 01:00 ಗಂಟೆಯವರೆಗೆ ಅಗತ್ಯ ಸೇವೆ  ಹೊರತುಪಡಿಸಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.