ಬೆಂಗಳೂರು: ನಾನೂ ಗೌರಿ-ನಾವೆಲ್ಲಾ ಗೌರಿ ಎಂಬ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಗೌರಿ ಹತ್ಯೆ ಖಂಡನೆ ಹಾಗೂ ಪ್ರತಿರೋಧ ಸಮಾವೇಶಕ್ಕೆ ಬಿಗಿಭದ್ರತೆ ಒದಗಿಸಲಾಗಿದ್ದು. ನಾನೂ ಗೌರಿ-ನಾವೆಲ್ಲಾ ಗೌರಿ ಎಂಬ ಸಮಾವೇಶಕ್ಕೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಸಮಾವೇಶಕ್ಕಾಗಿ 200ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಂದ ಬಿಗಿ ಬಂದೋಬಸ್ತ್ - ಇಬ್ಬರು ಡಿಸಿಪಿ, ಐವರು ಎಸಿಪಿ, 10 ಪೊಲೀಸ್ ಇನ್ಸ್ ಪೆಕ್ಟರ್ಗಳಿಗೆ ಉಸ್ತುವಾರಿ - 4 ಕೆಎಸ್ ಆರ್ ಪಿ ತುಕಡಿಗಳೂ ಸೇರಿ 200 ಪೊಲೀಸರಿಂದ ಕಣ್ಗಾವಲು ಒದಗಿಸಲಾಗಿದೆ.


ಬೆಳಗ್ಗೆ 10 ಗಂಟೆಯಿಂದ ಪ್ರಗತಿಪರರು, ಚಿಂತಕರಿಂದ ರ್ಯಾಲಿ ನಡೆಯಲಿದೆ. ಕಪ್ಪು ಕೊಡೆಗಳನ್ನು ಹಿಡಿದು ವಿಭಿನ್ನವಾಗಿ ರ್ಯಾಲಿ ನಡೆಸಲು ಚಿಂತನೆ ನಡೆದಿದೆ.