Covid-19 New Variant : ಕೋವಿಡ್ ಹಳೆ ರೂಪಾಂತರಿ ತಳಿಗಳಿಗಿಂತ ತುಂಬಾ ಡೇಂಜರ್ XBB 1.5 ತಳಿ!
ಚೀನಾದಲ್ಲಿ ಕೊರೊನ ರೂಪಾಂತರಿ ಬಿಎಫ್-07 ಬಳಿಕ ಎಕ್ಸ್‌ಬಿಬಿ 1.5 ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ. ಈ ಹೊಸ ತಳಿ ಎಕ್ಸ್‌ಬಿಬಿ 1.5 ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಮಾಹಿತಿ ತಿಳಿಸಿದ್ದಾರೆ.
ಬೆಂಗಳೂರು : ಚೀನಾದಲ್ಲಿ ಕೊರೊನ ರೂಪಾಂತರಿ ಬಿಎಫ್-07 ಬಳಿಕ ಎಕ್ಸ್‌ಬಿಬಿ 1.5 ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ. ಈ ಹೊಸ ತಳಿ ಎಕ್ಸ್‌ಬಿಬಿ 1.5 ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಮಾಹಿತಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ತುಷಾರ್ ಗಿರಿನಾಥ್, ನಮ್ಮ ಆರೋಗ್ಯ ತಜ್ಞರು ಈ ಹೊಸ ತಳಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇರಿಯಿಂಟ್ ವೈರಸ್ ಬಗ್ಗೆ ಜಿನೋವಿಕ್ ಸಿಕ್ವೆನ್ಸಿಂಗ್ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಕೆಲ ತಜ್ಞ ವೈದ್ಯರು ಈ ಎಕ್ಸ್‌ಬಿಬಿ 1.5 ತಳಿ ತುಂಬಾ ಡೇಂಜರ್ ಆಗಿದೆ. ಈ ಮುಂಚೆ ಬಂದು ಹೋಗಿರುವ ರೂಪಾಂತರಿ ತಳಿಗಳಿಗಿಂತಲೂ ಡೇಂಜರ್ ಆಗಿದೆ ಎನ್ನಲಾಗ್ತಿದೆ. ನಮ್ಮ ತಜ್ಞ ವೈದ್ಯರು ಏನು ಹೇಳುತ್ತಾರೋ ಅದರಂತೆ ನಾವು ಸಿದ್ದತೆ ಮಾಡಿಕೊಳ್ಳುತ್ತೇವೆ. ಜೊತೆಗೆ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : BMTC Bus: ಇನ್ಮುಂದೆ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿ ಬಸ್ ಸಂಚಾರ
ಅಮೆರಿಕದಲ್ಲಿ ಎಕ್ಸ್‌ಬಿಬಿ 1.5 ಉಪತಳಿ ಈಗಾಗಲೇ ಕಾಣಿಸಿಕೊಂಡಿದ್ದು, ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ಹಲವೆಡೆ ಸೋಂಕು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ಕೊರೊನಾ ಉಪತಳಿ ಭಾರತದಲ್ಲಿ ಮೊದಲು ಗುಜರಾತಿನಲ್ಲಿ ಪತ್ತೆಯಾಗಿತ್ತು. ಈಗ ಕರ್ನಾಟಕದಲ್ಲಿ ಒಬ್ಬರಲ್ಲಿ ಎಕ್ಸ್‌ಬಿಬಿ 1.5 ರೂಪಾಂತರಿ ತಳಿ ಪತ್ತೆಯಾಗಿದೆ.
ಹಾಗೆಯೇ ರಾಜಸ್ಥಾನದಲ್ಲೂ ಸೋಂಕು ತಗುಲಿರುವ ಕೊರೊನಾ ಸೋಂಕು ತಗುಲಿರುವ ಒಬ್ಬರಲ್ಲಿ ಇದು ಪತ್ತೆಯಾಗಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ.ಈ ಹೊಸ ರೂಪಾಂತರ ತಳಿ ಅತೀ ಶೀಘ್ರವಾಗಿ ಸೋಂಕು ಹರಡುವ ಗುಣ ಹೊಂದಿದ್ದು, ಹೆಚ್ಚು ಮಾರಣಾಂತಿಕ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಅಮುಲ್ ಜೊತೆ ನಂದಿನಿ ವಿಲೀನ ಮಾಡಲಾಗುತ್ತದೆಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?: ಬಿಜೆಪಿ ಪ್ರಶ್ನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.