COVID-19 3rd Wave : ಕೊರೋನಾ 3ನೇ ಅಲೆ ಭೀತಿ: ಆ.15 ರ ನಂತರ ರಾಜ್ಯದಲ್ಲಿ ಕಠಿಣ ನಿಯಮ ಜಾರಿ
ಆಗಸ್ಟ್ 23 ರಿಂದ 9 ರಿಂದ 12 ತರಗತಿವರೆಗಿನ ಶಾಲಾ-ಕಾಲೇಜುಗಳನ್ನ ಪುನರಾರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಮೂರನೇ ಅಲೆಯ ಕುರಿತು ಉದ್ದೇಶಪೂರ್ವಕವಾಗಿ ಸಿಎಂ ತಜ್ಞರ ಜೊತೆ ತುರ್ತು ಸಭೆ ನಡೆಸಲಿದ್ದಾರೆ.
ನವದೆಹಲಿ : ಕೊರೋನಾ 3ನೇ ಅಲೆ ಭೀತಿಯ ನಡುವೆ ರಾಜ್ಯ ಸರ್ಕಾರವು ವೈರಸ್ ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ರಾಜ್ಯದ ಕೋವಿಡ್ -19 ಪರಿಸ್ಥಿತಿ ಕುರಿತು ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶನಿವಾರ ಸಭೆ ಕರೆಯಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಶುಕ್ರವಾರ (ಆಗಸ್ಟ್ 13) ತಿಳಿಸಿದ್ದಾರೆ.
ಆಗಸ್ಟ್ 23 ರಿಂದ 9 ರಿಂದ 12 ತರಗತಿವರೆಗಿನ ಶಾಲಾ-ಕಾಲೇಜುಗಳನ್ನ ಪುನರಾರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಮೂರನೇ ಅಲೆಯ(COVID-19 third wave) ಕುರಿತು ಉದ್ದೇಶಪೂರ್ವಕವಾಗಿ ಸಿಎಂ ತಜ್ಞರ ಜೊತೆ ತುರ್ತು ಸಭೆ ನಡೆಸಲಿದ್ದಾರೆ. ತಜ್ಞರನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಮಕ್ಕಳ ಮೇಲೆ ಕೋವಿಡ್ -19 3ನೇ ಅಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು, ಏಕೆಂದರೆ ಅವರು ಲಸಿಕೆ ನೀಡದ ಗುಂಪಿಗೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ : Karnataka lockdown Update: ಹೆಚ್ಚುತ್ತಿರುವ ಕರೋನ ಪ್ರಕರಣಗಳ ಮಧ್ಯೆಯೇ ಈ ನಿರ್ದೇಶನ ನೀಡಿದ ಸಿಎಂ ಬಸರಾಜ್ ಬೊಮ್ಮಾಯಿ
ನಾವು ಈಗಾಗಲೇ ಮಕ್ಕಳ ಸಂಪೂರ್ಣ ಮೇಲ್ವಿಚಾರಣೆಗಾಗಿ ಉಡುಪಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ 'ವಾತ್ಸಲ್ಯ' ಯೋಜನೆ(Vatsalya Yojana)ಯನ್ನು ಆರಂಭಿಸಿದ್ದೇವೆ. ಅವರ ಪೌಷ್ಠಿಕಾಂಶದ ಶಕ್ತಿಯನ್ನು ಪರೀಕ್ಷಿಸಲು ನಾವು ಮಕ್ಕಳ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತೇವೆ ಮತ್ತು ಪೌಷ್ಠಿಕಾಂಶದ ಕೊರತೆ ಮತ್ತು ಅಗತ್ಯ ಚಿಕಿತ್ಸೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಯೋಜನೆಯಲ್ಲಿ ಕೆಲಸ ಮಾಡುವ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ನಾವು ತರಬೇತಿ ನೀಡಿದ್ದೇವೆ ಮತ್ತು ಈ ವೈರಸ್(Coronavirus)ನಿಂದ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ಮಕ್ಕಳ ಐಸಿಯು ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಲಿ: ಸಿ.ಟಿ.ರವಿಗೆ ಸಿದ್ದರಾಮಯ್ಯ ಇತಿಹಾಸ ಪಾಠ!
ರಾಜ್ಯದಲ್ಲಿ ಆಗಸ್ಟ್ 1 ರಿಂದ 11 ರವರೆಗೆ 0-19 ವಯಸ್ಸಿನ 543 ಮಕ್ಕಳು ಕೊರೋನಾ(Corona)ಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 210 ಮಕ್ಕಳು 0-9 ವಯೋಮಾನದವರಾಗಿದ್ದು, 333 ಮಕ್ಕಳು 10-19 ವಯಸ್ಸಿನವರಾಗಿದ್ದಾರೆ. ಸೋಂಕಿತ ಮಕ್ಕಳು ಹೆಚ್ಚಾಗಿ ಲಕ್ಷಣರಹಿತರು ಅಥವಾ ಕೊರೋನಾ ಸೌಮ್ಯ ಲಕ್ಷಣಗಳು ಕಂಡು ಬಂದಿವೆ.
ಗುರುವಾರ ಬಿಡುಗಡೆ ಮಾಡಿದ ಆದೇಶದಲ್ಲಿ, ರಾಜ್ಯ ಸರ್ಕಾರವು ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 20 ರವರೆಗೆ ಎಲ್ಲಾ ಮೊಹರಂ ಮತ್ತು ಗಣೇಶ ಚತುರ್ಥಿ ಮೆರವಣಿಗೆಗಳನ್ನು ನಿಷೇಧಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ