ಬೆಂಗಳೂರು : ನಾಳೆ ಬೆಳಗಾವಿ ಲೋಕಸಭೆ, ಮಸ್ಕಿ, ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಕೋವಿಡ್ -19 ಪ್ರೋಟೋಕಾಲ್‌ಗಳಿಂದಾಗಿ ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಲಾಕ್ ಡೌನ್ ಮಧ್ಯೆ ಮೇ 2 ರ ಭಾನುವಾರ ಮತ ಎಣಿಕೆ(Vote Counting) ಪ್ರಕ್ರಿಯೆ ನಡೆಯಲಿದೆ.


ಕೋವಿಡ್ -19 ಪ್ರೋಟೋಕಾಲ್‌(Covid Protocol)ಗಳ ಕಾರಣ ಮತಗಳ ಎಣಿಕೆಯು "ಸಾಮಾನ್ಯ ಸಮಯಗಿಂತ  ಎರಡು ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಭಾನುವಾರ ಸಂಜೆ 4 ಗಂಟೆಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.


ಇದನ್ನೂ ಓದಿ : COVID-19 Crisis: ಆತಂಕ ತರಿಸಿದ ಬೆಂಗಳೂರಿನ ಕೊರೊನಾ ಪ್ರಕರಣಗಳ ಹೆಚ್ಚಳ


"ಮತ ಎಣಿಕೆಯ ಪ್ರಕ್ರಿಯೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದ ನಂತರ, ಇಡೀ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತದೆ. ಮತ್ತೆ  ಎರಡನೇ ಹಂತ ಪೂರ್ಣಗೊಳಿಸಲು ಬೇರೆ ಸಿಬ್ಬಂದಿಗಳು ಆಗಮಿಸುತ್ತಾರೆ. ಈ ರೀತಿಯಾಗಿ ಆಯೋಗ(Election Commission)ವು ಪ್ಲಾನ್ ಮಾಡಿಕೊಂಡಿದೆ, ಅಲ್ಲದೆ ಆಯೋಗವು ಕನಿಷ್ಠ ಮತ್ತು ಮಾನ್ಯತೆ ಹೊಂದಿದ ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸಲಿದ್ದಾರೆ.


ಇದನ್ನೂ ಓದಿ : Covid-19 in Karnataka: ಕರ್ನಾಟಕವನ್ನು ಬೆಚ್ಚಿಬೀಳಿಸಿದ ಕೊರೊನಾ, ಮೃತಪಟ್ಟವರಲ್ಲಿ ಶೇ.30 ರಷ್ಟು ಜನರಿಗೆ ಇತರ ಯಾವುದೇ ಕಾಯಿಲೆ ಇರಲಿಲ್ಲ


ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶಿಸುವ ಮೊದಲು ಅಭ್ಯರ್ಥಿಗಳು ಮತ್ತು ಏಜೆಂಟರು ಕೋವಿಡ್ ನೆಗೆಟಿವ್ ರಿಪೋರ್ಟ್(Covid Negative Report) ಹೊಂದಿರಬೇಕು. ಅಲ್ಲದೆ, ವಿಜೇತ ಅಭ್ಯರ್ಥಿಯೊಂದಿಗೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚು ಜನರಿಗೆ ಅನುಮತಿ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ : PMGKAY : 'ಪಡಿತರ ಚೀಟಿದಾರರಿಗೆ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿ 5 ಕೆಜಿ ಉಚಿತ ಅಕ್ಕಿ'


ಮೂರು ಕ್ಷೇತ್ರಗಳಿಗೆ ಒಟ್ಟು 23 ಸಭಾಂಗಣ(23 Halls)ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ, ಒಬ್ಬ ಮೈಕ್ರೋ ವೀಕ್ಷಕ, ಒಬ್ಬ ಇವಿಎಂ ಮತ್ತು ವಿವಿಪಿಎಟಿ ಸಹಾಯಕರು ಮತ್ತು ಪ್ರತಿ ಹಾಲ್‌ಗೆ ಇಬ್ಬರು ಟ್ಯಾಬ್ಯುಲೇಟಿಂಗ್ ಸಿಬ್ಬಂದಿ ಇರುತ್ತಾರೆ. ಪ್ರತಿ ಸಭಾಂಗಣದಲ್ಲಿ ಮಸ್ಕಿ ಮತ್ತು ಬಸವಕಲ್ಯಾನ್ ಉಪಚುನಾವಣೆಗಳಿಗೆ ನಾಲ್ಕು ಎಣಿಕೆ ಕೋಷ್ಟಕಗಳು ಇದ್ದರೆ, ಬೆಳಗಾವಿ ಸಂಸತ್ತಿನ ಚುನಾವಣೆಗೆ ಪ್ರತಿ ಸಭಾಂಗಣಕ್ಕೆ ಎರಡು ಕೋಷ್ಟಕಗಳು ಇರುತ್ತವೆ.


ಇದನ್ನೂ ಓದಿ : SSLC ಮತ್ತು PUC ವಿದ್ಯಾರ್ಥಿಗಳೇ ಗಮನಿಸಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.