ಬೆಂಗಳೂರು: ಕೇರಳದಲ್ಲಿನ ಭೀಕರ ಪ್ರವಾಹದ ಕುರಿತಾಗಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ  ನೀಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಶತಮಾನದದಲ್ಲೆಯೇ ಕಂಡಿಯರಿಯದ ಪ್ರವಾಹಕ್ಕೆ ಕೇರಳ ತುತ್ತಾಗಿತ್ತು ಈಗ ಈ ಕುರಿತು ಮಾತನಾಡಿರುವ ಯತ್ನಾಳ್ "ಗೋವುಗಳನ್ನು ಕೊಲ್ಲುವುದು ಹಿಂದುಗಳ ಭಾವನೆಗೆ ಧಕ್ಕೆಯನ್ನು ತರುತ್ತದೆ,ಆದ್ದರಿಂದ ಯಾರೊಬ್ಬರು ಕೂಡ ಮತ್ತೊಬ್ಬರ ಭಾವನೆಗಳಿಗೆ ತೊಂದರೆ ನೀಡಬಾರದು.ಇಲ್ಲವಾದರೆ ಕೇರಳದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೀವು ನೋಡಬಹುದು,ಅವರು ಬಹಿರಂಗವಾಗಿ ಗೋವುಗಳನ್ನು ಹತ್ಯೆ ಮಾಡುತ್ತಾರೆ ಇದರ ಪರಿಣಾಮವಾಗಿ ಒಂದು ವರ್ಷದ ಒಳಗೆ ಈ ಸ್ಥಿತಿಗೆ ಬಂದಿದ್ದಾರೆ.ಆದ್ದರಿಂದ ಯಾರಾದರೂ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದರೆ ಅವರು ಇದೇ ರೀತಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.  


ಇದೇ ಯತ್ನಾಳ್ ರು ಕಳೆದ ತಿಂಗಳು ಒಂದು ವೇಳೆ ತಾವು ಗೃಹಮಂತ್ರಿಯಾಗಿದ್ದಾರೆ ಬುದ್ದಿಜೀವಿಗಳನ್ನು ಗುಂಡಿಕ್ಕಿಕೊಳ್ಳುತ್ತಿದ್ದೆ ಎಂದು ವಿವಾದಾತ್ಮಾಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು.ಅಲ್ಲದೆ ಅವರ  ಹೇಳಿಕೆಗೆ ಭಾರಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.