ಬೆಂಗಳೂರು : ಸೋಮವಾರದಿಂದ ರಾಜ್ಯದಲ್ಲಿ ಗೋಹತ್ಯೆ (cow slaughter)ನಿಷೇಧ ಸುಗ್ರೀವಾಜ್ಞೆ (ordinance)ಜಾರಿಯಾಗಲಿದೆ.  ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣೆ (Karnataka Prevention of Slaughter and Preservation of Cattle Bill) ಎಂಬ ಹೆಸರಿನಲ್ಲಿ  ಸುಗ್ರೀವಾಜ್ಞೆ  ಜಾರಿಯಾಗಲಿದೆ. ಹಾಗಾಗಿ ರಾಜ್ಯದಲ್ಲಿ ಸೋಮವಾರದಿಂದ ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟ ಸಂಪೂರ್ಣ ನಿಷೇಧಿತವಾಗಲಿದೆ.  ಪಶುಸಂಗೋಪನೆ, ಹಜ್‌ ಮತ್ತು ವಕ್ಫ್‌ ಸಚಿವ ಪ್ರಭು ಚವ್ಹಾಣ್‌ ( Prabhu Chauhan) ಈ  ವಿಷಯ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಜಾನುವಾರು ಸಾಗಣೆಯಲ್ಲಿ ಗೊಂದಲ ಬೇಡ:
ಜಾನುವಾರು ಸಾಗಾಣಿಕೆಗೆ ಕೂಡಲೇ ನಿಯಮಗಳನ್ನು ಜಾರಿಗೊಳಿಸಲಾಗುವುದು. ಕೃಷಿ (Agriculture) ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಗೊಂದಲಕ್ಕೀಡಾಗಬಾರದು. ಹತ್ಯೆ ಉದ್ದೇಶದಲ್ಲಿ ಜಾನುವಾರುಗಳ ಸಾಗಣೆ  ಮತ್ತು ಕೃಷಿ ಉದ್ದೇಶದ ಜಾನುವಾರುಗಳ ಸಾಗಣೆಯಲ್ಲಿ ಸ್ಪಷ್ಟತೆ ಗಮನಿಸಬೇಕು  ಎಂದು ಸಚಿವರು ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.  


ಇದನ್ನೂ ಓದಿ'ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ತಾಂಡವದಿಂದ ಅಭಿವೃದ್ದಿ ಕೆಲಸಗಳು ದೂರವಾಗಿವೆ'


ಪೊಲೀಸ್‌ ಇಲಾಖೆಯು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯ ಜತೆ ಕೈಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯಿದೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಭು ಚವ್ಹಾಣ್ ( Prabhu Chauhan)ತಿಳಿಸಲಾಗಿದೆ. ಅಲ್ಲದೇ ಗೋಹತ್ಯೆ, ಜಾನುವಾರುಗಳ ಅಕ್ರಮ ಸಾಗಾಟದ  ಮೇಲೆ ಪೊಲೀಸರು (Police) ಮತ್ತು ಪಶುಸಂಗೋಪನಾ ಇಲಾಖೆ ಕಣ್ಗಾವಲಿಡಬೇಕು ಎಂದು ನಿರ್ದೇಶನ  ನೀಡಲಾಗಿದೆ. 


ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ..!
ಗೋವುಗಳ (Cow) ಅಕ್ರಮ ಸಾಗಾಟ ಮತ್ತು ಹತ್ಯೆ  ವಿಷಯ  ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್‌ ಠಾಣೆ ಅಥವಾ ಆ ಜಿಲ್ಲೆಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಕೋರಲಾಗಿದೆ.  ಸಾರ್ವಜನಿಕರು ಉದ್ವೇಗದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
 
ಇದನ್ನೂ ಓದಿ: BJP MLA,: 'ನನಗೇನಾದರೂ ಆದರೆ ಸಿಎಂ ಯಡಿಯೂರಪ್ಪನವರೇ ಹೊಣೆ'


ಈ ಸುಗ್ರೀವಾಜ್ಞೆ ಜಾರಿಗೆ ಬಂದಾಕ್ಷಣ ರಾಜ್ಯದಲ್ಲಿ ಗೋಹತ್ಯೆ ಮೇಲೆ ಪೂರ್ಣ ಪ್ರಮಾಣದ ನಿಷೇಧ ಹೇರಲಾಗುತ್ತದೆ. ಕಾನೂನು ಉಲ್ಲಂಘನೆಗೆ ಗರಿಷ್ಠ 7 ವರ್ಷ ಜೈಲು (Jail) ಹಾಗೂ 5 ಲಕ್ಷ ದಂಡ ವಿಧಿಸಬಹುದಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.