ಬೆಂಗಳೂರು: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಖಾಸಗಿ ನಿವಾಸಿಗಳಿಂದ ದಾಖಲಿಸುವ ಕಾರ್ಯ ಶೇ.92.16 ರಷ್ಟು ಪ್ರಗತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಸತತ ಮಳೆಯಿಂದಾಗಿ ಬೆಳೆ ಸಮೀಕ್ಷೆ ಕಾರ್ಯ ಸಂಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ.ಇದನ್ನು ಪರಿಗಣಿಸಿ ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ಅಕ್ಟೋಬರ್ 15,2020 ರವರೆಗೆ ವಿಸ್ತರಿಸಲಾಗಿದೆ. 


ರೈತರೇ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆಯ ನೂತನ ಯೋಜನೆ ಇಲ್ಲಿದೆ ..!


COMMERCIAL BREAK
SCROLL TO CONTINUE READING

ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆಯ ವಿವರಗಳನ್ನು ದಾಖಲಿಸದಿದ್ದರೆ ತಾಂತ್ರಿಕ ಕಾರಣಗಳಿಂದಾಗಿ ರೈತರು ಕೃಷಿಗೆ ಸಂಬಂಧಿತ ಸರಕಾರದ ಸೌಲಭ್ಯಗಳಾದ ಬೆಳೆಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಇತರೆ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆಯಿದೆ.


ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಎಲ್ಲ ರೈತರು ತಮ್ಮೆಲ್ಲ ಬೆಳೆಗಳ ಸಮೀಕ್ಷೆಯನ್ನು ಖಾಸಗಿ ನಿವಾಸಿಗಳ ಸಹಯೋಗದೊಂದಿಗೆ ಕೈಗೊಂಡು ಶೇ.100 ರಷ್ಟು ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮತ್ತು ಜಂಟಿ ಕೃಷಿ ನಿರ್ದೇಶಕ ರಾಜಶೇಖರ .ಐ. ಬಿಜಾಪೂರ  ಇವರು ಮನವಿ ಮಾಡಿರುತ್ತಾರೆ.