ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮೊಬೈಲ್ ಆ್ಯಪ್ ಮೂಲಕ ರೈತರು ತಾವು ಬೆಳೆದ ಬೆಳೆಯ ವಿವರಗಳನ್ನು ದಾಖಲಿಸುವ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.


COMMERCIAL BREAK
SCROLL TO CONTINUE READING

ಧಾರವಾಡ ಜಿಲ್ಲೆಯ ಒಟ್ಟು 2,98,750 ಪ್ಲಾಟ್‍ಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದ್ದು, ಆದರೆ ಇಲ್ಲಿಯವರೆಗೂ 1,21,938 ಪ್ಲಾಟಗಳಲ್ಲಿ ಮಾತ್ರ ಸಮೀಕ್ಷೆ ಕೈಗೊಂಡು ಬೆಳೆಯ ವಿವರಗಳನ್ನು ರೈತರು ಆ್ಯಪ್ ಮೂಲಕ ಸಲ್ಲಿಸಿದ್ದಾರೆ (ಶೇ 40.81 ರಷ್ಟು ಪ್ರಗತಿ) ಮತ್ತು ಇನ್ನೂ 1,76,812 ಪ್ಲಾಟ್‍ಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುವುದು ಬಾಕಿ (ಶೇ 59.19 ರಷ್ಟು) ಇದೆ.


ಸೆಪ್ಟೆಂಬರ್ 23, 2020 ರ ವರೆಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಅವಕಾಶವಿರುವುದರಿಂದ ಜಿಲ್ಲೆಯ ಎಲ್ಲ ರೈತರು ತಾವು ಬೆಳೆದಿರುವ ಬೆಳೆ ವಿವರಗಳನ್ನು ಸರ್ವೆ ನಂಬರವಾರು ಕೂಡಲೇ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಕಡ್ಡಾಯವಾಗಿ ದಾಖಲಿಸಬೇಕು.


ರೈತರೇ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆಯ ನೂತನ ಯೋಜನೆ ಇಲ್ಲಿದೆ ..!


ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಬೆಳೆಯ ವಿವರಗಳನ್ನು ದಾಖಲಿಸದಿದ್ದರೆ ತಾಂತ್ರಿಕ ಕಾರಣಗಳಿಂದಾಗಿ ರೈತರು ಕೃಷಿಗೆ ಸಂಬಂಧಿತ ಸರಕಾರದ ಸೌಲಭ್ಯಗಳಾದ ಬೆಳೆಸಾಲ, ಬೆಳೆವಿಮೆ, ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಇತರೆ ಸವಲತ್ತುಗಳಿಂದ ವಂಚಿತರಾಗುವ ಸಾಧ್ಯತೆಯಿದೆ.


ಬೆಳೆ ಸಮೀಕ್ಷೆಗೆ ರೈತರ ಸಹಭಾಗಿತ್ವ ಮತ್ತು ಸಹಕಾರ ಅತೀ ಅಗತ್ಯವಾಗಿದ್ದು, ಜಿಲ್ಲೆಯ ಎಲ್ಲ ಪ್ಲಾಟ್‍ಗಳನ್ನು ಸಮೀಕ್ಷೆಗೆ ಒಳಪಡಿಸಿ ಸರಕಾರದ ಸವಲತ್ತುಗಳನ್ನು ಅಡಚಣೆಯಿಲ್ಲದೆ ಪಡೆದುಕೊಳ್ಳುವಲ್ಲಿ ಜಿಲ್ಲೆಯ ಎಲ್ಲ ರೈತ ಬಾಂಧವರು ಆತ್ಮ ನಿರ್ಭರರಾಗಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ. ಬಿಜಾಪುರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.