ಬೆಂಗಳೂರು : ಅರ್ಕಾವತಿ ಹಗರಣದ ಕೆಂಪಣ್ಣ ವರದಿ ಮಂಡನೆ ಮಾಡದೆ ಇರುವುದು ನಮ್ಮ ಸರ್ಕಾರದ ತಪ್ಪು, ಆದರೆ ಅರ್ಕಾವತಿ ಹಗರಣ 8 ಸಾವಿರ ಕೋಟಿ ತಿಂದವ ಖದೀಮ ಯಾರು ಎಂದು ತಿಳಿಯಬೇಕು, ಜೊತೆಗೆ ನಮ್ಮ ಪಕ್ಷದಲ್ಲೂ ಹೊಂದಾಣಿಕೆ ರಾಜಕಾರಣ ಇದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒಪ್ಪಿಕೊಂಡರು.


COMMERCIAL BREAK
SCROLL TO CONTINUE READING

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನ್ನಾಡಿದ ಸಿಟಿ ರವಿ, ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಲಾದರೂ ತನಿಖೆ ಮಾಡಿ. ಕೆಂಪಣ್ಣ ವರದಿ ಟೇಬಲ್ ಮಾಡಿ, ಪೊಲೀಸ್ ಹಗರಣ ಆಗಿದೆ ಎಂದು ಈಗ ನೀವು ಬೇರೆಯವರ ಮೇಲೆ ಆರೋಪ ಮಾಡುವಂತಿಲ್ಲ. ನಿಮ್ಮ ಕೈಯಲ್ಲೇ ಎಲ್ಲಾ ಇದೆ. ತನಿಖೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು.


ಇದನ್ನೂ ಓದಿ: 2023 ವಿಧಾನಸಭೆ ಚುನಾವಣೆ: ಬಿಜೆಪಿ ಹೀನಾಯ ಸೋಲಿಗೆ ಯಾರೆಲ್ಲಾ ಬದಲಾವಣೆ?


ಹೊಂದಾಣಿಕೆ ರಾಜಕಾರಣ : ಕೆಲವು ಸಂಗತಿಗಳನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಮಾತಾಡ್ತೀವಿ. ಕಾಂಗ್ರೆಸ್‌ನವರು ನವರು ಒಂದಷ್ಟು ಆರೋಪಗಳನ್ನು ನಮ್ಮ ಮೇಲೆ ಮಾಡಿದ್ರು,ಅದನ್ನೆಲ್ಲ ಕಾಂಗ್ರೆಸ್‌ನವರು ಈಗ ಸಾಬೀತು ಮಾಡಿ ತೋರಿಸಲಿ. ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿದೆ. ಎಲ್ಲಾ ಪಾರ್ಟಿಯಲ್ಲೂ ಹೊಂದಾಣಿಕೆ ರಾಜಕೀಯ ಮಾಡೋರು ಇದ್ದಾರೆ, ಇದಕ್ಕೆ ಬಿಜೆಪಿಯೂ ಹೊರತಲ್ಲ.ನೇರವಾಗಿ ಮಾತಾಡೋರ ಮೇಲೆ ಮುಗಿಬೀಳುತ್ತಾರೆ. ಪಕ್ಷದ ಸೂಕ್ತ ವೇದಿಕೆಯಲ್ಲಿ ಹೊಂದಾಣಿಕೆ ರಾಜಕಾರಣಿದ ಬಗ್ಗೆ ಚರ್ಚೆ ಮಾಡ್ತೇವೆ. ಬಹಿರಂಗವಾಗಿ ಹೇಳೊಕೆ ಸಾಧ್ಯವಿಲ್ಲ, ಎಂದರು.


ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನ ಸೇವಕರಾಗಿ ಮೂವತ್ತು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪರ್ಕ ಅಭಿಯಾನ ಮಾಡಲಾಗುತ್ತದೆ. 28 ಲೋಕಸಭೆ ಕ್ಷೇತ್ರಗಳಲ್ಲೂ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್, ರಾಷ್ಟ್ರೀಯ ಪದಾಧಿಕಾರಿಗಳು, ನಿರ್ಮಲಾ ಸೀತಾರಾಮನ್ ಮುಂತಾದವರು ಪ್ರವಾಸ ಮಾಡ್ತಾರೆ. ಮಹಾಜನ ಸಂಪರ್ಕ ಅಭಿಯಾನ ಮೂಲಕ ಲೋಕಸಭೆ ಚುನಾವಣೆಗೆ ತಾಲೀಮು, ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.