Bengaluru Rain: ರಾಜ್ಯ ರಾಜಧಾನಿಗೆ ಅಸಾನಿ ಪ್ರಭಾವ: ಚಳಿ-ಮಳೆಗೆ ತತ್ತರಿಸಿದ ಜನತೆ
ಇಂದು ಮತ್ತು ನಾಳೆ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆ ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆ ಇದ್ದು, ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿಗೆ ಅಸಾನಿ ಚಂಡಮಾರುತ ಪ್ರಭಾವ ತಟ್ಟಿದ್ದು 50 ವರ್ಷಗಳ ಬಳಿಕ ಕಡಿಮೆ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೊಂದೆಡೆ ಮಳೆಯ ಅಬ್ಬರವೂ ಇದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ಅಸಾನಿ ಎಫೆಕ್ಟ್‌ನಿಂದ ಮೈಕೊರೆಯುವ ಚಳಿ: 50 ವರ್ಷದ ಬಳಿಕ ಕನಿಷ್ಟ ಉಷ್ಣಾಂಶ ದಾಖಲು
ಇಂದು ಮತ್ತು ನಾಳೆ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆ ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆ ಇದ್ದು, ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ. ಮೇ 15 ,16 ರಂದು ಹಲವೆಡೆ ಮಳೆಯಾಗುವ ಸಾಧ್ಯತೆ ಇದ್ದು, ಮೇ 17 ರಂದು ಮಳೆ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಸದ್ಯ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಮೇಲ್ಮೈಗೆ ಸುಳಿಗಾಳಿ ವಿಸ್ತರಿಸಿದೆ. ಮುಂಗಾರು ಮಾರುತವು ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳಕೊಲ್ಲಿಯತ್ತ ಮೇ 15 ನೇ ತಾರೀಕಿನ ವೇಳೆಗೆ ಪ್ರವೇಶಿಸುವ ಸಾಧ್ಯತೆ ಎಂದು ಹವಾಮಾನ ವರದಿ ತಿಳಿಸಿದೆ.
ಈ ಬಾರಿ ಮುಂಗಾರು ಬೇಗ ಪ್ರವೇಶ:
ಮುಂಗಾರು ಮಾರುತವು ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯತ್ತ ಮೇ 15 ನೇ ತಾರೀಕಿನ ವೇಳೆಗೆ ಪ್ರವೇಶಿಸುವ ಸಾಧ್ಯತೆ ಎಂದು ಹವಾಮಾನ ವರದಿ ತಿಳಿಸಿದ್ದು, ಆ ಪ್ರಕಾರ ದೇಶಕ್ಕೆ ಮುಂಗಾರು ಈ ವರ್ಷ ನಾಲ್ಕೈದು ದಿನ ಬೇಗ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ 25 ರ ನಂತರದಲ್ಲೇ ಮಳೆಗಾಲ ಆರಂಭವಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇದನ್ನು ಓದಿ: Coffee Side Effects: ಕಾಫಿ ಪ್ರಿಯರೇ... ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿದ್ರೆ ಅಪಾಯ ಕಟ್ಟಿಟ್ಟ
ಇನ್ನು ಈ ಅಸಾನಿ ಚಂಡಮಾರುತವು ರೈತರ ಪಾಲಿಗೆ ಕೊಂಚ ವರದಾನವಾಗಿ ಪರಿಣಮಿಸಿದೆ. ಅಡಿಕೆ ಬೆಳೆಗಾರರಿಗೆ ಈ ವಾತಾವರಣ ಸೂಕ್ತವಾಗಿದ್ದು ಕೃಷಿಗೆ ಪೂರಕವಾಗಿದೆ ಎನ್ನಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.