ಚಾಮರಾಜನಗರ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಕಳೆದ ಎರಡು ದಿನಗಳಿಂದ ಸತತವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಬಾರಿ ಮಳೆಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ತಂಬಡಗೇರಿ ಸಮೀಪದ ಪುಟ್ಟಸ್ವಾಮಿ ಹಾಗೂ ರಾಜೇಶ್ವರಿ ಎಂಬ ದಂಪತಿಗೆ ಸೇರಿದ ಮನೆಯ ಗೋಡೆ ಕುಸಿತು ಅಪಾರ ಪ್ರಮಾಣದ ಪಾತ್ರೆ ಸಾಮಾಗ್ರಿಗಳು ನೆಲಕಚ್ಚಿದೆ. 


COMMERCIAL BREAK
SCROLL TO CONTINUE READING

ಪಾತ್ರೆ ಸಾಮಾಗ್ರಿಗಳ ಜೊತೆಗೆ ಗೋಡೆ ಕುಸಿದಿರುವುದರಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಇದಲ್ಲದೆ ಸತತ ಮಳೆಯಾಗುತ್ತಿರುವ ಹಿನ್ನೆಲೆ ಸಂಪೂರ್ಣ ಒಂದು ಭಾಗ ಗೋಡೆ ಕುಸಿಯುವ ಭೀತಿಯಲ್ಲಿ ದಂಪತಿಗಳಿದ್ದಾರೆ. 


ಸೂಕ್ತ ಪರಿಹಾರಕ್ಕೆ ಒತ್ತಾಯ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ತಂಬಡಿಗೇರಿ ನಿವಾಸಿಗಳಾದ ರಾಜೇಶ್ವರಿ ಹಾಗೂ ಪುಟ್ಟಸ್ವಾಮಿ ಬಡವರಾಗಿದ್ದು ಇರುವ ಮನೆಯ ಗೋಡೆ ಕುಸಿದಿರುವುದರಿಂದ  ಹೆದರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ. 


ಇದನ್ನೂ ಓದಿ: ಸಾನ್ವಿ ಸುದೀಪ್‌ ಟ್ಯಾಟೂ ವಿಡಿಯೋ ವೈರಲ್‌.. ಯಾರಿದು ʻಪಿಕುʼ, ಇವರ ಹೆಸರನ್ನು ಹಚ್ಚೆ ಹಾಕಿಸಿದ್ದೇಕೆ ಕಿಚ್ಚನ ಮಗಳು!


ಇನ್ನು ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಹಿನ್ನೆಲೆ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಸಮರ್ಪಕ ಮಳೆಯಾದ ಹಿನ್ನೆಲೆ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು . ಆದರೆ ಕಳೆದೆರಡು ದಿನಗಳಿಂದ ಬೀಳುತ್ತಿರುವ ಪೆಂಗಲ್ ಚಂಡಮಾರುತದ ಮಳೆಗೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಸಲನತ್ತ ಗ್ರಾಮದ ರೈತ ನಾಗರಾಜರವರಿಗೆ ಸೇರಿದ ರಾಗಿ ಹಾಗೂ ತೊಗರಿ ಬೆಳೆ ಸಂಪೂರ್ಣವಾಗಿ ನೆಲೆ ಕಚ್ಚಿದೆ. 


ರೈತ ನಾಗರಾಜುರವರು ತಮಗೆ ಸೇರಿದ ಎರಡೂವರೆ ಎಕರೆ ಜಮೀನಿನಲ್ಲಿ ರಾಗಿ ,ತೊಗರಿ ಬೆಳೆದಿದ್ದರು. ಸಮರ್ಪಕ ಮಳೆಯಾಗಿದ್ದ ಹಿನ್ನೆಲೆ ಉತ್ತಮ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಪೆಂಗಲ್ ಚಂಡಮಾರುತ  ಬರಸಿಡಿಲು ಬಡಿದು ಕೈಗೆ ಬಂದ ತುತ್ತು ಬಾಯಿಗೆ ಬಾರದ ರೀತಿ ಆಗಿದೆ. ಸತತವಾಗಿ ಎರಡು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಗೆ ರಾಗಿ ಬೆಳೆ ಸಂಪೂರ್ಣ ನೆಲೆ ಕಚ್ಚಿರುವುದರಿಂದ ಸಂಪೂರ್ಣ ನಷ್ಟವಾಗಿದೆ. ಸತತವಾಗಿ ಬೀಸುತ್ತಿರುವ ಬಿರುಗಾಳಿಗೆ ತೊಗರಿ ಗಳಗಳು ಸಹ ಬಾಗಿರುವುದರಿಂದ ಈ ಬೆಳೆಯು ನಷ್ಟವಾಗಿದೆ ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಬೇಕೆಂದು ರೈತ ನಾಗರಾಜು ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಏನ್‌ ಬದಲಾವಣೆ ಗುರು.. ಈ ಲೇಡಿ ಈಗ ಪ್ಯಾನ್ ಇಂಡಿಯಾ ಬ್ಯೂಟಿ ಅಂದ್ರೆ ನಂಬ್ತೀರಾ..?


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.