ಐಟಿ ಸಿಟಿಗೂ ತಟ್ಟಿದ ಒಕ್ಹಿ ಎಫೆಕ್ಟ್
ಬೆಂಗಳೂರು : ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬೀಸುತ್ತಿರುವ `ಒಕ್ಹಿ' ಚಂಡಮಾರುತದ ಎಫೆಕ್ಟ್ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಗುಲಿದೆ.
ಕಳೆದ ಒಂದು ವಾರದಿಂದ ಬೆಂಗಳೂರು, ಮೈಸೂರು ಭಾಗಗಳಲ್ಲಿ ಮಳೆ ಹಾಗು ಚಳಿ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಗೆ ಓಡಾಡುವುದೂ ಕಷ್ಟವಾಗುತ್ತಿದೆ. ಇದರಿಂದಾಗಿ ಜ್ವರ, ಚಳಿ, ನೆಗಡಿ, ಕೆಮ್ಮು ಮೊದಲಾದ ರೋಗಗಳಿಂದ ಜನರು ಬಳಲುತ್ತಿದ್ದು, ಆಸ್ಪತ್ರೆಗೆ ಹೋಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದ ತಮಿಳುನಾಡಿನಾಡಿಗೆ ‘ಒಕ್ಹಿ’ ಚಂಡಮಾರುತ ದಾಳಿ ಮಾಡಿದ್ದು, ಅಲ್ಲಿನ ಜನಜೀವನ ಈಗಾಗಲೇ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆದರೆ ಈ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ತಗುಲಿದ್ದು, ಜನರು ಅನಾರೋಗ್ಯದಿಂದ ಬಳಲುವಂತೆ ಮಾಡಿದೆ.