ಬೆಂಗಳೂರು:'ನನಗೂ ಸಿಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನು ಪ್ರಕಾರ ತನಿಖೆ ಮಾಡಲಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ರಮೇಶ್ ಜಾರಕಿಹೊಳಿ(Ramesh Jarkiholi), ಹಾಗೂ ಸಂತ್ರಸ್ತ ಯುವತಿ ಪೋಷಕರ ಆರೋಪ ಸಂಬಂಧ ಹೊಸೂರಿನಲ್ಲಿ ಮಾಧ್ಯಮದವರು ಶನಿವಾರ ಸಂಜೆ ಕೇಳಿದ ಪ್ರಶ್ನೆಗಳಿಗೆ  ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:


'ಪಾಪ, ಅವರು ಹತಾಶರಾಗಿದ್ದಾರೆ, ಬೇಸರದಲ್ಲಿದ್ದಾರೆ. ಅವರಿಗೆ ಅವರ ಸಮಸ್ಯೆ ಇದೆ. ಹೀಗಾಗಿ ಮಾತನಾಡುತ್ತಾರೆ. ಅವರಿಗೆ ಉತ್ತರ ಕೊಡಲು ಹೋಗುವುದಿಲ್ಲ. ಕಾನೂನಿದೆ, ಪೊಲೀಸ್ ಅಧಿಕಾರಿಗಳಿದ್ದಾರೆ.  ತನಿಖೆ ನಡೆಯುತ್ತಿದೆ. ಎಲ್ಲ ವಿಚಾರಣೆ ಮುಗಿಯಲಿ.


ಇದನ್ನೂ ಓದಿ: Ramesh Jarkiholi: ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಡಾಮಂಡಲವಾಗಿ ಹಿಗ್ಗಾಮುಗ್ಗಾ ವಾಗ್ದಾಳಿ!


ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ. ಅವರೇ ಇದನ್ನು ಬಗೆಹರಿಸಿಕೊಳ್ಳಬೇಕು.ರಮೇಶ್ ಜಾರಕಿಹೊಳಿ ಅವರು ಇವತ್ತೊಂದು ಮಾತನಾಡುತ್ತಾರೆ, ನಾಳೆ ಒಂದು ಮಾತನಾಡುತ್ತಾರೆ,ನಾಡಿದ್ದು ಒಂದು ಮಾತನಾಡುತ್ತಾರೆ. ಅವಕ್ಕೆಲ್ಲ ಉತ್ತರ ಕೊಟ್ಟುಕೊಂಡು ಕೂರಲು ನಾನು ತಯಾರಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಅವರದೇ ಸರ್ಕಾರ ಇದೆ. ಕಾನೂನು ಪ್ರಕಾರ ತನಿಖೆ ಮಾಡಲಿ. ತಪ್ಪು ಮಾಡಿರುವವರಿಗೆ ಶಿಕ್ಷೆ ನೀಡಲಿ.


ಇದನ್ನೂ ಓದಿ: SIT ವಿಚಾರಣೆ ಬಳಿಕ CD ಯುವತಿ ಪೋಷಕರಿಂದ ಶಾಕಿಂಗ್ ನ್ಯೂಸ್..!


ನಾನು ಸಂತ್ರಸ್ತ ಯುವತಿಯನ್ನು ಭೇಟಿ ಮಾಡಿಲ್ಲ. ನನ್ನ ಬಳಿ ಯಾರೂ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ