`ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ`
ಸಿಟಿ ರವಿ ವಿರುದ್ಧ ಟೀಕಾ ಪ್ರಹಾರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಎಂದು ಅವರು ಕಿಡಿ ಕಾರಿದ್ದಾರೆ.
ಮೈಸೂರು: ಸಿಟಿ ರವಿ ವಿರುದ್ಧ ಟೀಕಾ ಪ್ರಹಾರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : "ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಇದ್ದಷ್ಟು ನಮಗೆ ಒಳ್ಳೆಯದ್ದು"
ನೀವು ಕಣ್ಣೀರು ಹಾಕಿರುವುದಕ್ಕೆ ಸಿ.ಟಿ ರವಿ ವ್ಯಂಗ್ಯ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ನಾನು ಕಣ್ಣೀರು ಹಾಕಿದ್ದಕ್ಕೆ ಅವನು ವ್ಯಂಗ್ಯ ಮಾಡಲಿ. ಅವನಿಗೆ ಹೃದಯ, ಮಾನವೀಯತೆ ಇದ್ದರೆ ತಾನೆ. ಅವರ ಮಂತ್ರಿಗಳು ಸೌಜನ್ಯಕ್ಕೂ ಹೋಗಿ ಆ ಮೃತರ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ. ನಾನು ಸಿದ್ದರಾಮಯ್ಯನವರು ಬಂದು ಅವರನ್ನು ಭೇಟಿ ಮಾಡಿ ತನಿಖೆ ಮಾಡಿದ ನಂತರ 36 ಜನ ಸತ್ತಿರುವ ಮಾಹಿತಿ ಬಹಿರಂಗವಾಯಿತು. ನಂತರ ನ್ಯಾಯಾಲಯದ ಸಮಿತಿ ಕೂಡ ಇದನ್ನು ತಿಳಿಸಿತು. ನಂತರ ನಾನು ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದೆ. ಅವರ ಪರಿಸ್ಥಿತಿ ನನ್ನ ಮನೆ, ನನ್ನ ತಂಗಿ ಮನೆಯಲ್ಲಿ ಆದರೆ, ಅವನ ಮನೆಯಲ್ಲಿ ಆದರೆ ಪರಿಸ್ಥಿತಿ ಏನು? ಎಂದು ಪ್ರತಿ ಮನೆಯಲ್ಲಿ ಕೂತು ಮಾತನಾಡಿದ್ದೇನೆ. ಆ ಮಕ್ಕಳು, ತಾಯಿ ಕಾಣುತ್ತಿದ್ದ ಕನಸು ಏನು ಎಂದು ನಮಗೆ ಗೊತಿದೆ. ರವಿ ಹಾಗೂ ಬಿಜೆಪಿಯವರಿಗೆ ಕಣ್ಣು, ಹೃದಯ ಏನೂ ಇಲ್ಲ’ ಎಂದು ಹರಿಹಾಯ್ದರು.
ಇದನ್ನೂ ಓದಿ : Palmistry: ಹಸ್ತದಲ್ಲಿರುವ ಈ ರೇಖೆಗಳಿಂದ ಹಿಂದಿನ ಜನ್ಮದ ರಹಸ್ಯ ತಿಳಿಯಬಹುದು.!
ರಾಹುಲ್ ಗಾಂಧಿ ಅವರಿಗೆ ಸಿ.ಟಿ ರವಿ ಅವರು ಪ್ರಶ್ನೆ ಮಾಡಿರುವ ಬಗ್ಗೆ ಕೇಳಿದಾಗ, ‘ಹತಾಶರಾದವ ರವಿ ನಾಲಿಗೆಗೆ ಮೂಳೆ ಇಲ್ಲ. ಮುಖ್ಯಮಂತ್ರಿ ಮಾತನಾಡಲಿ ನಾವು ಉತ್ತರ ನೀಡುತ್ತೇವೆ. ನಾವು ದಿನನಿತ್ಯ ಅವರ ಪ್ರಣಾಳಿಕೆ ಬಗ್ಗೆ ಕೇಳುತ್ತಿರುವ ಪ್ರಶ್ನೆಗೆ ಅವರು ಉತ್ತರ ನೀಡಲಿ. ನಂತರ ನಾವು ಉತ್ತರ ನೀಡುತ್ತೇವೆ. ಅಸೂಯೆಗೆ ಮದ್ದಿಲ್ಲ ಎಂಬಂತೆ. ಈ ದೇಶದ ಜನರು ನಮ್ಮ ಯಾತ್ರೆಗೆ ನೀಡುತ್ತಿರುವ ಬೆಂಬಲವನ್ನು ಕಂಡು ಸಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸವನ್ನು ಸಹಿಸದೆ ಗಮನ ಬೇರೆಡೆ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಏನಾದರೂ ಪ್ರಯತ್ನಿಸಲಿ, ಜನ ಅವರಿಗೆ ಉತ್ತರ ನೀಡುತ್ತಾರೆ’ ಎಂದು ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.