ಬೆಂಗಳೂರು: 'ರಾಜ್ಯದ ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ ಡಿ ಕೆ ಶಿವಕುಮಾರ್ ಅವರೇ' ಎಂದು ರಾಜ್ಯ ಬಿಜೆಪಿ ಘಟಕ ಟ್ವಿಟರ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್‌ ಮಾಡಿ ಪ್ರಶ್ನೆ ಮಾಡಿದೆ.


COMMERCIAL BREAK
SCROLL TO CONTINUE READING

ಸಂಪತ್‌ ರಾಜ್‌ ಬಂಧನದ ಬೆನ್ನಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ಈಗಲಾದರೂ ನನ್ನ ಪರವಾಗಿ ನಿಲ್ಲಿ ಎನ್ನುವ ಮಾಧ್ಯಮದ ಹೇಳಿಕೆಯನ್ನು ಕೂಡ ಬಿಜೆಪಿ(BJP) ಇದೇ ವೇಳೆ ಪ್ರಸ್ತಾಪ ಮಾಡಿದ್ದು, ಸಂಪತ್ ರಾಜ್ ಬಂಧನದ ಬಳಿಕ ಹೇಳಿದ ಮಾತಿದು. ಏನಾಗುತ್ತಿದೆ ಕಾಂಗ್ರೆಸ್‌ ಅಂತ ಪ್ರಶ್ನೆ ಮಾಡಿದೆ.


[[{"fid":"197377","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಬೆಂಗಳೂರು ಗಲಭೆಯ ಮಾಸ್ಟರ್ ಮೈಂಡ್ ಸಂಪತ್ ರಾಜ್ ಬಂಧನ; ತಿಂಗಳಾನುಗಟ್ಟಲೆ ಆತ ಅಡಗಿ ಕುಳಿತಿದ್ದೆಲ್ಲಿ ಗೊತ್ತೆ?


ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾಲದಿಂದಲೇ ಕಾಂಗ್ರೆಸ್‌ ದಲಿತರ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲೂ ಅದರ ಮುಂದುವರೆದ ಭಾಗಗಳನ್ನು‌ ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ‌. ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು  ಪರಮೇಶ್ವರ್ ಅವರ ಸೋಲುಗಳ ಹಿಂದೆ ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯಿದೆ ಅಂತ ಇದೇ ವೇಳೆ ಕರ್ನಾಟಕ ಬಿಜೆಪಿ ಘಟಕ ಆರೋಪಿಸಿದೆ.


ಬೆಂಗಳೂರಲ್ಲಿ ವರುಣನ ಆರ್ಭಟ: ರಾಜ್ಯದಲ್ಲಿ ಇನ್ನೂ 'ನಾಲ್ಕು ದಿನ' ಭಾರಿ ಮಳೆ..!