ದೇವಸ್ಥಾನ ಕಟ್ಟಿದವರು ಓಬಿಸಿ, ದಲಿತರು; ಆದರೂ ಮಜಾ ಮಾಡುವವರು ನೀವು..!
ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy), ಹೊಟ್ಟೆಗೆ ತಿನ್ನೊಕೆ ಏನೂ ಕೊಡಬೇಡಿ ಹೊಟ್ಟೆಗೆ ತಣ್ಣಿರ್ ಬಟ್ಟೆ. ದೇವಸ್ಥಾನ ಕಟ್ಟುವರು ಓಬಿಸಿ, ದಲಿತರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆದು ಮಜಾ ಮಾಡುವುದು ನೀವು ಎಂದು ಕಿಡಿಕಾರಿದರು.
ಬೆಂಗಳೂರು: ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy), ಹೊಟ್ಟೆಗೆ ತಿನ್ನೊಕೆ ಏನೂ ಕೊಡಬೇಡಿ ಹೊಟ್ಟೆಗೆ ತಣ್ಣಿರ್ ಬಟ್ಟೆ. ದೇವಸ್ಥಾನ ಕಟ್ಟುವರು ಓಬಿಸಿ, ದಲಿತರು, ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆದು ಮಜಾ ಮಾಡುವುದು ನೀವು ಎಂದು ಕಿಡಿಕಾರಿದರು.
ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತೀರ ?,ನಾನು ಇಷ್ಟು ಕಠಿಣವಾಗಿ ಯಾವತ್ತೂ ಮಾತಾಡಿಲ್ಲ. ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ.ಈ ರಾಜ್ಯದಲ್ಲಿ ಸರ್ಕಾರ ಇದ್ಯಾ, ಏನ್ ಮಾಡ್ತಿದೆ ಸರ್ಕಾರ.ಆರುವರೆ ಕೋಟಿ ಜನಕ್ಕೆ ನಿಮ್ಮ ಸರ್ಕಾರ ಅಲ್ವ? ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಅರೆಸ್ಟ್ ಮಾಡಿದ್ರಿ, ಪ್ರಚೋದನೆ ಮಾಡುವವರನ್ನು ಅರೆಸ್ಟ್ ಮಾಡಿ, ಈ ರೀತಿಯಲ್ಲಿ ಪ್ರಚೋದನೆ ಮಾಡಿದ್ರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಅರೆಸ್ಟ್ ಮಾಡಿ ಎಂದರು.
ಇದನ್ನೂ ಓದಿ: HD Kumaraswamy : ತಾಯಿಗೆ IT ನೊಟೀಸ್ ನೀಡಿರುವ ಬಗ್ಗೆ ಆತಂಕ ಇಲ್ಲ : ಎಚ್‌ಡಿ ಕುಮಾರಸ್ವಾಮಿ
'ಇವತ್ತು ವಾಟ್ಸ್ ಆಪ್ ನೋಡಿದ್ದೇನೆ ಎಂದು ಹೇಳುತ್ತಾ ಅದರ ಸಂದೇಶ ಓದಿದ ಕುಮಾರಸ್ವಾಮಿ,ಹಣ್ಣು, ಕಿರಾಣಿ ಅಂಗಡಿಗಳು, ಎಲೆಕ್ಟ್ರಿಕ್ ಶಾಪ್ ಹೀಗೆ ಹಿಂದು ಅಂಗಡಿಗಳಿಗೆ ಹೋಗಿ ಅಂದಿದ್ದಾರೆ.ಸಭಾಧ್ಯಕ್ಷರು ಯಾವ ಪುರುಷಾರ್ಥಕ್ಕೆ ಚರ್ಚೆ ಇಟ್ಟುಕೊಂಡಿದ್ದಾರೆ.ಈ ರಾಜ್ಯ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೀರಿ? ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ ರಾಜ್ಯ ಹಾಳು ಮಾಡಬೇಡಿ' ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ: ‘ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ’
ಯಾರು ಶಾಶ್ವತ ಅಲ್ಲ, ಕರ್ನಾಟಕ ಶಾಂತಿಯ ತೋಟ ಹಾಳು ಮಾಡಬೇಡಿ.ಇಂತಹ ವ್ಯಕ್ತಿಗಳನ್ನು ಬಹಿಷ್ಕಾರ ಮಾಡಿ, ಈದ್ಗಾ ಮೈದಾನದಲ್ಲಿ ಬಲಿ ತಗೊತಿದ್ರಿ ಇದನ್ನು ದೇವೇಗೌಡರು (HD Devegowda) ಸರಿ ಮಾಡಿದ್ರು.ಉತ್ತರ ಭಾರತ ಬೇರೆ, ಅಲ್ಲಿ ಮೊಘಲ್ ಆಡಳಿತ ಬಂತ್ತು. ಕರ್ನಾಟಕದಲ್ಲಿ ಹುಟ್ಟು ಹಾಕ್ತಿದ್ರಿ,ಇವರು ಹೀಗೆ ಮಾಡಲು ಕಾಂಗ್ರೆಸ್ ಕಾರಣ.ನಮ್ಮ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರಿ, ಆದರೆ ಈಗ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉದ್ಭವ ಆಗಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರಣ ಎಂದರು.
ಇದನ್ನೂ ಓದಿ : ಸುಸುತ್ರವಾಗಿ ನಡೆದ SSLC ಪರೀಕ್ಷೆ- ಹಿಜಾಬ್ ಗಿಂತ ಶಿಕ್ಷಣವೇ ಮುಖ್ಯ ಎಂಬಂತೆ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿನಿಯರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.