ತುಮಕೂರು: ಅಬ್ಬಬ್ಬಾ.. ಕಣ್ಣ ನೋಟ ಹರಿದಷ್ಟು ಬೊಂಬೆಗಳ ದರ್ಶನ.. ಒಂದಕ್ಕೊಂದು ಭಿನ್ನ.. ಒಂದೊಂದು ಬೊಂಬೆಗಳು ಒದೊಂದು ಕಥೆಗೂ ಜೀವ ತುಂಬವಷ್ಟು ಆಕರ್ಷಣೆ. ಪ್ರತಿ ಬೊಂಬೆಯನ್ನು ನೋಡುತ್ತಲೇ ಇರಬೇಕು ಅನ್ನುವಷ್ಟು ಚೆಂದ. 


COMMERCIAL BREAK
SCROLL TO CONTINUE READING

ಹೌದು.. ಇಂತಹ ಸುಂದರ ಗೊಂಬೆಗಳ ಮನೆ ಕಂಡಿದ್ದು ತುಮಕೂರಿನಲ್ಲಿ. ತುಮಕೂರಿನ ಶೆಟ್ಟಿಹಳ್ಳಿ ನಿವಾಸಿ ಸೀಮಾ ಮನೆಯಲ್ಲಿವೇ ಬಣ್ಣ ಬಣ್ಣದ ನೂರಾರು ಬೊಂಬೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಬೊಂಬೆಗಳ ಮೂಲಕ ಮೈಸೂರು ಅರಮನೆಯನ್ನೇ ನಿರ್ಮಿಸಿದ ಸೀಮಾ ಕುಟುಂಬ ಇಡೀ ಬಡಾವಣೆಯ ಆಕರ್ಷಕ ಕೇಂದ್ರ ಬಿಂದು..


ಇದನ್ನೂ ಓದಿ-BBK10: ಬಿಗ್‌ಬಾಸ್‌ ಮನೆಯಲ್ಲಿ ಮ್ಯೂಸಿಕ್ ಕ್ಲಾಸ್..! ʼಸಂಗೀತʼಕ್ಕೆ ಅಭಿಮಾನಿಗಳು ಫುಲ್‌ ಫಿದಾ


ಸತತ ಒಂದು ತಿಂಗಳಿಂದ ಕುಟುಂಬಸ್ಥರೆಲ್ಲಾ ಸೇರಿ ಶ್ರಮಪಟ್ಟು, ಇಡೀ ಮನೆಯನ್ನೇ ಗೊಂಬೆಗಳಿಂದ ಕಲರ್ ಪುಲ್ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ನೂರಾರು ಬೊಂಬೆಗಳನ್ನ ಇಟ್ಟು ದಸರಾ ಆಚರಣೆಗೆ ಮತ್ತಷ್ಟು ಕಳೆ ಬರುವಂತೆ ಮಾಡ್ತಾರೆ. 


ಇದನ್ನೂ ಓದಿ-Anirudh Ravichander: ʼಲಿಯೋʼಗಾಗಿ ಅನಿರುದ್ಧ್ ಪಡೆದ ಸಂಭಾವನೆ ಎಷ್ಟು ಗೊತ್ತಾ?


ಇಡೀ ಮನೆಯನ್ನೇ ಬೊಂಬೆಮಯ ಮಾಡಿಸಾರ್ವಜನಿಕರ ದರ್ಶನಕ್ಕಿಟ್ಟ ಕುಟುಂಬ ಹಬ್ಬದ ಸಂಭ್ರಮದಲ್ಲಿ ತೊಗಡಿಸಿಕೊಳ್ಳುತ್ತಾರೆ.. ಪೌರಣಿಕ ಕಥಾಹಂದರದ ವಿವಿಧ ಥೀಮ್ ನಲ್ಲಿ ಗೊಂಬೆಗಳನ್ನು ಕೂರಿಸುವ ವಾಡಿಕೆ ಇವರದ್ದು. ದಶಾವತಾರ, ಕಾಳಿಂಗ ಮರ್ಧನ, ಸೇರಿ ಮೈಸೂರು ದಸರಾ ಜಂಬೂಸವಾರಿ ಥೀಮ್ ನಿರ್ಮಾಣ ಬೊಂಬೆಗಳ ಪ್ರದರ್ಶನದಲ್ಲಿ ಹೆಚ್ಚುನ ಗಮನ ಸೆಳೆಯುತ್ತಿವೆ.


ಆಚರಣೆಗಳು ಮರೆಯಾಗುತ್ತಿರುವ ಆಧುನಿಕ ಸಮಾಜದಲ್ಲಿ ಸೀಮಾ ಅವರ ಕುಟುಂಬ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದೆ ಬೊಂಬೆಗಳನ್ನು ಕೂರಿಸುವ ಕಾಯಕ. ಇವರ ದಸರಾ ಬೊಂಬೆಗಳ ಪೂಜೆಗಿದೆ ಪೌರಾಣಿಕ ಹಿನ್ನೆಲೆ ಅನ್ನೋದು ಅವರಿಗೆ ಹೆಮ್ಮೆಯ ವಿಷಯ. ಕಲ್ಪತರುನಾಡು ತುಮಕೂರಿನಲ್ಲಿ ಕಳೆಗಟ್ಟಿದ  ಸಾಂಪ್ರದಾಯಿಕ ಬೊಂಬೆಗಳ ಪೂಜೆಗೆ ಫಿದಾ ಆಗದವೆರೇ ಇಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.