90 ವರ್ಷದ ತಂದೆ ಮತ್ತು 80 ವರ್ಷದ ತಾಯಿಯನ್ನು ಮಗಳು ಮನೆಯಿಂದ ಹೊರದೂಡಿದ ನಂತರ  ದಂಪತಿಗಳಿಬ್ಬರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದ ಧಾರುಣ ಘಟನೆ ಹುಬ್ಬಳಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇಲ್ಲಿ ಮಗಳು ತನ್ನ 90 ವರ್ಷದ ತಂದೆ ಮತ್ತು 80 ವರ್ಷ ವಯಸ್ಸಿನ ತಾಯಿಯನ್ನು ಮನೆಯಿಂದ ಹೊರಹಾಕಿದ್ದಾರೆ. ಈ ಘಟನೆಯ ನಂತರ ದಂಪತಿಗಳು ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಎರಡು ದಿನಗಳ ನಂತರ ರಾತ್ರಿಯಲ್ಲಿ ಹಾದುಹೋಗುವ ಪೊಲೀಸರು ಈ ವೃದ್ಧ ದಂಪತಿಯನ್ನು ನೋಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇವರ ಕಥೆ ಕೇಳಿ ಮರುಗಿದ ಪೊಲೀಸರು ಅವವರಿಗೆ ಸರ್ಕಾರಿ ವೃದ್ಧಾಶ್ರಮದಲ್ಲಿ ಆಶ್ರಯ ಕೊಡಿಸಿದ್ದಾರೆ.


ಮಗಳಿಂದ ದೌರ್ಜನ್ಯ, ಅನ್ಯರ ಸಹಾಯ


ಈ ಇಬ್ಬರು ದಂಪತಿಗಳನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ್  ಪಟ್ಟಣದವರೆಂದು ಗುರುತಿಸಲಾಗಿದೆ. 90 ವರ್ಷ ವಯಸ್ಸಿನ ಸೂರ್ಯಕಾಂತ್,ಮತ್ತು ಅವರ 80 ವರ್ಷದ ಪತ್ನಿ ಕಮಲ್ ಅವರು ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದರ ನಂತರ ಮನೆಗೆ ಹೋದಾಗ ದಂಪತಿಗಳಿಬ್ಬರನ್ನು ಅವರ ಮಗಳು ಮನೆಯಿಂದ ಹೊರದೂಡಿರುವ ಅಮಾನವೀಯ ಘಟನೆ ನಡೆದಿದೆ.


ಚಳಿಯಲ್ಲಿ ನಡುಗುತ್ತಿದ್ದ ದಂಪತಿಯ ಅವಸ್ತೆಯನ್ನು ನೋಡಿದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಬೆಳಗ್ಗೆ ನಾವು ಬಸ್ ನಿಲ್ದಾಣದಲ್ಲಿ ಈ ವೃದ್ದ ದಂಪತಿಗಳಿಬ್ಬರನ್ನು ವಿಚಾರಿಸಿದಾಗ ಇವರನ್ನು ಮಗಳು ಮನೆಯಿಂದ ಹೊರದಬ್ಬಿರುವ ಸಂಗತಿ ತಿಳಿದಿದೆ ಎಂದು ಪ್ರತಿಕ್ರಯಿಸಿದರು. ನಂತರ  ಪೊಲೀಸರ ಸಹಾಯದಿಂದ ಇಬ್ಬರು ವೃದ್ದ ಸಂಪತಿಗಳನ್ನು ಸ್ಥಳೀಯ ವೃದ್ದಾಶ್ರಮಕ್ಕೆ ಸೇರಿಸಿ ಮಾನವೀಯತೆ ಮರೆದಿದ್ದಾರೆ.