ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ
ದರಪಟ್ಟಿ ಗಮನಿಸಿ ರೊಚ್ಚಿಗೆದ್ದ ಪ್ರವಾಸಿಗರು ತಾವೇ ಟಿಕೆಟ್ ಖರೀದಿಸಲು ತೆರಳಿದ ವೇಳೆ ಪ್ರವಾಸಿಗರಿಗೆ ಟಿಕೆಟ್ ಕೊಡುವುದಿಲ್ಲ, ತೆಪ್ಪ ನಡೆಸುವವರಿಗಷ್ಟೇ ಟಿಕೆಟ್ ನೀಡಲಾಗುವುದು ಎಂದು ನೇರವಾಗಿಯೇ ಹೇಳಿದ್ದರಿಂದ ಸಾವಿರಾರು ಪ್ರವಾಸಿಗರು ಪ್ರತಿಭಟನೆ ನಡೆಸಿ ಹಗಲು ದರೋಡೆ ವಿರುದ್ಧ ಕಿಡಿಕಾರಿದ್ದಾರೆ.
ಚಾಮರಾಜನಗರ: ಬೇಸಿಗೆ ರಜೆಯನ್ನೇ ಬಂಡವಾಳ ಮಾಡಿಕೊಂಡ ತೆಪ್ಪ ನಡೆಸುವವರು ಹಗಲು ದರೋಡೆಗಿಳಿದ ಘಟನೆ ಕರ್ನಾಟಕ-ತಮಿಳುನಾಡು ಗಡಿ ಹಂಚಿಕೊಂಡಿರುವ ಹೊಗೆನಕಲ್ ಜಲಪಾತದಲ್ಲಿ ನಡೆದಿದೆ.
ತಮಿಳುನಾಡು ಭಾಗದಲ್ಲಿ ಪ್ರವಾಸಿಗರು- ತೆಪ್ಪ ನಡೆಸುವವರ ನಡುವೆ ಮಾತಿನ ಚಕಮಕಿ, ಜಟಾಪಟಿಯೇ ನಡೆದಿದ್ದು ಹಗಲು ದರೋಡೆ ವಿರುದ್ಧ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶದ ಪ್ರವಾಸಿಗರು ತಿರುಗಿಬಿದ್ದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ಒನ್ ಟೂ ಡಬಲ್ ದರ..?
ಹೊಗೆನಕಲ್ ಜಲಪಾತದಲ್ಲಿ 45 ನಿಮಿಷಗಳ ತೆಪ್ಪ ಸವಾರಿಗೆ ತಮಿಳುನಾಡಿನ ಧರ್ಮಪುರಿ ಜಿಲ್ಲಾಡಳಿತ 750 ರೂ. ದರ ನಿಗದಿ ಮಾಡಿದೆ. ಆದರೆ, ತೆಪ್ಪ ನಡೆಸುವವರು ಮತ್ತು ಅಲ್ಲಿನ ಪ್ರವಾಸೋದ್ಯಮ ಸಿಬ್ಬಂದಿ ನಡುವೆ ಒಳ ಒಪ್ಪಂದದಂತೆ ಡೀಲ್ ನಡೆದಿದ್ದು ಪ್ರವಾಸಿಗರ ಬಳಿ 750 ರೂ. ದರಕ್ಕೆ ತಮಿಳುನಾಡಿನ ಪ್ರವಾಸಿಗರು ₹1500 ಪರಭಾಷಿಕರಿಂದ ₹3000-3500 ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಠಾಣೆಗೆ ಬಂದ ಮಹಿಳೆ ಮೈಕೈ ಮುಟ್ಟಿ PSI ಅನುಚಿತ ವರ್ತನೆ ಆರೋಪ: ಟ್ವಿಟರ್‌ನಲ್ಲಿ ಮಹಿಳೆ ದೂರು
ದರಪಟ್ಟಿ ಗಮನಿಸಿ ರೊಚ್ಚಿಗೆದ್ದ ಪ್ರವಾಸಿಗರು ತಾವೇ ಟಿಕೆಟ್ ಖರೀದಿಸಲು ತೆರಳಿದ ವೇಳೆ ಪ್ರವಾಸಿಗರಿಗೆ ಟಿಕೆಟ್ ಕೊಡುವುದಿಲ್ಲ, ತೆಪ್ಪ ನಡೆಸುವವರಿಗಷ್ಟೇ ಟಿಕೆಟ್ ನೀಡಲಾಗುವುದು ಎಂದು ನೇರವಾಗಿಯೇ ಹೇಳಿದ್ದರಿಂದ ಸಾವಿರಾರು ಪ್ರವಾಸಿಗರು ಪ್ರತಿಭಟನೆ ನಡೆಸಿ ಹಗಲು ದರೋಡೆ ವಿರುದ್ಧ ಕಿಡಿಕಾರಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದ್ದು ಜಲಸಿರಿ ನೋಡಲು ಬಂದ ಪ್ರವಾಸಿಗರು ದುಬಾರಿ ಟಿಕೆಟ್ ನಿಂದಾಗಿ ಹಾಗೇ ವಾಪಾಸ್ ಆಗಿದ್ದು ಧರ್ಮಪುರಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪರ ಭಾಷಿಕರಿಗೆ ಇನ್ನೂ ದುಬಾರಿ:
ತಮಿಳು ಮಾತನಾಡುವವರಾದರೇ ₹750 ಟಿಕೆಟ್ ಗೆ ₹1500 ವಸೂಲಿ ಮಾಡುವ ಅಲ್ಲಿನ ಸಿಬ್ಬಂದಿ ಕನ್ನಡ, ತೆಲುಗು ಸೇರಿದಂತೆ ಪರ ಭಾಷೀಕರು ಬಂದರೇ ಬೋಟಿಂಗ್ ದರ ₹3000 ದಿಂದ ₹3500 ತನಕವೂ ತಲುಪಲಿದೆ ಎಂದು ಸ್ವಳೀಯ ಗೋಪಾಲ್ ಎಂಬವರು ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ- ರಾಜ್ಯ ನಾಯಕರ ಜೊತೆ ಕೈ ಹೈಕಮಾಂಡ್ ಸಭೆ ಮುಕ್ತಾಯ : ಕಗ್ಗಂಟಾಗಿ ಉಳಿದ 15 ವಿಧಾನಸಭಾ ಕ್ಷೇತ್ರ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೋಪಿನಾಥಂ ಸಮೀಪದಿಂದಲೂ ಹೊಗೆನಕಲ್ ಜಲಪಾತ ಕಾಣಬಹುದಾಗದೆ. ಬೆಂಗಳೂರು ಸೇರಿದಂತೆ ಕರ್ನಾಟಕದಿಂದ ತೆರಳುವ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಒಟ್ಟಾರೆ ರಜ ಮಜಾ ಸವಿಯಲು ಬಂದವರಿಗೆ ದುಬಾರಿ ದರ ಕಂಗೆಡುವಂತೆ ಮಾಡಿದ್ದು ಅಲ್ಲಿನ ಜಿಲ್ಲಾಡಳಿತ ಇನ್ನಾದರೂ ಹಗಲು ದರೋಡೆಗೆ ಬ್ರೇಕ್ ಹಾಕುವುದೇ ಎಂದು ಕಾದು ನೋಡಬೇಕಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.