`ಪಾಲಿಕೆ ಸದಸ್ಯಗೆ ಡಿಸಿಎಂ ಡಿಕೆಶಿ ಕಪಾಳಮೋಕ್ಷ: ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ`- ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕಾಂಗ್ರೆಸ್ ನಲ್ಲಿ ಆ ಪಕ್ಷದ ಸ್ವಂತ ಕಾರ್ಯಕರ್ತರಿಗೇ ರಕ್ಷಣೆ, ಮರ್ಯಾದೆ ಇಲ್ಲದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಷಾದಿಸಿದರು.
ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಆ ಪಕ್ಷದ ಸ್ವಂತ ಕಾರ್ಯಕರ್ತರಿಗೇ ರಕ್ಷಣೆ, ಮರ್ಯಾದೆ ಇಲ್ಲದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಷಾದಿಸಿದರು.
ಹಾವೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿರುವ ಬಗ್ಗೆ ಜೋಶಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಸವಣೂರಿನಲ್ಲಿ ಪ್ರಚಾರದ ವೇಳೆ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಡಿಸಿಎಂ ಡಿಕೆಶಿಯವರು ಪಾಲಿಕೆ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿ ದೂರಕ್ಕೆ ಅಟ್ಟಿದ್ದಾರೆ. ಇದು ಅವರು ಕಾರ್ಯಕರ್ತರನ್ನು ಹೇಗೆ ನೋಡುತ್ತಾರೆ ಎಂಬುದಕ್ಕೆ ನಿದರ್ಶನ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಮತಗಟ್ಟೆಗೆ ಬರುವ ಮತದಾರರ ಆರೋಗ್ಯ ಕಾಳಜಿಗೆ ಮೆಡಿಸಿನ್ ಕಿಟ್ ಸಿದ್ದ..!
ಸದ್ಯ, ಆ ಪಾಲಿಕೆ ಸದಸ್ಯರು ಮಹಾತ್ಮ ಗಾಂಧಿಜೀ ಹೇಳಿದಂತೆ ತಮ್ಮ ಇನ್ನೊಂದು ಕೆನ್ನೆ ತೋರಿಸುವ ಸಾಹಸ ಮಾಡಲಿಲ್ಲ ಅದೇ ಪುಣ್ಯ ಎಂದಿರುವ ಜೋಶಿ, ಇದು ಕಾಂಗ್ರೆಸ್ಸಿನ ಸಂಸ್ಕೃತಿಯನ್ನ ತೋರಿಸುತ್ತದೆ ಎಂದಿದ್ದಾರೆ.ಕಾಂಗ್ರೆಸ್ ನಲ್ಲಿ ಸ್ವಂತ ಕಾರ್ಯಕರ್ತರಿಗೇ ರಕ್ಷಣೆ, ಮರ್ಯಾದೆ ಇಲ್ಲ. ಹುಬ್ಬಳ್ಳಿ ಕಾರ್ಪೊರೇಟರ್ ಮಗಳು ನೇಹಾ ಹತ್ಯೆ ಪ್ರಕರಣದಲ್ಲಿ ಕುಟುಂಬದ ಗೌರವ ಕಾಪಾಡುವ ಬದಲು ಹೇಳಿಕೆ ನೀಡಿದರು.
ಈಗ ನೋಡಿದರೆ ಸವಣೂರಲ್ಲಿ ಪಾಲಿಕೆ ಸದಸ್ಯನಿಗೆ ಕಪಾಳ ಮೋಕ್ಷ!? ಇನ್ನು ಇವರು ಜನಸಾಮಾನ್ಯರಿಗೆ ಯಾವ ರಕ್ಷಣೆ, ಮರ್ಯಾದೆ ಕೊಡುತ್ತಾರೆ? ಎಂದು ಪ್ರಶ್ನಿಸಿರುವ ಜೋಶಿ, ಮುಂದೊಂದು ದಿನ ಕಾರ್ಯಕರ್ತರೇ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮೋದಿ ಪರಿವಾರ ಮಾದರಿ: ಬಿಜಿಪಿ ನಾಯಕರು ಯಾರೊಬ್ಬ ಕಾರ್ಯಕರ್ತ ಮತ್ತು ಜನರ ಜತೆ ಇಷ್ಟು ಹೀನಾಯವಾಗಿ ವರ್ತಿಸುವುದಿಲ್ಲ. ಹಾಗಾಗಿಯೇ ಮೋದಿಜಿ ಮತ್ತು ಕಾರ್ಯಕರ್ತರ ಮಧ್ಯೆ "ಮೋದಿ ಪರಿವಾರ--ನಮ್ಮ ಪರಿವಾರ" ಎಂಬ ಗೌರವ ಭಾವನೆ ಮೂಡಿದೆ ಎಂದು ಜೋಶಿ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.