ಬೆಂಗಳೂರು: "ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಹಳ್ಳಿಕಾರ ಸಮಾಜದವರು. ನಮ್ಮ ಸರ್ಕಾರ ನಿಮ್ಮ ಜೊತೆಗಿದೆ. ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಸೂಕ್ತ ಕಾಲದಲ್ಲಿ ಚರ್ಚೆ ನಡೆಸಿ, ಶೀಘ್ರವಾಗಿ ಈಡೇರಿಸಲಾಗುವುದು" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮದುವೆಯಾಗ್ತಿದ್ದೇನೆ... ಎಂದು ಫುಲ್‌ ಖುಷಿಯಾಗಿ ಡೇಟ್‌ ಅನೌನ್ಸ್‌ ಮಾಡಿದ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು?


ನಗರದ ಪೂರ್ಣಿಮಾ ಪ್ಯಾಲೇಸ್ ಅಲ್ಲಿ ಭಾನುವಾರ ನಡೆದ ಹಳ್ಳಿಕಾರರ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, "ಹಳ್ಳಿಕಾರರು ಭೂಮಿಯ ಮಕ್ಕಳು. ಕೃಷ್ಣನ ಕುಲಬಂಧುಗಳು. ಎಲ್ಲಾ ಸಮುದಾಯಗಳ ಜೊತೆಗೆ ಸಹಬಾಳ್ವೆ ನಡೆಸುತ್ತಾ ಇರುವವರು. ಇಡೀ ಸರ್ಕಾರವೇ ನಿಮ್ಮ ಜೊತೆಯಿದೆ. ಒಗ್ಗಟ್ಟಿನಿಂದ ನೀವು ಮುಂದುವರೆಯಬೇಕು" ಎಂದು ತಿಳಿಸಿದರು.


"80 ವರ್ಷಗಳ ನಂತರ ಕೆ. ಎಂ. ನಾಗರಾಜು ಅವರ ಮುಖಂಡತ್ವದಲ್ಲಿ ಸಮಾವೇಶ ನಡೆಯುತ್ತಿದೆ. ಭೂಮಿಯ ಮಕ್ಕಳಾದ ನಿಮ್ಮ ಬದುಕೇ ನಮ್ಮ ಬದುಕು, ನಿಮ್ಮ ಶ್ರೇಯಸ್ಸೇ ನಮ್ಮ ಶ್ರೇಯಸ್ಸು. ನಿಮ್ಮ ಶ್ರಮದಿಂದ ನಮ್ಮ ಸಮಾಜಕ್ಕೆ ಫಲ" ಎಂದರು.


"ಹಳ್ಳಿಕಾರರ ಸಮುದಾಯಕ್ಕೆ 1,200 ವರ್ಷಗಳ ಇತಿಹಾಸವಿದೆ. ರಾಸುಗಳನ್ನು ಸಂರಕ್ಷಿಸುತ್ತಿರುವ ಸಮಾಜದ ಯಶಸ್ಸು ಹಾಗೂ ಏಳಿಗೆಗೆ ನಾವು ಕೈ ಜೋಡಿಸುವುದು ಖಂಡಿತ. ಜೊತೆಗೆ ಯಶಸ್ಸನ್ನು ಕಾಣಲು ಧರ್ಮರಾಯನ ಧರ್ಮತ್ವ, ಕರ್ಣನ ದಾನ, ಭೀಮನ ಬಲ, ವಿದುರನ ನೀತಿ, ಅರ್ಜುನ ಗುರಿ ಕೊನೆಯದಾಗಿ ಕೃಷ್ಣನ ತಂತ್ರ ಇರಬೇಕು" ಎಂದರು.


"80 ವರ್ಷಗಳ ನಂತರ ಜೊತೆಗೂಡಲು ಪ್ರಾರಂಭ ಮಾಡಿದ್ದೀರಿ. ಜೊತೆಗೂಡುವುದು ಆರಂಭ, ಇದರಿಂದ ಪ್ರಗತಿ, ಯಶಸ್ಸು ಸಾಧ್ಯ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಘಟನೆಗೆ ಹಾಗೂ ಸಮಾಜಕ್ಕೆ ಹೊಸ ರೂಪ ಸಿಗಲಿ" ಎಂದು ಹೇಳಿದರು.


ನೂರಾರು ನಾಯಕರನ್ನು ಬೆಳೆಸಿದವರು ನಾಗರಾಜು:


"ಕೆ. ಎಂ.ನಾಗರಾಜು ಅವರು ಹಳ್ಳಿಕಾರ ಸಮುದಾಯದ ಧೀಮಂತ ನಾಯಕರಷ್ಟೇ ಅಲ್ಲ. ಬೆಂಗಳೂರಿನಲ್ಲಿ ಅನೇಕ ಸಮುದಾಯಗಳ ನೂರಾರು ನಾಯಕರನ್ನು ಸೃಷ್ಟಿ ಮಾಡಿದವರು. ಹಲವಾರು ವರ್ಷಗಳಿಂದ ಇವರ ನಾಯಕತ್ವದಲ್ಲಿ ಅನೇಕರು ಪ್ರಗತಿ ಹೊಂದಿದ್ದಾರೆ" ಎಂದರು.


ಇದನ್ನೂ ಓದಿ: Viral Video: ಬಹು ಮಹಡಿ ಕಟ್ಟಡದಿಂದ ಜಿಗಿದು 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! ಕಾರಣವೇನು..?


ಎಂಎಲ್ ಸಿ ಸ್ಥಾನ ತ್ಯಾಗ:


ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರು ನಾಗರಾಜು ಅವರನ್ನು ಎಂಎಲ್ ಸಿ ಸ್ಥಾನಕ್ಕೆ ಸೂಚಿಸಿದ್ದರು. ಆದರೆ ಈ ಸ್ಥಾನ ನನಗೆ ಬೇಡವೆಂದು ದಯಾನಂದ ಸಾಗರ್ ಅವರ ಮಗ ಪ್ರೇಮಚಂದ್ರ ಸಾಗರ್ ಅವರಿಗೆ ತ್ಯಾಗ ಮಾಡಿದರು. ಸಿಕ್ಕ ಅಧಿಕಾರ ಬಿಟ್ಟು ಕೊಟ್ಟಂತಹ ಹೃದಯ ಶ್ರೀಮಂತಿಕೆಯ ವ್ಯಕ್ತಿ" ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.