ಬಾಗಲಕೋಟೆ: ರಾಗಿ ತಿಂದವ ನಿರೋಗಿ, ರೊಟ್ಟಿ ತಂದವ ತೋಳ, ಅಕ್ಕಿ ತಿಂದವ ಹಕ್ಕಿ ಎನ್ನುವ ಸೂಚ್ಯದೊಂದಿಗೆ ಸಾಂಪ್ರದಾಯಿಕ ಬೆಳೆಗಳಿಗೆ ಒತ್ತು ನೀಡುವಂತೆ ರೈತರಿಗೆ ಮನವಿ ಮಾಡಿದ ಉಪಮುಖ್ಯಮಂತ್ರಿ  ಗೋವಿಂದ ಎಂ ಕಾರಜೋಳ(Govind M Karajola) ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿ  ಜನತೆಯ ಉತ್ತಮ ಆರೋಗ್ಯ ಸಂರಕ್ಷಣೆಗೆ  ನೆರವಾಗಬೇಕು ಎಂದು ಕರೆ ನೀಡಿದರು. 


COMMERCIAL BREAK
SCROLL TO CONTINUE READING

ಕೃಷಿ ಇಲಾಖೆಯು ಇತರ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಯವ ಕೃಷಿಯಿಂದ ಮಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ ಅಲ್ಲದೇ ವಿಷಯುಕ್ತವಲ್ಲದ ಬೆಳೆಗಳನ್ನು ನೀಡುತ್ತದೆ. ಸಾವಯವ ಕೃಷಿಯ ಉತ್ತೇಜನಕ್ಕೆ ಸರ್ಕಾರವೂ ನೆರವು ನೀಡುತ್ತಿದೆ. ಕೃಷಿ ಕ್ಷೇತ್ರ ಅಭಿವೃದ್ಧಿಯಾಬೇಕು. ರೈತರ ಏಳಿಗೆಗೆ ನಮ್ಮ ಸರ್ಕಾರ ಬದ್ದವಾಗಿದೆ. ‌ರೈತರ ಏಳಿಗೆಗೆ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ಬಜೆಟ್ ನಲ್ಲಿ ರೈತರ ಕಲ್ಯಾಣ ಕ್ಕಾಗಿ ಒತ್ತು ನೀಡಲಾಗುವುದು ಎಂದು ತಿಳಿಸಿದರು. 


ಕಾರ್ಯಕ್ರಮಕ್ಕೂ ಮುನ್ನ ಸಾವಯವ ಹಾಗೂ ಸಿರಿಧಾನ್ಯ ಮೇಳಕ್ಕೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಿದರು. 
ಶಾಸಕರಾದ ವೀರಣ್ಣ ಚರಂತಿಮಠ ಅಧ್ಯಕ್ಷತೆವಹಿಸಿದ್ದರು. ವಿಧಾನಪರಿಷತ್ ವಿರೋಧಪಕ್ಷದ ನಾಯಕರಾದ ಎಸ್‌. ಆರ್. ಪಾಟೀಲ, ಶಾಸಕರಾದ ಸಿದ್ದುಸವದಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ರಾಜೇಂದ್ರ, ಸಿಇಓ ಗಂಗೂಬಾಯಿ ಮಾನಕರ್, ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.