ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 990 ಇಂಜಿನಿಯರ್‌ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಉತ್ತರ ವಲಯದಲ್ಲಿ 350 ಇಂಜಿನಿಯರ್(Engineer)‌ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜೂನಿಯರ್ ಹಾಗೂ ಅಸಿಸ್ಟಂಟ್‌ ಇಂಜಿನಿಯರ್‌ಗಳನ್ನು ಭರ್ತಿಮಾಡಿಕೊಳ್ಳಲು ಆಯಾ ವಲಯಗಳಿಗೆ ಸೂಚಿಸಲಾಗಿದೆ ಎಂದು ಗೋವಿಂದ ಕಾರಜೋಳತಿಳಿಸಿದ್ದಾರೆ. 'ಸರ್ಕಾರಿ ನೇಮಕ ಪ್ರಾಧಿಕಾರ ಮೂಲಕವೇ ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಾಗುತ್ತಿದ್ದು, ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.


'ನಾನು ಬಂಡೆನೂ ಅಲ್ಲ, ಜಲ್ಲಿನೂ ಅಲ್ಲ: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು'


ಪ್ರವಾಸಿ ತಾಣಗಳಿರುವ ಜಿಲ್ಲೆಗಳಲ್ಲಿನ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರಗಳನ್ನು ಪ್ರವಾಸೋದ್ಯಮ ಇಲಾಖೆಗೆ ಬಾಡಿಕೆ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಸಹ ತಿಳಿಸಿದ್ದಾರೆ.


'ಮೂರು ಬೈ ಎಲೆಕ್ಷನ್' ಗೆಲ್ಲಲು ಅಭ್ಯರ್ಥಿಗಳಿಗಾಗಿ ಶೋಧ ನಡೆಸಿದ ಕಾಂಗ್ರೆಸ್!