ಬೆಂಗಳೂರು: ಹಣ, ಒಡವೆಗಳು ಕಳ್ಳತನ ಆಗೋದನ್ನ ನೋಡಿದ್ದೀವಿ‌. ಅಷ್ಟೇ ಯಾಕೆ ಬೈಕ್, ವಾಹನಗಳನ್ನು ಕಳ್ಳತನ ಆಗುವ ಘಟನೆಗಳನ್ನೂ ಕಂಡಿದ್ದೇವೆ. ಆದರೆ, ರಾಜಧಾನಿ ಬೆಂಗಳೂರಿನ ಆ ಏರಿಯಾದಲ್ಲಿ ಬಹಳ ವಿಚಿತ್ರವಾದ ಕಳ್ಳತನ ನಡೆದಿರುವ ಆರೋಪ ಕೇಳಿ ಬರುತ್ತಿದೆ. ಏನದು ಆ ಕಳ್ಳತನ ಅಂತ ಕೇಳಿದ್ರೆ, ನೀವೂ ಒಮ್ಮೆ ದಂಗಾಗಿ ಹೋಗ್ತೀರ. ಈ  ರುದ್ರಭೂಮಿಯಲ್ಲಿರುವ ಶವಗಳು ನಾಪತ್ತೆಯಾಗ್ತಿವೆ ಅನ್ನೊ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಶವಗಳನ್ನು ಕಳವು ಮಾಡಿದ್ಯಾರು..? ಯಾವ ಏರಿಯಾದ ರುದ್ರಭೂಮಿಯಲ್ಲಿ ಶವಗಳ ಅವಶೇಷಗಳು ಕಳುವಾಗ್ತಿವೆ..? ರುದ್ರಭೂಮಿಯ ಪರಿಸ್ಥಿತಿ ಸದ್ಯ ಹೇಗಿದೆ..? ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡ್ತೀವಿ ಈ ಲೇಖನ ಓದಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  


ರಾಜಧಾನಿ ಬೆಂಗಳೂರಿನ ಜೆಜೆ ಆರ್ ನಗರ ಕನ್ನಡಿಗರ ಹಿಂದೂ ರುದ್ರಭೂಮಿ ಹಾಗೂ ತಮಿಳಿಗರ ಹಿಂದೂ ರುದ್ರಭೂಮಿಯಲ್ಲಿ 2011- 2018ರ ಅಂತ್ಯದವರೆಗೆ 5 ಸಾವಿರಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಕಾರ್ಯ ನಡೆದಿದ್ಯಂತೆ. ಆದ್ರೆ, ಪೂರ್ಣ ಪ್ರಮಾಣದಲ್ಲಿ ಅವುಗಳ ಅವಶೇಷಗಳು ಕಳುವಾಗಿವೆ ಅಂತಾ ವಿಶ್ವ ಸನಾತನ ಪರಿಷತ್ತು ಗಂಭೀರವಾಗಿ ಆರೋಪಿಸುತ್ತಿದೆ. ಇನ್ನು ಈ ಬಗ್ಗೆ ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿದಾಗ, ರುದ್ರಭೂಮಿಗಳು, ಪ್ಲೆ ಗ್ರೌಂಡ್ ನಂತಾಗಿದ್ದು, ಪಾರ್ಕಿಂಗ್ ಲಾಟ್ ಗಳಾಗಿವೆ. ಎರಡು ರುದ್ರಭೂಮಿ ಈಗ ಸಂಪೂರ್ಣ ಮೈದಾನದಂತಾಗಿದ್ದು, ಕನ್ನಡಿಗರ ಹಿಂದೂ ರುದ್ರಭೂಮಿಯಲ್ಲಿ ಕೇವಲ 50 ಸಮಾಧಿಗಳು ಮಾತ್ರ ಉಳಿದಿವೆ. ತಮಿಳಿಗರ ಹಿಂದೂ ರುದ್ರಭೂಮಿಯಲ್ಲಿ ಪಾಲಿಕೆ ಸೌಧ ತಲೆ ಎತ್ತಿದೆ. ಮುಂಭಾಗದಲ್ಲಿ ಕೇವಲ 6 ಸಮಾಧಿಗಳು ಮಾತ್ರ ಉಳಿದಿವೆ ಅಂತ ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್.ಭಾಸ್ಕರನ್ ಆರೋಪಿಸಿದ್ದಾರೆ.


ಬೆಂಗಳೂರಿನ ಜೆಜೆಆರ್ ನಗರದ ತಮಿಳಿಗರ ಹಿಂದೂ ರುದ್ರಭೂಮಿಯಲ್ಲಿ ಅನಧಿಕೃತವಾಗಿ ಪಾಲಿಕೆ ಸೌಧ ನಿರ್ಮಿಸಲಾಗ್ತಿದೆ ಅನ್ನೋದು ಮೊದಲ ಆರೋಪ. ಪಾಲಿಕೆ ಸೌಧದ ಮುಂಭಾಗದಲ್ಲಿಯೇ 6 ಸಮಾಧಿಗಳಿದ್ದು, ಆ ಸಮಾಧಿಗಳನ್ನ ತಗೆಯದಂತೆ ವಿಶ್ವ ಸನಾತನ ಪರಿಷತ್ತು ಹೋರಾಟ ಮಾಡಿದ್ದರಿಂದ ಈಗ ಆ ಜಾಗದಲ್ಲಿ 6 ಸಮಾಧಿಗಳು ಮಾತ್ರ ಉಳಿದಿವೆ. ಈ ರುದ್ರಭೂಮಿ ಜಾಗದಲ್ಲಿ ಪಾಲಿಕೆ‌ ಸೌಧ ಕಟ್ಟೋಕೂ ಮುಂಚೆ ಅರೆಬಿಕ್ ಕಾಲೇಜು ಮತ್ತು ಮದರಸ ನಿರ್ಮಾಣ ಮಾಡೋಕೆ ಹೊರಟಿದ್ರು ಅಂತ ಆರೋಪಿಸಲಾಗಿದೆ. ನಂತರ ವಿಶ್ವ ಸನಾತನ ಪರಿಷತ್ತು ಹೋರಾಟ ತೀವ್ರವಾದ ನಂತರ ನಾಮಕಾವಸ್ಥೆಗೆ ಪಾಲಿಕೆ ಸೌಧ ನಿರ್ಮಾಣ ಮಾಡಲಾಗಿದ್ಯಂತೆ ಅನ್ನೊ ಗುಸುಗುಸು ಎಲ್ಲೆಡೆ ಕೇಳಿ ಬರ್ತಿದೆ.


ದೂರು ಕೊಟ್ಟರೂ ಮೌನ ಮುರಿಯದ ಪೊಲೀಸ್ ಇಲಾಖೆ: 


ಈ ಶವಗಳ‌ ಕಳುವು ಕುರಿತು 2021ರಲ್ಲಿಯೇ ಪೊಲೀಸ್ ಇಲಾಖೆಗೆ ವಿಶ್ವ ಸನಾತನ ಪರಿಷತ್ ನ ಅಧ್ಯಕ್ಷ ಎಸ್.ಭಾಸ್ಕರನ್ ದೂರು ನೀಡಿದ್ರು. ಈ ದೂರಿನಲ್ಲಿ ಶವಗಳ ಕಳ್ಳತನ ಹುನ್ನಾರದ ಹಿಂದೆ ಶಾಸಕ ಜಮೀರ್ ಅಹ್ಮದ್‌ ಖಾನ್, ಸೀಮಾ ಅಲ್ತಾಫ್ ಖಾನ್, ಅಲ್ತಾಫ್ ಖಾನ್, ಬಿಬಿಎಂಪಿ ಹೆಲ್ತ್, ರೆವೆನ್ಯೂ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಶಾಮೀಲು ಎಂದು ಆರೋಪಿಸಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ, ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟವರು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. 


ಒಟ್ಟಿನಲ್ಲಿ ರುದ್ರಭೂಮಿಯಲ್ಲಿ ಶವಗಳ ಕಳ್ಳತನ ಆರೋಪ ಕೇಳಿ ಬರ್ತಿದೆ. ಇದನ್ನ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಸಮರ್ಪಕ ರೀತಿಯಲ್ಲಿ ಸರ್ವೇ ನಡೆಸಿ, ಸೂಕ್ತ ಮಾಹಿತಿಯನ್ನ ಕಲೆ ಹಾಕಬೇಕಿದೆ.


ಇದನ್ನೂ ಓದಿ:  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.