ಸಿದ್ದರಾಮಯ್ಯನವರೇ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ?: ಬಿಜೆಪಿ ವ್ಯಂಗ್ಯ
ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ, ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲಸಿಕಾ ಅಭಿಯಾನವನ್ನು ಟೀಕಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ನವರಿಗೆ ಕರ್ನಾಟಕ ಬಿಜೆಪಿ ತಿರುಗೇಟು ನೀಡಿದೆ. ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯನವರೇ ನಿಮಗೂ 2 ಡೋಸ್ ಲಿಸಿಕೆ ಸಿಕ್ಕಿದೆಯಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
#VaccineCentury ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ(Karnataka BJP), ‘ಮಾನ್ಯ ಸಿದ್ದರಾಮಯ್ಯನವರೇ ಕೋವಿಡ್ ದುರಿತ ಕಾಲದಲ್ಲಿ ಮಾನವೀಯ ನೆಲೆಯಲ್ಲಿ 95 ಕ್ಕೂ ಅಧಿಕ ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಡೆಯನ್ನು ಶ್ಲಾಘಿಸಿವೆ. ಇದನ್ನೂ ನೀವು ವೈಫಲ್ಯ ಎಂದು ಪರಿಗಣಿಸುವಿರಾ? ಇದು ದೃಷ್ಟಿದೋಷವೋ, ಹೃದಯದ ದೋಷವೋ?’ ಎಂದು ಪ್ರಶ್ನಿಸಿದೆ.
Azadi Ka Amrit Mahotsa : 'NSG ಬ್ಲ್ಯಾಕ್ ಕ್ಯಾಟ್ ರ್‍ಯಾಲಿ'ಗೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ!
‘ವಿವಿಧ ದೇಶಗಳು ವಿತರಿಸಿದ ಲಸಿಕೆ ಪ್ರಮಾಣ(Corona Vaccine) ನೋಡುವುದಾದರೆ ಅಮೆರಿಕವು 41.01 ಕೋಟಿ, ಜಪಾನ್ 18.21 ಕೋಟಿ, ಜರ್ಮನಿ 11.12 ಕೋಟಿ, ರಷ್ಯಾ 9.98 ಕೋಟಿ ಮತ್ತು ಬ್ರಿಟನ್ 9.53 ಕೋಟಿ ಲಸಿಕೆ ವಿತರಿಸಿದರೆ, ಇದೇ ಅವಧಿಯಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿದೆ. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮಾಡಿದ ಕೆಲಸಕ್ಕಾಗಿ ಸಂಭ್ರಮಿಸುವುದು ತಪ್ಪೇ ಸಿದ್ದರಾಮಯ್ಯ?(Siddaramaiah)’ ಅಂತಾ ಬಿಜೆಪಿ ಪ್ರಶ್ನಿಸಿದೆ.
COVID-19 Vaccine)ವಿತರಿಸಲಾಗಿದೆ. 4.15 ಕೋಟಿಗೂ ಅಧಿಕ ಜನರಿಗೆ ಮೊದಲ ಡೋಸ್ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ. ಸಿದ್ದರಾಮಯ್ಯನವರೇ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ?’ ಎಂದು ಬಿಜೆಪಿ(BJP) ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸುಳ್ಳು ಸಾಧನೆಗಳ ಖಾಲಿತಟ್ಟೆ ಬಡಿದು ಮೋದಿ ದೇಶದ ಜನರನ್ನು ಮರುಳು ಮಾಡುತ್ತಿದ್ದಾರೆ: ಸಿದ್ದರಾಮಯ್ಯ
Rahul Gandhi) & ಡಿಕೆಶಿಯವರೇ ಲಸಿಕೆ ವಿತರಣೆಯಲ್ಲಿ ಭಾರತ ಸಾಧಿಸಿದ ಪ್ರಗತಿಗೆ ವಿಶ್ವವೇ ಬೆರಗಾಗಿದೆ. ಜಾಗತಿಕ ಗಣ್ಯರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿಗರು ಕೊಂಕು ನುಡಿಯುವುದರಲ್ಲಿ ತಲ್ಲೀನರಾಗಿದ್ದಾರೆ. ನೀವು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದೀರಾ?’ ಅಂತಾ ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ