ಹಾಸನದಲ್ಲಿ ಮಕ್ಕಳ ಮರಣ ಮೃದಂಗ: ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 193 ಕಂದಮ್ಮಗಳ ಸಾವು
ಹಾಸನ: ಕಂದಮ್ಮಗಳು ಕನ್ಬಿಡುವ ಮುನ್ನವೇ ಕಮರಿ ಹೋಗುತ್ತಿರುವಂತಹ ದುರಂತ ಇದೀಗ ಹಾಸನ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ. ಆಗಸ್ಟ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಈ ರೀತಿಯ ಮಕ್ಕಳ ಸಾಲು ಸಾಲು ಸಾವು ಸಂಭವಿಸಿತ್ತು.
ಹಾಸನದಲ್ಲಿ ಸಂಭವಿಸುತ್ತಿರುವ ಕಂದಮ್ಮಗಳ ಸಾಲು ಸಾಲು ಮರಣಕ್ಕೆ ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಕೊರತೆಯೇ ಕಾರಣ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 193 ಕಂದಮ್ಮಗಳ ಸಾವು ಸಂಭವಿಸಿದೆ. ರಾಜ್ಯ ಸರ್ಕಾರ ಈ ಬಗ್ಗೆ ಯಾವಾಗ ಗಮನ ಹರಿಸುವುದೋ ಎಂಬುದನ್ನು ಕಾಡು ನೋಡಬೇಕಿದೆ.