ಮುಂಬೈ: ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು 'ನಿರ್ಧಿಷ್ಟ ಚೌಕಟ್ಟಿನ' ಅಡಿಯಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೂ ಗಡಿಯಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಪುನರುಚ್ಚರಿಸಿದ್ದಾರೆ.


COMMERCIAL BREAK
SCROLL TO CONTINUE READING

'ಈವರೆಗೆ ಏನಾಗಿದೆಯೋ ಅದೆಲ್ಲ ಆಗಿಹೋಯಿತು. ಈಗ ನಾವು ಗೆಲ್ಲಲು ಹೋರಾಡಬೇಕಿದೆ. ದೀರ್ಘ ಕಾಲದಿಂದಲೂ ಉಳಿದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಧಿಷ್ಟ ಸಮಯದಲ್ಲಿ ಪರಿಹರಿಸಿಕೊಳ್ಳುವತ್ತ ನಾವು ಕೆಲಸ ಮಾಡಬೇಕಾಗಿದೆ' ಎಂದು ಎನ್‌ಸಿಪಿ ನಾಯಕ ಶರದ್ ಪವಾರ್(Sharad Pawar) ಒಳಗೊಂಡಂತೆ ಮಹಾರಾಷ್ಟ್ರ ಉನ್ನತ ನಾಯಕರ ಸಮ್ಮುಖದಲ್ಲಿ ಶಿವಸೇನೆ ಅಧ್ಯಕ್ಷ ಠಾಕ್ರೆ ತಿಳಿಸಿದರು.


Congress: ರಾಮ ಮಂದಿರ ನಿರ್ಮಾಣಕ್ಕೆ '₹ 2 ಲಕ್ಷ ದೇಣಿ'ಗೆ ನೀಡಿದ ಕಾಂಗ್ರೆಸ್ ಶಾಸಕಿ..!


ಡಾ.ದೀಪಕ್ ಪವಾರ್ ಬರೆದ ಮರಾಠಿಯಲ್ಲಿ ಇರುವ 'ಮಹಾರಾಷ್ಟ್ರ ಕರ್ನಾಟಕ ಸೀಮಾವಾದ್‌: ಸಂಘರ್ಷ್‌ ಅನಿ ಸಂಕಲ್ಪ್‌' (ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಹೋರಾಟ ಮತ್ತು ಪ್ರತಿಜ್ಞೆ) ಹೆಸರಿನ 530 ಪುಟಗಳ ಈ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಠಾಕ್ರೆ ಮಾತನಾಡಿದರು. ಇಲ್ಲಿನ ಮಲಬಾರ್ ಬೆಟ್ಟದ ಸಹ್ಯಾದ್ರಿ ಅತಿಥಿಗೃಹದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮತ್ತು ಗಡಿ ಪ್ರದೇಶಗಳ ಸ್ಥಳೀಯರು ಉಪಸ್ಥಿತರಿದ್ದರು.


B.Sriramulu: 'ರೈತರೇ, ಕಾಂಗ್ರೆಸ್ ನಿಮ್ಮ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದೆ'


'ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಬಾಕಿ ಇಧೆ. ಆದರೆ ಕರ್ನಾಟಕ (ಸರ್ಕಾರ) ವರ್ತಿಸುವ ರೀತಿಯು ನ್ಯಾಯಾಂಗ ನಿಂದನೆಗೆ ಸಮನಾಗಿರುತ್ತದೆ. ಅವರು ಬೆಳಗಾಂ ಹೆಸರನ್ನು (ಬೆಳಗಾವಿ ಎಂದು) ಬದಲಾಯಿಸಿದ್ದಾರೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿದ್ದಾರೆ, ಅಲ್ಲೊಂದು ವಿಧಾನ ಸೌಧವನ್ನು ನಿರ್ಮಿಸಿ ಅಧಿವೇಶನವನ್ನು ನಡೆಸಿದರು' ಎಂದು ಠಾಕ್ರೆ ಹೇಳಿದರು.


Basavaraj Horatti: ಸಭಾಪತಿ ಸ್ಥಾನಕ್ಕೆ 'ಬಸವರಾಜ್ ಹೊರಟ್ಟಿ' ಹೆಸರು ಫೈನಲ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.