Bengaluru Metro: ತಾಂತ್ರಿಕ ದೋಷದಿಂದ ನಮ್ಮ ಮೆಟ್ರೋ ಓಡಾಟದಲ್ಲಿ ವಿಳಂಬ : ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ
Namma Metro Purple Line Delayed: ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಓಡಾಟ ವಿಳಂಬವಾಗುತ್ತಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
Technical Snag Causes Namma Metro Purple Line Delay : ಬೆಳ್ಳಂ ಬೆಳ್ಳಗ್ಗೆಯೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಸಿಕ್ಕಿದೆ. ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರೈಲು ವಿಳಂಬದಿಂದ ಮೆಟ್ರೋ ಪ್ರಯಾಣಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ :
ಬೆಂಗಳೂರಿನ ಟ್ರಾಫಿಕ್ ಕಿರಿ ತಪ್ಪಿಸಿಕೊಳ್ಳಲು ಜನರು ಮೆಟ್ರೋವನ್ನು ಅವಲಂಬಿಸುತ್ತಾರೆ. ಬೆಳಗ್ಗೆ ಕಾಲೇಜು, ಕಚೇರಿಗೆ ತೆರಳಲು ಅನೇಕರು ನಮ್ಮ ಮೆಟ್ರೋವನ್ನೇ ಆಶ್ರಯಿಸಿಕೊಂಡಿರುತ್ತಾರೆ. ಆದರೆ ಎಂದಿನಂತೆ ಕಚೇರಿಗೆ ತೆರಳಲು ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಮಂದಿಗೆ ಇಂದು ಶಾಕ್ ಕಾದಿತ್ತು. ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಓಡಾಟ ವಿಳಂಬವಾಗುತ್ತಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಇದನ್ನೂ ಓದಿ : ವ್ಯಾಪಾರ ಸಂಬಂಧ ಗಟ್ಟಿಗೊಳಿಸಲು ಅಮೆರಿಕಾದ ಅಮ್’ಚಾಮ್ ಸಂಸ್ಥೆಯೊಂದಿಗೆ ರಾಜ್ಯ ಸರ್ಕಾರದ ಒಪ್ಪಂದ
ಅರ್ಧಗಂಟೆಗೆ ಒಂದರಂತೆ ಮೆಟ್ರೋ :
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ಮೆಟ್ರೋ ರೈಲುಗಳು ಓಡಾಟ ಬಹಳ ನಿಧಾನವಾಗಿದೆ. ಪ್ರತಿ ಅರ್ಧಗಂಟೆಗೆ ಒಂದರಂತೆ ಮೆಟ್ರೋ ಓಡಾಡುತ್ತಿದ್ದು, ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ.
ಸಿಬ್ಬಂದಿ ಜೊತೆ ಪ್ರಯಾಣಿಕರ ವಾಗ್ವಾದ:
ಮೆಟ್ರೋ ಓಡಾಟ ವಿಳಂಬವಾಗುತ್ತಿದ್ದ ಹಾಗೆ ನಿಲ್ದಾಣಗಳಲ್ಲಿ ಜನ ದಟ್ಟನೆ ವಿಪರೀತ ಏರಿದೆ. ಇದರಿಂದ ಆಕ್ರೋಶಗೊಂಡಿರುವ ಪ್ರಯಾಣಿಕರು ಮೆಟ್ರೋ ನಿಲ್ದಾಣದೊಳಗೆ ಭದ್ರತಾ ವಿಭಾಗದ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಪ್ರವೇಶ ದ್ವಾರವೇ ಬಂದ್ :
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಮೆಟ್ರೋ ಸಿಬ್ಬಂದಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರವನ್ನೇ ಬಂದ್ ಮಾಡಿದ್ದಾರೆ. ಇದರಿಂದಾಗಿ ಮೆಟ್ರೋ ನಿಲ್ದಾಣದ ಹೊರಗೂ ಜನ ಕಾಯುತ್ತಾ ಕುಳಿತು ಕೊಳ್ಳುವಂತಾಗಿದೆ. ಮೆಟ್ರೋ ನಿಲ್ದಾಣದ ಒಳಗಿನಿಂದ ಹೊರ ಬರುವವರಿಗೆ ಮಾತ್ರ ಬಾಗಿಲು ತೆರೆಯಲಾಗುತ್ತಿದೆ.
ಇದನ್ನೂ ಓದಿ : ಬಿಸಿಲ ಧಗೆ ಏರುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಸರ್ಪಗಳ ಕಾಟ! ನೆಲದೊಳಗಿದ್ದ ಎದ್ದು ಬರುತ್ತಿವೆ ವಿಷಕಾರಿ ಸರ್ಪಗಳು
ಮುಂಜಾನೆಯೇ ಈ ಸಮಸ್ಯೆ ಉಂಟಾಗಿರುವ ಕಾರಣ ಜನ ಬಸ್, ಕ್ಯಾಬ್, ರಿಕ್ಷಾಗಳ ಮೊರೆ ಹೋಗುವಂತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.