ನವದೆಹಲಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರ ನೇತೃತ್ವದ ನಿಯೋಗವು ನವದೆಹಲಿಯಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


COMMERCIAL BREAK
SCROLL TO CONTINUE READING

ಮನವಿ ಪತ್ರದಲ್ಲಿ ಹಣಕಾಸು ಸಚಿವಾಲಯಕ್ಕೆ ಸಂಬಂಧಿಸಿದ ಅಂಶಗಳು :


ನಾಡಿನ ಅಭಿವೃದ್ಧಿಯಲ್ಲಿ ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗಬೇಕು ಅನ್ನುವ ಉದ್ದೇಶದಿಂದ ‘ಜನಧನ’ ಅಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಲ್ಲದೇ ಸರ್ಕಾರವು ರೂಪಿಸಿರುವ ಕಲ್ಯಾಣ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಆದರೆ, ಬ್ಯಾಂಕಿಂಗ್ ಸೇವೆಗಳು ಮಾತ್ರ ಜನ ಭಾಷೆಗಳಲ್ಲಿ ನಡೆಯುತ್ತಿಲ್ಲ.ಬಹುತೇಕ ಎಲ್ಲ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲೀಷ್‌ಗೆ ಸೀಮಿತವಾಗಿವೆ. ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆತಾಗ ಮಾತ್ರ ಸರ್ಕಾರದ ಸದಾಶಯ ಸಫಲವಾಗುತ್ತದೆ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳುತ್ತದೆ. ಜನ ಭಾಷೆಯಲ್ಲಿ ಬ್ಯಾಂಕ್ ವ್ಯವಹಾರ ನಡೆಯಬೇಕಾದರೆ, ಸಿಬ್ಬಂದಿಗಳು ಜನ ಭಾಷೆ ಬಲ್ಲವರಾಗಿರಬೇಕು. ಸದ್ಯದ ನೇಮಕಾತಿ ವ್ಯವಸ್ಥೆಯಲ್ಲಿ(IBPS) ಜನ ಭಾಷೆಗಳಿಗೆ ಮಾನ್ಯತೆಯಿಲ್ಲ. ತಾವು ಕಳೆದ ವರ್ಷ SBI ನೇಮಕಾತಿಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿರುವುದಕ್ಕೆ ಪ್ರಾಧಿಕಾರ ಅಖಂಡ ಕನ್ನಡ ಮನಸ್ಸುಗಳ ಪರವಾಗಿ ಅಭಿನಂದಿಸುತ್ತದೆ. ‘ವಿವಿಧತೆಯಲ್ಲಿ ಏಕತೆ’ಅನ್ನುವ ನೀತಿಗೆ IBPS ಕೇಂದ್ರೀಕೃತ ವ್ಯವಸ್ಥೆ ಅಪಾಯ ತರುತ್ತದೆ.



ಇದನ್ನೂ ಓದಿ: ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳ ಕರೆ


ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA): ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಿಬ್ಬಂದಿ ನಾನ್ ಗೆಜಿಟೆಡ್ ಹುದ್ದೆಗಳ ನೇಮಕಾತಿಗಾಗಿ ನಡೆಯವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು (National Recruitment Agency) ಸ್ಥಾಪಿಸಲಾಗುವುದು ಎಂದು 2020-21ರ ಆಯ-ವ್ಯಯದಲ್ಲಿ ಪ್ರಕಟಸಲಾಗಿದೆ. ಈ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ನಡೆಸುವ ಎಲ್ಲ ಪರೀಕ್ಷೆಗಳೂ ಹಿಂದಿ, ಇಂಗ್ಲಿಷ್ ಜೊತೆಗೆ ಸಂವಿಧಾನದ ಅನುಸೂಚಿ 8ರಲ್ಲಿರುವ ಎಲ್ಲ 22 ಭಾಷೆಗಳಲ್ಲೂ ನಡೆಸಬೇಕು ಹಾಗೂ ಆಯಾಯ ರಾಜ್ಯ ಭಾಷೆಯನ್ನು 1 ರಿಂದ 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ವ್ಯಾಸಂಗ ಮಾಡಿರುವವರು ಮಾತ್ರ ಆಯಾಯ ರಾಜ್ಯದಲ್ಲಿ ಅರ್ಜಿ ಸಲ್ಲಿಸಲು ಅರ್ಹರು ಎಂಬ ನಿಯಮವನ್ನು ರೂಪಿಸಬೇಕು.


IBPS ಪ್ರಸ್ತುತ ನೇಮಕಾತಿ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ಗಳಲ್ಲಿ ಮಾತ್ರ ನಡೆಸುತ್ತಿದೆ. ಅಭ್ಯರ್ಥಿಯ ಆಯ್ಕೆ ಮಾಡಿಕೊಳ್ಳುವ ಪ್ರಾದೇಶಿಕ ಭಾಷಾ ಜ್ಞಾನವು ಅಪೇಕ್ಷಣೀಯ ಅಂದಿರುವುದರಿಂದ ಹಿಂದಿ ಮತ್ತು ಇಂಗ್ಲಿಷ್ ಜ್ಞಾನ ಇಲ್ಲದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿಲ್ಲ. ಅದನ್ನು ಸರಿಪಡಿಸಲು 2012ರವರೆಗೆ ಇದ್ದ ‘ಅಭ್ಯರ್ಥಿಯು ಆಯ್ಕೆ ಮಾಡಿಕೊಳ್ಳುವ ರಾಜ್ಯದ ಅಧಿಕೃತ ಭಾಷೆಯಲ್ಲಿ ಪರಿಣಿತರಾಗಿರಬೇಕು, ಅಂದರೆ ಮೆಟ್ರಿಕ್ಯುಲೇಷನ್ / ಎಸ್ಸೆಸ್ಸೆಲ್ಸಿ/ಹತ್ತನೇ ತರಗತಿಗಳ ಹಂತದಲ್ಲಿ ಒಂದು ಭಾಷೆಯಾಗಿ ಕಡ್ಡಾಯವಾಗಿ ಓದಿರಲೇಬೇಕು’ಎಂಬ ನಿಯಮವನ್ನು ಜಾರಿಗೆ ತರಬೇಕು.


ಇದನ್ನೂ ಓದಿ: Job and Career: ಈ ಜಿಲ್ಲೆಗಳ ರೈತರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಸುವರ್ಣಾವಕಾಶ...!


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳ IBPS ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು. ರೈಲ್ವೆ ನೇಮಕಾತಿಯಲ್ಲಿರುವಂತೆ ಅನುಚ್ಛೇಧ-8 ರಲ್ಲಿರುವ 22 ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶವಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ತಾವು ಆಯ್ದುಕೊಂಡ ರಾಜ್ಯದ ಅಧಿಕೃತ ಭಾಷೆಯನ್ನು 10ನೇ ತರಗತಿ (SSLC) ಯವರೆಗೆ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಸಿಸಿರಬೇಕು. ಈ ಕುರಿತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ತಮಗೆ ದಿನಾಂಕ 13-08-2021 ರಂದು ಪತ್ರ ಬರೆದಿರುತ್ತಾರೆ.



ಭಾಷಾ ಪ್ರೌಢಿಮೆಯನ್ನು ಕೌಶಲ್ಯ ವ್ಯಾಪ್ತಿಯಲ್ಲಿ ಪರಿಗಣಿಸಿ, ನೇಮಕಾತಿ ಪೂರ್ವದಲ್ಲೇ ಸ್ಥಳೀಯ ಭಾಷಾ ಕೌಶಲ್ಯ ಪರೀಕ್ಷೆ ತೇರ್ಗಡೆ ಹೊಂದುವುದನ್ನು ಕಡ್ಡಾಯ ಮಾಡಬೇಕು.


2015 ರಿಂದ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು  ಸಿಬ್ಬಂದಿ ಕಡ್ಡಾಯವಾಗಿ ಸ್ಥಳೀಯ ಅಧಿಕೃತ ರಾಜ್ಯ ಭಾಷೆಯನ್ನು (ಕನ್ನಡ) 6 ತಿಂಗಳಲ್ಲಿ ಕಲಿಯಬೇಕೆಂಬ ನಿಯಮವಿದೆ. ಆ ನಿಯಮದನ್ವಯ ಕನ್ನಡ ಕಲಿಯದ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು.


ಇದನ್ನೂ ಓದಿ: ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ, ‘ಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ: ಎಚ್​ಡಿಕೆ


ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಶ್ಲಾಘನೀಯ. ಕೇಂದ್ರದ ಈ ಜನಪರ ಆಶಯ ಸಫಲವಾಗಬೇಕಾದರೆ ಬ್ಯಾಂಕ್ ವ್ಯವಹಾರ ಜನಭಾಷೆಯಲ್ಲಿರಬೇಕು ಅಂದರೆ, ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಗಳಲ್ಲಿ ಎಲ್ಲ ಹಂತದ ಬ್ಯಾಂಕಿಂಗ್ ಸೇವೆಗಳು ದೊರೆಯುವಂತಾಗಬೇಕು. ಸದ್ಯ ಬ್ಯಾಂಕಿಂಗ್ ಸೇವೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಸೀಮಿತವಾಗಿವೆ. ಬ್ಯಾಂಕ್ ಸೇವೆಗಳು ತ್ರಿಭಾಷಾ ಸೂತ್ರದಲ್ಲಿ ಕಡ್ಡಾಯವಾಗಿ ನಡೆಯುವಂತಾಗಬೇಕು. ಅಂದರೆ,ಸರ್ಕಾರವು ಸಂವಿಧಾನದ 8ರ ಅನುಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಲ್ಲೂ ಬ್ಯಾಂಕ್ ವ್ಯವಹಾರಗಳು ನಡೆಯುವಂತೆ ಆದೇಶ ನೀಡಬೇಕು ಎಂಬ ಅಂಶಗಳ  ಕುರಿತು ಮನವಿ ಪತ್ರ ಸಲ್ಲಿಸಿದರು.


ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್,  ಡಾ. ಸಿ.ಎ.ಕಿಶೋರ್, ಸುರೇಶ್ ಬಡಿಗೇರ್ ಹಾಗೂ ಪ್ರಾದಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಅವರು ಉಪಸ್ಥಿತರಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.