ಡಿಕೆಶಿ ಜಾಮೀನು ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್
ಮನಿ ಲಾಂಡರಿಂಗ್ ಪ್ರಕರಣದ ವಿಚಾರವಾಗಿ ಬಂಧನದಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ದೆಹಲಿ ಹೈಕೋರ್ಟ್ ಈಗ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣದ ವಿಚಾರವಾಗಿ ಬಂಧನದಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ದೆಹಲಿ ಹೈಕೋರ್ಟ್ ಈಗ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.
ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಡಿಕೆಶಿ ದೆಹಲಿ ಹೈಕೋರ್ಟ್ ಗೆ ಮೊರೆಹೋಗಿದ್ದರು. ಇನ್ನೊಂದೆಡೆಗೆ ವಿಚಾರಣೆ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಜಾರಿ ನಿರ್ದೇಶನಾಲಯದ ವಕೀಲರ ವಿರುದ್ಧ ಕೋರ್ಟಿನ ಸಮಯ ಹರಣ ಮಾಡಿದ್ದರ ವಿಚಾರವಾಗಿ ಕಿಡಿ ಕಾರಿತ್ತು. ಕೋರ್ಟ್ ನಲ್ಲಿ ನಡೆದ ಈ ಎಲ್ಲ ನಾಟಕೀಯ ಬೆಳವಣಿಗೆ ನಂತರ ವಕೀಲ ಕೆ.ಎಂ ನಟರಾಜ್ ಅವರು ಕೋರ್ಟ್ ಗೆ ಆಗಮಿಸಿದ್ದರು.
ಕೊನೆಗೆ ಇಡಿ ಪರ ವಕೀಲರ ವಾದವನ್ನು ಆಲಿಸಿದ ದೆಹಲಿ ಹೈಕೋರ್ಟ್ ಈಗ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ. ಸದ್ಯ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.