Banglore : ಚುನಾವಣೆ ಕಾವು ಬರೆ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಪ್ರತಿ ಬಿಜಿನೆಸ್ ನಲ್ಲೂ  ಪ್ರಭಾವ ಬಿರಿದೆ. ಅದರಲ್ಲೂ ಮೇ 10 ರಂದು ನಡೆಯೋ ಚುನಾವಣೆಗೆ ಖಾಸಗಿ ಬಸ್ ಗಳಿಗೆ ಬಾರಿ ಬೇಡಿಕೆ ಶುರುವಾಗಿದೆ, ಮತದಾನದ ಹೊಸ್ತಿಲಲ್ಲಿ ಖಾಸಗಿ ಬಸ್ ಗಳಿಗೆ ಭಾರೀ ಬೇಡಿಕೆ ಬಂದಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ಹೆಚ್ಚುವರಿ ಬಸ್ ಗಳನ್ನು ಒದಗಿಸುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಬೇಡಿಕೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

 ಈ ಮೂಲಕ ಕೊರೋನಾ ನಷ್ಟದಿಂದ ಚೇತರಿಕೆ ಕಾಣುವ ನಿರೀಕ್ಷೆಯಲ್ಲಿದ್ದಾರೆ ಖಾಸಗಿ ಬಸ್ ಮಾಲೀಕರು. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಖಾಸಗಿ ಬಸ್ ಮಾಲೀಕರನ್ನು ವಿವಿಧ ಪಕ್ಷದ ಮುಖಂಡರು ಸಂಪರ್ಕ ಮಾಡಿದ್ದಾರೆ. ಈಗಾಗಲೇ KSRTC, NWRTC, KKRTC ಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಟೆಕೆಟ್ ಬುಕಿಂಗ್ ಆಗಿದೆ. ಮೇ 9 ರಂದು ರಾತ್ರಿ ಬೆಂಗಳೂರಿನಿಂದ 25 ಲಕ್ಷ ಜನರು ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ನಿರೀಕ್ಷೆ ಇದೆ. 


ಇದಿನ್ನೂ ಓದಿ-Karnataka Assembly Election: ಬಿಜೆಪಿಯವರನ ನೋಡಿದ್ರೆ ಯಾರು ವೋಟ್ ಹಾಕಲ್ಲ ಅದ್ಕೆ ಪದೇ ಪದೇ ಮೋದಿ & ಅಮಿತ್ ಶಾ ಅವ್ರನ್ನ ಕರೆಸುತ್ತಿದ್ದಾರೆ: ಸಿದ್ದರಾಮಯ್ಯ


ಹೀಗಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ವಿವಿಧ ಪಕ್ಷಗಳು ಮನವಿ ಮಾಡಿವೆ.  ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜನ್ರು ಹೆಚ್ಚಗಿ ಬಾರ್ ,,ಗಾರ್ಮೇಂಟ್ , ಖಾಸಗಿ ಕಂಪನಿಗಳು ಸೇರಿದಂತೆ ಕೂಲಿ ಕೆಲಸ ಅರಸಿ ಬಂದಿದ್ದು ಇವರುಗಳ ವೋಟ್ ಅವರ ಜಿಲ್ಲೆಗಳಲ್ಲೇ ಇರುತ್ತವೆ, ಈ ಹಿನ್ನೇಲೆಯಲ್ಲಿ  ಸಾಮಾನ್ಯವಾಗಿ ಬೆಂಗಳೂರಿಂದ ಪ್ರತಿನಿತ್ಯ 2 ರಿಂದ 2,500 ಬಸ್ ಗಳು ವಿವಿಧ ಭಾಗಗಳಿಗೆ ಸೇವೆ ಒದಗಿಸುತ್ತಿದೆ. 


ಆದರೆ ಮೇ 9ರಂದು ರಾತ್ರಿ 7 ಸಾವಿರಕ್ಕೂ ಅಧಿಕ ಖಾಸಗಿ ಬಸ್ ಗಳು ರಸ್ತೆಗಳಿಸಲು ಖಾಸಗಿ ಬಸ್ ಮಾಲೀಕರು ಸಜ್ಜಾಗಿ ನಿಂತಿದ್ದಾರೆ. ಹಳೆ ಮೈಸೂರು ಭಾಗಗಳು ಸೇರಿದಂತೆ  ಬಳ್ಳಾರಿ, ಬೆಳಗಾವಿ, ಮಂಗಳೂರು, ಚಿಕ್ಕಮಗಳೂರು, ಶೃಂಗೇರಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಗೆ ಈಗಾಗಲೇ ಹೆಚ್ಚುವರಿ ಬಸ್ ಕಾಯ್ದಿರಿಸುವಂತೆ ಮೂರು ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಬಸ್ ಮಾಲೀಕರ ಸಂಘಕ್ಕೆ ಮನವಿ ಮಾಡಿದ್ದಾರೆ. 


ಇದಿನ್ನೂ ಓದಿ-ಭಜರಂಗದಳದವರು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ – ಸಿಎಂ ಬೊಮ್ಮಾಯಿ


ಚುನಾವಣಾ ಹಿಂದಿನ ದಿನದಂದು ನಮ್ಮ ಬಸ್ ಗಳಿಗೆ ಬಹಳ ಬೇಡಿಕೆ ಬಂದಿರುವ ಹಿನ್ನೆಲೆ ಕರೋನಾ ಟೈಮಲ್ಲಿ ಗ್ಯಾರೇಜ್ ದಾರಿ ಹಿಡಿದಿದ್ದ ಬಸ್ ಗಳು ಮತ್ತೆ ರಸ್ತೆಗೆ ಇಳಿಯುವ ಸಂಭವವಿದೆ. ಈಗಾಗಲೇ ಜಿಲ್ಲಾವಾರು ಬಸ್ ಸಂಘಗಳ ಜೊತೆ ಎಲ್ಲಾ ರಾಜಕೀಯ ಮುಖಂಡರು ಕೂಡ ಚರ್ಚೆ ಮಾಡ್ತಿದ್ದಾರೆ. ಈ ಮೂಲಕ ಮೇ 9ರಂದು ಬೆಂಗಳೂರಿನಿಂದ ಸುಮಾರು 7 ಸಾವಿರ ಖಾಸಗಿ ಬಸ್ ಗಳು ಸೇವೆ ನೀಡಲು ಸಜ್ಜಾಗಿರುವ ಮಾಹಿತಿ ಲಭ್ಯವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.