Rajkaluve: ರಾಜಕಾಲುವೆ ಒತ್ತುವರಿ ಕುರಿತಂತೆ ಬೃಹತ್ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಆಗ್ರಹ!
ರಾಜಕಾಲುವೆಗಳು, ಕೆರೆಗಳು ಮತ್ತು ಅವುಗಳ Buffer Zone ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವ ಬೃಹತ್ ಹಗರಣವನ್ನು CID ತನಿಖೆಗೆ ವಹಿಸಬೇಕೆಂದು ಕೋರಿ ದೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾಪ್ತಿಯಲ್ಲಿ ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆಗಳು ಮತ್ತು ಸುಮಾರು 3,428 ಎಕರೆಗಳಷ್ಟು ವಿಸ್ತೀರ್ಣದ Buffer Zone ಪ್ರದೇಶಗಳು ಇರುತ್ತವೆ. ಈ ಪೈಕಿ ಈಗಾಗಲೇ ಸುಮಾರು 410 ಕಿ.ಮೀ. ಉದ್ದದಷ್ಟು ರಾಜಕಾಲುವೆಗಳನ್ನು ಮತ್ತು ಸುಮಾರು 1,500 ಎಕರೆಗಳಷ್ಟು ವಿಸ್ತೀರ್ಣದ Buffer Zone ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವುದು ದಾಖಲೆಗಳಿಂದ ಧೃಢಪಟ್ಟಿರುತ್ತದೆ.
ಹಾಗೆಯೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 210 ಕೆರೆಗಳಿದ್ದು, ಈ ಪೈಕಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 55 ಕೆರೆಗಳನ್ನು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 78 ಕೆರೆಗಳನ್ನು ನಿರ್ವಹಿಸುತ್ತಿರುತ್ತದೆ. ಉಳಿದ 77 ಕೆರೆಗಳು ಅರಣ್ಯ ಇಲಾಖೆಯ ವಶದಲ್ಲಿರುತ್ತದೆ. ಆದರೆ, ಈ 210 ಕೆರೆಗಳ ಪೈಕಿ ಜೀವಂತವಾಗಿರುವುದು ಕೇವಲ 57 ಕೆರೆಗಳು ಮಾತ್ರ ರಾಜಕಾಲುವೆಗಳ ಪೈಕಿ, ಕಣಿವೆಯಿಂದ ಕಣಿವೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಗಳೆಂದು, ಕಣಿವೆಯಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು Secondary Drain ಗಳೆಂದು ಮತ್ತು ಕೆರೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಗಳೆಂದು ಕರೆಯಲಾಗುತ್ತದೆ.
ಪ್ರದೇಶದ ವ್ಯಾಪ್ತಿ 50 ಮೀಟರ್ ಗಳಷ್ಟು, ಪ್ರದೇಶದ ವ್ಯಾಪ್ತಿ 25 ಮೀಟರ್ ಗಳಷ್ಟು, ಮತ್ತು ಪ್ರದೇಶದ ವ್ಯಾಪ್ತಿ 15 ಮೀಟರ್ ಗಳಷ್ಟು, ಇರಬೇಕಿರುತ್ತದೆ. ಹಾಗೆಯೇ, ಪ್ರತಿಯೊಂದು ಕೆರೆಯ Buffer Zone ಪ್ರದೇಶದ ವ್ಯಾಪ್ತಿ ಈ ಹಿಂದೆ 50 ಮೀಟರ್ ಗಳಷ್ಟು, ಇದ್ದು, ಇತ್ತೀಚೆಗೆ ಹಸಿರು ನ್ಯಾಯಾಧಿಕರಣವು (Green Tribunal) ನೀಡಿರುವ ಆದೇಶದಂತೆ 75 ಮೀಟರ್ ಗಳಷ್ಟು, ಇರಬೇಕಿರುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾಪ್ತಿಯಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಮಾಡುತ್ತಿರುವ ಸುಮಾರು 368 ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಗಳು, 79 ಪ್ರಮುಖ Tech Park ಗಳ ಪೈಕಿ 29 Tech Park ಗಳು, ಸುಮಾರು 150 ಕ್ಕೂ ಹೆಚ್ಚು ಕಂಪೆನಿಗಳು ಮತ್ತು ಗಳ ಪೈಕಿ ಸುಮಾರು 50 ಕ್ಕೂ ಹೆಚ್ಚು ಗಳು ರಾಜಕಾಲುವೆಗಳು, ಕೆರೆಗಳು ಮತ್ತು ಅದರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿರುವುದು ಬಹಿರಂಗ ಸತ್ಯವಾಗಿದೆ.
ಅಲ್ಲದೇ, ಬಹುತೇಕ ಬಿಲ್ಡರ್ ಗಳು ರಾಜಕಾಲುವೆಗಳ ದಿಕ್ಕುಗಳನ್ನೇ ಬದಲಿಸಿರುವ ಹತ್ತಾರು ಉದಾಹರಣೆಗಳು ಇವೆ.
ಹಾಗೆಯೇ, ಪ್ರಭಾವೀ ರಾಜಕಾರಣಿಗಳ ಸೋಗಿನಲ್ಲಿರುವ ಕೆಲವು ಸರ್ಕಾರೀ ನೆಲಗಳ್ಳರೂ ಸಹ ದೊಡ್ಡ ಪ್ರಮಾಣದಲ್ಲಿ ರಾಜಕಾಲುವೆಗಳು, ಕೆರೆಗಳು ಮತ್ತು ಅದರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿಕೊಂಡಿರುತ್ತಾರೆ.
ಮೇಲ್ಕಂಡ ಈ ಸಂಸ್ಥೆಗಳು ಮತ್ತು ಪ್ರಭಾವೀ ವ್ಯಕ್ತಿಗಳು ಕಾನೂನು ಬಾಹಿರವಾಗಿ ರಾಜಕಾಲುವೆಗಳು, ಕೆರೆಗಳು ಮತ್ತು ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಬೃಹತ್ ವಸತಿ ಸಮುಚ್ಛಯಗಳನ್ನಾಗಲೀ, ವಾಣಿಜ್ಯ ಸಮುಚ್ಛಯಗಳನ್ನಾಗಲೀ ತೆರವುಗೊಳಿಸುವ ಯಾವುದೇ ಪ್ರಯತ್ನವನ್ನೂ ಸಹ ಪಾಲಿಕೆಯ ಅಧಿಕಾರಿಗಳಾಗಲೀ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಇಲ್ಲಿಯವರೆಗೆ ಮಾಡಿರುವುದಿಲ್ಲ. ಆದರೆ, ಕೇವಲ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ತಾವು ಮೋಸಹೋಗಿರುವುದು ತಿಳಿಯದೇ ನಿರ್ಮಿಸಿರುವ ಸಣ್ಣ ಗಾತ್ರದ ಕಟ್ಟಡಗಳನ್ನು ಮಾತ್ರ ತೆರವುಗೊಳಿಸುವ ಕಾರ್ಯವನ್ನು ಈ ಅಧಿಕಾರಿಗಳು ಮಾಡುತ್ತಿರುವುದು ಎಲ್ಲರ ಗಮನಕ್ಕೂ ಬಂದಿರುತ್ತದೆ.
ಬಡವರಿಗೊಂದು ನ್ಯಾಯ - ಬಲ್ಲಿದರಿಗೊಂದು ನ್ಯಾಯ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆಯ, ಬಿಡಿಎ ಮತ್ತು ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿನ ಪಕ್ಷಪಾತ ಧೋರಣೆ ಎಲ್ಲರ ಕಣ್ಣಿಗೂ ರಾಚುವಂತಿದೆ.
ಸರ್ವೋಚ್ಛ ನ್ಯಾಯಾಲಯವು ರಾಜಕಾಲುವೆ ಮತ್ತು ಅದರ ಪ್ರದೇಶಗಳ ತೆರವಿಗೆ ಸಂಬಂಧಿಸಿದಂತೆ ನೀಡಿರುವ ಆದೇಶವನ್ನು, ಸರ್ಕಾರವೂ ಎಲ್ಲ ವರ್ಗದ ಜನರ ವಿರುದ್ಧವೂ ಒಂದೇ ರೀತಿಯಲ್ಲಿ ಪಾಲಿಸಬೇಕಿರುತ್ತದೆ. ಆದರೆ, ಶ್ರೀಮಂತ / ಪ್ರಭಾವೀ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದ ಸರ್ಕಾರ / ಪಾಲಿಕೆ / ಬಿಡಿಎ ಕೇವಲ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರ ವಿರುದ್ಧ ಮಾತ್ರವೇ ಗದಾಪ್ರಹಾರ ಮಾಡುತ್ತಿರುವುದು ನ್ಯಾಯೋಚಿತವಾದುದಲ್ಲ.
Karnataka Land Revenue Act ನ ಕಲಂ 192/ಎ ನಂತೆ ಸರ್ಕಾರವು ಎಲ್ಲಾ ಸರ್ಕಾರೀ ಸ್ವತ್ತುಗಳ ಒತ್ತುವರಿದಾರರ / ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಲ್ಲದೇ, ಸಂಬಂಧಪಟ್ಟವರಿಗೆ ಯಾವುದೇ ಸೂಚನೆ ನೀಡದೇ ಅತಿಕ್ರಮಿತ ಪ್ರದೇಶಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾಗಿರುತ್ತದೆ. ಆದರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿರುವ ಪಾಲಿಕೆಯ ಅಧಿಕಾರಿಗಳಾಗಲೀ, ಬಿಡಿಎ ಅಧಿಕಾರಿಗಳಾಗಲೀ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳಾಗಲೀ ಈ ಕ್ಷಣದವರೆಗೆ ಯಾವುದೇ ಪ್ರತಿಷ್ಠಿತ ವಸತಿ / ವಾಣಿಜ್ಯ ಕಟ್ಟಡ ನಿರ್ಮಾಣ ಸಂಸ್ಥೆಗಳು, Tech Park ಗಳು, ಬೃಹತ್ IT / BT ಕಂಪೆನಿಗಳು ಮತ್ತು Malls & Multiplex ಸಂಸ್ಥೆಗಳು ಅತಿಕ್ರಮಿಸಿಕೊಂಡಿರುವ ರಾಜಕಾಲುವೆಗಳು, ಕೆರೆಗಳು ಮತ್ತು ಅವುಗಳ Buffer Zone ಪ್ರದೇಶಗಳನ್ನು ತೆರವುಗೊಳಿಸುವ ಸಣ್ಣ ಪ್ರಯತ್ನವನ್ನೂ ಸಹ ಮಾಡದಿರುವುದು ಮತ್ತು ಕೇವಲ ಮಧ್ಯಮ / ಕೆಳಮಧ್ಯಮ / ಬಡವರ್ಗದ ಜನರು ತಮ್ಮದಲ್ಲದ ತಪ್ಪಿನಿಂದಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಮಾತ್ರ ಕೆಡವುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಹುಳುಕುಗಳಿಗೆ ಹಿಡಿದ ಕೈಗನ್ನಡಿಯಂತಾಗಿದೆ !!!
ಇತ್ತೀಚೆಗೆ ಪಾಲಿಕೆಯು ಬಿಡುಗಡೆ ಮಾಡಿರುವ ದಾಖಲೆÉಗಳ ಪ್ರಕಾರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 1,955 ರಾಜಕಾಲುವೆಗಳ ಒತ್ತುವರಿ ಪ್ರಕರಣಗಳು ನಡೆದಿದ್ದು, ಈ ಪೈಕಿ, 822 ಒತ್ತುವರಿ ಗಳನ್ನು ತೆರವುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿರುತ್ತದೆ. ಆದರೆ, 842 ಕಿ.ಮೀ. ಉದ್ದದ ರಾಜಕಾಲುವೆಗಳು ಮತ್ತು ಅವುಗಳ Buffer Zone ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು 14,000 ಕ್ಕೂ ಹೆಚ್ಚು ಒತ್ತುವರಿ / ಕಬಳಿಕೆ ಪ್ರಕರಣಗಳು ನಡೆದಿರುತ್ತದೆ.
ಹಾಗೆಯೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ Website (bbmp.gov.in) ನಲ್ಲಿ ರಾಜಕಾಲುವೆಗಳು ಮತ್ತು ಅವುಗಳ Buffer Zone ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಸ್ವತ್ತುಗಳ ಮತ್ತು ಅವುಗಳ ಮಾಲೀಕರ ಹೆಸರುಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಪಟ್ಟಿಯಲ್ಲಿ ಯಾವುದೇ ಒಂದು ಪ್ರತಿಷ್ಟಿತ ಕಟ್ಟಡ ನಿರ್ಮಾಣ ಸಂಸ್ಥೆಯ ಹೆಸರಾಗಲೀ ಅಥವಾ ರಾಜಕಾರಣಿಗಳ ಹೆಸರಾಗಲೀ ಇರುವುದಿಲ್ಲ. ಕೇವಲ ಮಧ್ಯಮ, ಕೆಳಮಧ್ಯಮ ಮತ್ತು ಬಡ ಕುಟುಂಬದ ಕಟ್ಟಡಗಳನ್ನು ಮಾತ್ರ ನೆಲಸಮ ಗೊಳಿಸುತ್ತಿರುವ ರಾಜ್ಯ ಸರ್ಕಾರಕ್ಕಾಗಲೀ ಅಥವಾ ಪಾಲಿಕೆಯ ಅಧಿಕಾರಿಗಳಲ್ಲಾಗಲೀ ಮಾನವೀಯತೆ ಎಂಬುದೇ ಕಾಣಸಿಗುತ್ತಿಲ್ಲ.
ಈ ಮಧ್ಯಮ, ಕೆಳಮಧ್ಯಮ ಮತ್ತು ಬಡ ಕುಟುಂಬದ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿರುವ ಮತ್ತು ಇಂತಹ ಸರ್ಕಾರೀ ಪ್ರದೇಶಗಳಲ್ಲಿ ಬಡಾವಣೆಗಳನ್ನು ನಿರ್ಮಿಸಿದಂತಹ ವಂಚಕ Land Developer ಗಳ ವಿರುದ್ಧ ರಾಜ್ಯ ಸರ್ಕಾರವು ತನ್ನ ಪರಮಾಧಿಕಾರವನ್ನು ಬಳಸಿ, ಎಲ್ಲಾ ವಂಚಿತ ಕುಟುಂಬಸ್ಥರಿಗೆ ಪರಿಹಾರವನ್ನು ಅಂತಹ ವಂಚಕ Land Developer ಗಳಿಂದ ಪರಿಹಾರವನ್ನು ಕೊಡಿಸಬಹುದಾಗಿರುತ್ತದೆ. ದುರಂತವೆಂದರೆ, ಇಂತಹ ಯಾವುದೇ ಪ್ರಯತ್ನವನ್ನೂ ಸಹ ರಾಜ್ಯ ಸರ್ಕಾರವು ಮಾಡದೇ, ಕೇವಲ ಬಡ ಕುಟುಂಬಗಳನ್ನು ಬೀದಿಗೆ ತರುತ್ತಿದೆ.
ಈ ಬಡವರ ವಿರೋಧಿ ಸರ್ಕಾರಕ್ಕೆ ಮತ್ತು ಪಾಲಿಕೆಯ ಆಡಳಿತ ವರ್ಗಕ್ಕೆ ನಿಜವಾಗಿಯೂ ರಾಜಕಾಲುವೆಗಳು, ಕೆರೆಗಳು ಮತ್ತು ಅವುಗಳ Buffer Zone ಪ್ರದೇಶಗಳ ಬಗ್ಗೆ ಕಾಳಜಿ ಇದ್ದರೆ ಅಥವಾ ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲೇಬೇಕೆಂಬ ಧೃಢ ಸಂಕಲ್ಪವಿದ್ದರೆ, ಸುಮಾರು 1.2 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಬೆಲೆಬಾಳುವ ಈ ಸರ್ಕಾರೀ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿರುವ / ಕಬಳಿಸಿರುವ ಈ ಪ್ರತಿಷ್ಠಿತ ವಸತಿ / ವಾಣಿಜ್ಯ ಕಟ್ಟಡ ನಿರ್ಮಾಣ ಸಂಸ್ಥೆಗಳು, Tech Park ಗಳು, ಬೃಹತ್ IT / BT ಕಂಪೆನಿಗಳು ಮತ್ತು Malls & Multiplex ಸಂಸ್ಥೆಗಳ ವಿರುದ್ಧ, ಈ ಸಂಸ್ಥೆಗಳ ಪಾಲುದಾರರಾಗಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿರುತ್ತದೆ ಮತ್ತು ಅಷ್ಟೂ ಸರ್ಕಾರೀ ಪ್ರದೇಶಗಳಲ್ಲಿ ನಿರ್ಮಿಸಿರುವ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಿ, ಆ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕಿರುತ್ತದೆ.
ಆದರೆ, ಈ ಕೆಲಸವನ್ನು ರಾಜ್ಯ ಸರ್ಕಾರದಿಂದಾಗಲೀ, ಪಾಲಿಕೆಯಿಂದಾಗಲೀ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಾಗಲೀ ನಿರೀಕ್ಷಿಸಲು ಸಾಧ್ಯವೇ ???!!!
ಹಾಗಾಗಿಯೇ, ಈಗಾಗಲೇ ಒತ್ತುವರಿಯಾಗಿರುವಂತಹ ಸುಮಾರು 1.2 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಬೆಲೆಬಾಳುವ ರಾಜಕಾಲುವೆಗಳು, ಕೆರೆಗಳು ಮತ್ತು ಅವುಗಳ Buffer Zone ಪ್ರದೇಶಗಳ ಪೈಕಿ ಶೇ. 75% ರಷ್ಟು ಸರ್ಕಾರೀ ಪ್ರದೇಶಗಳನ್ನು ಕಬಳಿಸಿ, ಸುಮಾರು 2,300 ಕ್ಕೂ ಹೆಚ್ಚು ಬೃಹತ್ ವಸತಿ ಮತ್ತು ವಾಣಿಜ್ಯ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ. ಈ ಬೃಹತ್ ಹಗರಣದಲ್ಲಿ ಒಟ್ಟು 368 ಕ್ಕೂ ಹೆಚ್ಚು ಪ್ರತಿಷ್ಠಿತ ವಸತಿ / ವಾಣಿಜ್ಯ ಕಟ್ಟಡ ನಿರ್ಮಾಣ ಸಂಸ್ಥೆಗಳು, 29 Tech Park ಗಳು, ಬೃಹತ್ IT / BT ಕಂಪೆನಿಗಳು ಮತ್ತು 50 Malls & Multiplex ಸಂಸ್ಥೆಗಳು ಹಾಗೂ ಈ ಸಂಸ್ಥೆಗಳ ಪಾಲುದಾರರಾಗಿರುವ ಕೆಲವು ಭ್ರಷ್ಟ ರಾಜಕಾರಣಿಗಳ ಪಟ್ಟಿಯನ್ನು ದಾಖಲೆಗಳ ಸಹಿತ ನೀಡಲಾಗಿದೆ. ಅಲ್ಲದೇ, ಈ ಅಮೂಲ್ಯ ಪ್ರದೇಶಗಳನ್ನು ಕಬಳಿಸಲು ಸಹಕಾರ ನೀಡಿರುವ BDA ಮತ್ತು BBMP ಯ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನೂ ಸಹ ನೀಡಲಾಗಿದೆ. ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳು ಮತ್ತು ಅದರ Buffer Zone ಗಳನ್ನು ಒತ್ತುವರಿ ಮಾಡಿಕೊಂಡಿರುವ ಈ ಬೃಹತ್ ಹಗರಣವನ್ನು CID ತನಿಖೆಗೆ ವಹಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ತಮ್ಮನ್ನು ಆಗ್ರಹಿಸಲಾಗಿದೆ.ವಿ. ಸೂ: ಈ ದೂರಿನ ಪ್ರತಿಯೊಂದಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಲಗತ್ತಿಸಲಾಗಿದೆ.