Hubballi : ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ಶಿಫ್ಟ್ : ಸ್ಥಳಕ್ಕೆ ಸಿಎಂ ಬೊಮ್ಮಾಯಿ ಭೇಟಿ
ನಾನು ದರ್ಗಾ ವೀಕ್ಷಿಣೆ ಮಾಡಲು ಬಂದಿದ್ದೇನೆ..ದರ್ಗಾ ಶಿಪ್ಟ್ ಮಾಡೋ ಕಾರ್ಯಚಾರಣೆ ವೀಕ್ಷಿಸಲು ಬಂದಿದ್ದೇ. ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕಾರಿಸಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳ್ತೀನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ : ನಾನು ದರ್ಗಾ ವೀಕ್ಷಿಣೆ ಮಾಡಲು ಬಂದಿದ್ದೇನೆ.. ದರ್ಗಾ ಶಿಪ್ಟ್ ಮಾಡೋ ಕಾರ್ಯಚಾರಣೆ ವೀಕ್ಷಿಸಲು ಬಂದಿದ್ದೇ. ದರ್ಗಾದ ಮುಖ್ಯಸ್ಥರು ದರ್ಗಾ ಶಿಫ್ಟ್ ಮಾಡೋದಕ್ಕೆ ಸಹಕಾರಿಸಿದ್ದಾರೆ. ನಾನು ಅವರಿಗೆ ಧನ್ಯವಾದ ಹೇಳ್ತೀನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ಬೈರಿದೇವರಕೊಪ್ಪ ದರ್ಗಾಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಗಾಗಲೇ ಶಿಫ್ಟ್ ಮಾಡಿದ್ದಾರೆ, ಹೊಸ ಮಸೀದ್ ಕಟ್ಟೋಕೆ ತೀರ್ಮಾನ ಮಾಡಿದ್ದಾರೆ. ಜಾಗ ನೋಡಿದ್ರೆ ನಾನು ಅವರಿಗೆ ಸಹಾಯ ಮಾಡ್ತೀನಿ. ಇವತ್ತು ನಾಗರೀಕತೆ ಬೆಳದಿದೆ. ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ. ಆದ್ರೆ, ಅನಿವಾರ್ಯ. ಇದೇ ರಸ್ತೆಯಲ್ಲಿ 13 ದೇವಸ್ಥಾನ ಕೆಡವಿದ್ದೇವೆ. ನಾವು ಕೆಲವು ಸಲ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗತ್ತೆ. ರಾಜ್ಯದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಸೂಚನೆ ಪಾಲಿಸಬೇಕಾಗತ್ತೆ. ಆದಷ್ಟು ಉಳಿಸೋ ಪ್ರಯತ್ನ ಮೊದಲನೇಯದ್ದು, ಇರದೆ ಇದ್ರೆ ಶಾಂತಿಯತವಾಗಿ ಶಿಫ್ಟ್ ಮಾಡೋದು ಎರಡನೇಯದು ಡೆಮಾಲಿಶ್ ಮಾಡುವುದು. ಮೈಸೂರಲ್ಲಿ ದೇವಸ್ಥಾನಕ್ಕೆ ಪ್ರೊಟೆಕ್ಷನ್ ಮಾಡಲಾಗಿತ್ತು. ಎಲ್ಲಾ ಸಮಾಜಗಳ ಅಣ್ಣ ತಮ್ಮಂದಿರು ಇರೋಕೆ ಕ್ರಮ ಕೈಗೊಳ್ಳಲಾಗಿತ್ತು. ರಸ್ತೆ ಒಳಗೆ ಬಂದ ಎಲ್ಲ ದೇವಸ್ಥಾನ ತೆರವು ಆಗ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : BMTC ಪ್ರಯಾಣಿಕರ ಗಮನಕ್ಕೆ : ಬಸ್ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.