ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಯಲ್ಲಿ ಪಾಸಿಟಿವ್ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2,000 ಗಡಿಯನ್ನು ದಾಟಿದೆ. ಈ ವರ್ಷ ಇಲ್ಲಿಯವರೆಗೆ 2,194 ಪ್ರಕರಣಗಳು ದಾಖಲಾಗಿವೆ. BBMP ಹಂಚಿಕೊಂಡ ಮಾಹಿತಿಯ ಪ್ರಕಾರ, ಮಹದೇವಪುರ ವಲಯವು 610 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪೂರ್ವ (578) ಮತ್ತು ದಕ್ಷಿಣ (325) ವಲಯಗಳು ನಂತರದ ಸ್ಥಾನದಲ್ಲಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಚಾಮರಾಜನಗರದಲ್ಲಿ ಪತಿ ಅಬಕಾರಿ ಡಿಸಿ- ಪತ್ನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ


ಕರ್ನಾಟಕದಾದ್ಯಂತ ಇದುವರೆಗೆ 4,827 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಒಂದು ಸೇರಿದಂತೆ ಒಟ್ಟು ಆರು ಸಾವುಗಳು ಸಂಭವಿಸಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಶಂಕಿತ ಡೆಂಗ್ಯೂ ಪ್ರಕರಣಗಳು 1,05,283 (ಬಿಬಿಎಂಪಿ ಮಿತಿಯಲ್ಲಿ) ನಂತರ ಚಿಕ್ಕಮಗಳೂರು (512), ಮೈಸೂರು (479), ಮತ್ತು ಹಾವೇರಿ (463) ಜಿಲ್ಲೆಗಳಲ್ಲಿ ಕಂಡುಬಂದಿವೆ.


ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಡೆಂಗ್ಯೂ ಪರೀಕ್ಷಾ ದರಗಳನ್ನು ಬುಧವಾರ ನಿಗದಿ ಮಾಡಿದೆ. ಸರ್ಕಾರದ ಆದೇಶದ ಪ್ರಕಾರ, ಡೆಂಗ್ಯೂ ಎಲಿಸಾ ಎನ್ಎಸ್1 ಮತ್ತು ಐಜಿಎಂ ಪರೀಕ್ಷೆಗಳಿಗೆ 300 ರೂ.ಗೆ  ನಿಗದಿ ಮಾಡಿದೆ. ಎನ್ಎಸ್ 1, ಐಜಿಎಂ ಮತ್ತು ಐಜಿಜಿಗೆ ರಾಪಿಡ್ ಕಾರ್ಡ್ ಪರೀಕ್ಷೆ ಸೇರಿದಂತೆ ಸ್ಕ್ರೀನಿಂಗ್ ಪರೀಕ್ಷೆಗೆ 200 ರೂ. ನಿಗದಿ ಮಾಡಿದೆ. 


ಇದನ್ನೂ ಓದಿ : ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 120ಕ್ಕೂ ಹೆಚ್ಚು ಮಂದಿ ಬಲಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.