ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಡೆಂಘೀ :ಡೆಂಘೀಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ತೀವ್ರ ತಯಾರಿ
ಈ ಬಾರಿ ರಾಜ್ಯದಲ್ಲಿ ಡೆಂಘೀ ಕೇಸ್ ದಿನೇ ದಿನೇ ಹೆಚ್ಚುತ್ತಿದೆ.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ನೇಮಕ ಮಾಡಿರುವ ಸಿಬ್ಬಂದಿಗಳನ್ನ ಡಬಲ್ ಮಾಡಿ ಡೆಂಘೀ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ಡೆಂಘೀ ಫೀವರ್ ಭೀತಿ ಹುಟ್ಟಿಸುತ್ತಿದೆ.ನಿತ್ಯವೂ ಸೋಂಕಿತರ ಸಂಖ್ಯೆ ಏರಿಕೆಯತ್ತಾ ಹೋಗುತ್ತಿದೆ. ಪಾಲಿಕೆ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಜನರಿಗೆ ಎಚ್ಚರಿಕೆಯನ್ನೂ ನೀಡುತ್ತಿದೆ. ಡೆಂಘೀ ನಿಯಂತ್ರಣಕ್ಕೆ ಸರ್ಕಾರ ಸೇರಿ ಬಿಬಿಎಂಪಿ ಇನ್ನಿಲ್ಲದ ಕಸರತ್ತು ನಡೆಸಿದೆ.
ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುಗಳನ್ನ ವಿಸ್ತರಿಸುವ ಕೆಲಸ ಡೆಂಘೀ ಮಾಡುತ್ತಿದೆ. ಆರೋಗ್ಯ ಇಲಾಖೆಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡುತ್ತಿದೆ.ಈ ಮಹಾಮಾರಿ ಮೊದಲು ಮಕ್ಕಳನ್ನ ಟಾರ್ಗೆಟ್ ಮಾಡಿ ಮುನ್ನುಗ್ಗುತ್ತಿದೆ.ಇಲ್ಲಿವರೆಗೂ 2250 ಮಕ್ಕಳನ್ನ ಈಗಾಗಲೇ ತನ್ನ ಬಲೆಗೆ ಬೀಳಿಸಿದೆ.
ಇದನ್ನೂ ಓದಿ : ಮೌಢ್ಯಕ್ಕೆ ಸೆಡ್ಡು: ಮತ್ತೆ ಗಡಿಜಿಲ್ಲೆಗೆ ಭೇಟಿ ನೀಡಲಿದ್ದಾರೆ ಸಿಎಂ ಸಿದ್ದರಾಮಯ್ಯ
ಈ ಬಾರಿ ರಾಜ್ಯದಲ್ಲಿ ಡೆಂಘೀ ಕೇಸ್ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ನೇಮಕ ಮಾಡಿರುವ ಸಿಬ್ಬಂದಿಗಳನ್ನ ಡಬಲ್ ಮಾಡಿ ಡೆಂಘೀ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ. ನಗರದಲ್ಲಿರುವ ಒಂದೂ ಮನೆಯನ್ನ ಬಿಡದೆ ಆರೋಗ್ಯ ಇಲಾಖೆ ತಿಳಿಸಿರುವಂತೆ ಕ್ರಮಗಳನ್ನ ಕೈಗೊಂಡು ಮಾರಿ ಡೆಂಘೀ ಯಾತನೆ ಕೊನೆಗಾಣಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.
ಡೆಂಘೀ ಅಂಕಿ ಅಂಶ
ವಯಸ್ಸು ಕೇಸ್
0-1 ವರ್ಷ 135 ಕೇಸ್ ಪತ್ತೆ
1-18 ವರ್ಷ 2496 ಕೇಸ್ ಪತ್ತೆ
19-60 ವರ್ಷ 4534 ಕೇಸ್ ಪತ್ತೆ
ಒಟ್ಟು ಡೆಂಘೀ ಪ್ರಕರಣ: 7165
ಇದನ್ನೂ ಓದಿ : ದಲಿತರ ಬೆನ್ನಿಗೆ ಚೂರಿ ಹಾಕುತ್ತಿರುವ ಸಿದ್ದರಾಮಯ್ಯ: ಬಿಜೆಪಿ
ಒಟ್ಟಿನಲ್ಲಿ ದಿನ ಕಳೆದಂತೆ ಶರವೇಗದಲ್ಲಿ ಓಟಕಿತ್ತಿರುವ ಡೆಂಘೀ ಆರ್ಭಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಕೂಡ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಜೊತೆಗೆ ಸರ್ಕಾರ ಕೂಡ ಡೆಂಘೀ ನಿಯಂತ್ರಣದಲ್ಲಿ ತೊಡಗಿರುವ ಅಧಿಕಾರಿಗಳನ್ನ ಇನ್ನಷ್ಟು ಕ್ರಮ ವಹಿಸುವಂತೆ ಕಟ್ಟಪ್ಪಣೆ ಹೊರಡಿಸುವ ಅಗತ್ಯತೆ ಹೆಚ್ಚಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.